ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾದಿಂದ ಭವಿಷ್ಯದ ಸುಗಮ ಸಾರಿಗೆ ವ್ಯವಸ್ಥೆ ಪ್ರದರ್ಶನ

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 8: 150 ವರ್ಷಗಳ ಇತಿಹಾಸವಿರುವ ಟಾಟಾ ಮೋಟರ್ಸ್ ಭಾರತ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಕೈಜೋಡಿಸಿದೆ. ಇದಕ್ಕಾಗಿ 'ಸ್ಮಾರ್ಟ್ ಮೊಬಿಲಿಟಿ, ಸ್ಮಾರ್ಟ್ ಸಿಟೀಸ್' ಎಂಬ ಪರಿಕಲ್ಪನೆಯ ಭವಿಷ್ಯದ ಯೋಜನೆಯನ್ನು ನವದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್ ಪೋ- ದಿ ಮೋಟರ್ ಶೋ 2018 ರಲ್ಲಿ ಘೋಷಿಸಿದೆ.

ತನ್ನ ಗ್ರಾಹಕರಿಗೆ ಭವಿಷ್ಯದಲ್ಲಿ ಅನುಕೂಲತೆ, ಸುರಕ್ಷತೆ, ಭದ್ರತೆ ಮತ್ತು ಸಮರ್ಥತೆಯ ಸಾರಿಗೆ ವ್ಯವಸ್ಥೆಯನ್ನು ಹೇಗೆ ಕಲ್ಪಿಸುತ್ತೇವೆ ಎಂಬುದರ ಬಗ್ಗೆ ಟಾಟಾ ಮೋಟರ್ಸ್ ತನ್ನ ಸಾಮಥ್ರ್ಯವನ್ನು ಇಲ್ಲಿ ಪ್ರದರ್ಶಿಸುತ್ತಿದೆ.

ಪ್ರಯಾಣಿಕರ ವಾಹನಗಳು ಮತ್ತು ವಾಣಿಜ್ಯ ವಾಹನಗಳ ವ್ಯವಹಾರದಲ್ಲಿ ಟಾಟಾ ಮೋಟರ್ಸ್ ತನ್ನ ವಿಶಿಷ್ಟವಾದ ಸ್ಥಾನದಲ್ಲಿದ್ದು, ಈ ಮೂಲಕ ಭವಿಷ್ಯದ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ತನ್ನದೇ ಆದ ಕೊಡುಗೆ ನೀಡಲಿದೆ. ಈ ಮೂಲಕ ಮಾರಾಟದಿಂದ ಗ್ರಾಹಕರವರೆಗೆ ಉತ್ತಮವಾದ ಸೇವೆಯನ್ನು ಒದಗಿಸಲಿದೆ.

ಸಾರ್ವಜನಿಕ ಸಾರಿಗೆಯಿಂದ ವೈಯಕ್ತಿಕ ಕಾರುಗಳವರೆಗೆ, ಅಂತಿಮ ಹಂತದ ಮೈಲುಗಲ್ಲಿನಿಂದ ಬಿಆರ್‍ಟಿಎಸ್‍ವರೆಗೆ, ತುರ್ತು ನಿಗಾ ವಾಹನಗಳಿಂದ ವಾಣಿಜ್ಯ ಬಳಕೆಯ ವಾಹನಗಳವರೆಗೆ, ಪರಿಸರಸ್ನೇಹಿ ಮತ್ತು ಸುಸ್ಥಿರ ಪರಿಹಾರದಿಂದ ರೋಮಾಂಚನಕಾರಿ ಚಾಲನೆ ಮಾಡಬಹುದಾದ ವಾಹನಗಳವರೆಗೆ ಟಾಟಾ ಮೋಟರ್ಸ್ ಗ್ರಾಹಕರ ಅಭಿರುಚಿಗೆ ತಕ್ಕಂತಹ ವಾಹನಗಳನ್ನು ತಯಾರಿಸುತ್ತಾ ಬರುತ್ತಿದೆ.

ಎರಡು ಆಕರ್ಷಕವಾದ ನಾವೀನ್ಯತೆ

ಎರಡು ಆಕರ್ಷಕವಾದ ನಾವೀನ್ಯತೆ

ಪ್ರಯಾಣಿಕರ ವಾಹನಗಳ ವಿಭಾಗದಲ್ಲಿ ಎರಡು ವಿಧದ ವಾಸ್ತುಶಿಲ್ಪದ ಕಾರ್ಯತಂತ್ರಗಳನ್ನು ಮತ್ತು ಎರಡು ಆಕರ್ಷಕವಾದ ನಾವೀನ್ಯತೆಗಳನ್ನು ಜಾಗತಿಕ ಮಟ್ಟದಲ್ಲಿ ನೀಡಿದೆ. ಅವುಗಳೆಂದರೆ

