ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾಸ್ಟ್ಯಾಗ್‌ನಿಂದ ದಿನವೂ ಸರಾಸರಿ 100 ಕೋಟಿ ರೂ ಸಂಗ್ರಹ: ಗಡ್ಕರಿ

|
Google Oneindia Kannada News

ನವದೆಹಲಿ, ಮಾರ್ಚ್ 23: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಮೂಲಕ ಸಂಗ್ರಹಿಸುವ ಟೋಲ್‌ನ ದೈನಂದಿನ ಸರಾಸರಿ ಮೊತ್ತ 100 ಕೋಟಿ ರೂ ದಾಟಿದೆ ಎಂದು ಕೇಂದ್ರ ರಾಜ್ಯ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಂಸತ್‌ಗೆ ಸೋಮವಾರ ತಿಳಿಸಿದ್ದಾರೆ.

'2021ರ ಮಾರ್ಚ್ 16ರ ವೇಳೆಗೆ ಮೂರು ಕೋಟಿಗೂ ಅಧಿಕ ಫಾಸ್ಟ್ಯಾಗ್‌ಗಳನ್ನು ವಿತರಿಸಲಾಗಿದೆ. ಮಾರ್ಚ್ 1 ರಿಂದ ಮಾರ್ಚ್ 16ರವರೆಗೂ ಫಾಸ್ಟ್ಯಾಗ್ ಮೂಲಕ ಸಂಗ್ರಹಿಸುವ ದೈನಂದಿನ ಸರಾಸರಿ ಟೋಲ್ 100 ಕೋಟಿ ರೂಪಾಯಿಗೂ ಅಧಿಕವಾಗಿದೆ' ಎಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಇನ್ನು ಒಂದು ವರ್ಷದಲ್ಲಿ ಟೋಲ್ ಬೂತ್‌ಗಳೇ ಇರುವುದಿಲ್ಲ: ಗಡ್ಕರಿಇನ್ನು ಒಂದು ವರ್ಷದಲ್ಲಿ ಟೋಲ್ ಬೂತ್‌ಗಳೇ ಇರುವುದಿಲ್ಲ: ಗಡ್ಕರಿ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕವನ್ನು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ಮತ್ತು ಸಂಗ್ರಹದ ದೃಢೀಕರಣ) ನಿಯಮ 2008ಕ್ಕೆ ಅನುಗುಣವಾಗಿ ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ ಶುಲ್ಕ ಸಂಗ್ರಹವು ಮುಕ್ತ ಸುಂಕ ಪದ್ಧತಿಯಡಿ ನಡೆಯುತ್ತಿದೆ. ಆದರೆ ಪ್ರವೇಶ ನಿಯಂತ್ರಣವಿರುವ ಎಕ್ಸ್‌ಪ್ರೆಸ್‌ವೇ ಮತ್ತು ಹೈವೇಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಕೆ ಆಧಾರದಲ್ಲಿ ಬಳಕೆದಾರ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

 Average Daily FASTag Collection Crosses Rs 100 Crore: Union Minister Nitin Gadkari

ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989ಕ್ಕೆ ತಿದ್ದುಪಡಿ ತಂದು 2021ರ ಜನವರಿ 1ರಿಂದ ಎಲ್ಲ ಎಂ ಮತ್ತು ಎನ್ ವರ್ಗಗಳಲ್ಲಿ ಫಾಸ್ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ. 'ಎಂ' ವರ್ಗವು ಪ್ರಯಾಣಿಕರನ್ನು ಕರೆದೊಯ್ಯುವ ಕನಿಷ್ಠ ನಾಲ್ಕು ಚಕ್ರಗಳ ಮೋಟಾರ್ ವಾಹನ ಮತ್ತು 'ಎನ್' ವರ್ಗವು ಸರಕುಗಳನ್ನು ಸಾಗಿಸುವ , ಜತೆಗೆ ಪ್ರಯಾಣಿಕರನ್ನೂ ಕರೆದೊಯ್ಯಬಹುದಾದ ಕನಿಷ್ಠ ನಾಲ್ಕು ಚಕ್ರದ ವಾಹನಗಳೆಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

English summary
Average daily FASTag collection crosses Rs 100 crore: Union Minister Nitin Gadkari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X