ಆಪ್ಟಿಮಲ್ ಮಾಡ್ಯುಲರ್ ಎಫಿಸಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್' ವಾಸ್ತುಶಿಲ್ಪದೊಂದಿಗೆ ಎಚ್5ಎಕ್ಸ್ ಕಾನ್ಸೆಪ್ಟ್'ನ 5 ಸೀಟುಗಳನ್ನೊಳಗೊಂಡ ಎಸ್‍ಯುವಿ ಮೈಲುಗಲ್ಲನ್ನು ಪುನರ್ ಸ್ಥಾಪಿಸಲು ಸಿದ್ಧವಾಗಿದ್ದರೆ, ಪ್ರೀಮಿಯಂ ಹ್ಯಾಚ್ ಬ್ಯಾಕ್ ನ ಏಜೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್'(ಎಎಲ್ ಎಫ್‍ಎ-ಎಆರ್ ಸಿ) ವಿನ್ಯಾಸ ಹೊಂದಿದ 45ಎಕ್ಸ್ ಕಾನ್ಸೆಪ್ಟ್' ವಾಹನ ಪ್ರಿಯರಿಗೆ ಮುದ ನೀಡಲು ಸಿದ್ಧವಾಗಿದೆ.

ಟಾಟಾ ಇಂಟ್ರಾವನ್ನು ಮಾರುಕಟ್ಟೆಗೆ ಲೋಕಾರ್ಪಣೆ

ಟಾಟಾ ಇಂಟ್ರಾವನ್ನು ಮಾರುಕಟ್ಟೆಗೆ ಲೋಕಾರ್ಪಣೆ

ಇನ್ನು ವಾಣಿಜ್ಯ ವಾಹನಗಳ(ಸಿವಿ) ವಿಭಾಗದಲ್ಲಿ ಹೊಚ್ಚ ಹೊಸದಾದ ಟಾಟಾ ಇಂಟ್ರಾ ಸ್ಟೈಲಿಶ್ ಆಗಿದ್ದು, ಹಲವು 7 ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಎಸ್‍ಯುವಿ ವಿಭಾಗದಲ್ಲಿ ಹೊಸ ಭಾಷ್ಯ ಬರೆಯಲಿರುವ ಕಾಂಪ್ಯಾಕ್ಟ್ ಟ್ರಕ್ ಅನ್ನು ಬಿಡುಗಡೆ ಮಾಡಲಾಗಿದೆ. ಬಾಲಿವುಡ್‍ನ ಸೂಪರ್ ಸ್ಟಾರ್ ಮತ್ತು ಟಾಟಾ ಮೋಟರ್ಸ್ ನ ವಾಣಿಜ್ಯ ವಾಹನಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಅಕ್ಷಯ್ ಕುಮಾರ್ ಅವರು ಈ ವಿನೂತನವಾದ ಟಾಟಾ ಇಂಟ್ರಾವನ್ನು ಮಾರುಕಟ್ಟೆಗೆ ಲೋಕಾರ್ಪಣೆ ಮಾಡಿದರು.

ಟಾಟಾ ಮೋಟರ್ಸ್ ವಿನ್ಯಾಸದ 'ಇಂಪ್ಯಾಕ್ಟ್ 2.0'

ಟಾಟಾ ಮೋಟರ್ಸ್ ವಿನ್ಯಾಸದ 'ಇಂಪ್ಯಾಕ್ಟ್ 2.0'

ಇದೇ ವೇಳೆ, 30 ಟನ್ ಭಾರ ಹೊರುವ ಸಾಮರ್ಥ್ಯದ 6- ಆಕ್ಸಲ್ ಟ್ರಕ್ ಆದ ಸಿಗ್ನ 4323, ಅಲ್ಟ್ರಾ ಟಿ.7 ಅನ್ನೂ ಪ್ರದರ್ಶನಕ್ಕೆ ಇಡಲಾಗಿದೆ. ಈ ಅಲ್ಟ್ರಾ ಟಿ.7 ವಾಹನ ಎಲ್‍ಸಿವಿ ಆಗಿದ್ದು, ಅಲ್ಟ್ರಾ ಪ್ಲಾಟ್‍ಫಾರ್ಮ್ ಅನ್ನು ಒಳಗೊಂಡಿದ್ದು, 1.9 ಮೀಟರ್‍ನಷ್ಟು ವಿಶಾಲವಾದ ಕ್ಯಾಬಿನ್ ಅನ್ನು ಒಳಗೊಂಡಿದೆ.

ಇದಲ್ಲದೇ, ಟಾಟಾ ಮೋಟರ್ಸ್ ಹೊಸ ವಿನ್ಯಾಸದ 'ಇಂಪ್ಯಾಕ್ಟ್ 2.0' ಪಿವಿ, ಸಿವಿ ವಾಹನಗಳನ್ನು ಬಿಡುಗಡೆ ಮಾಡಿದ್ದು, ಪ್ರೀಮಿಯಂ ಟಫ್ ಆಗಿದೆ. ಈ ವಾಹನಗಳಲ್ಲಿ ಸಾಮಥ್ರ್ಯ ಮತ್ತು ಗುಣಮಟ್ಟಗಳೆರಡೂ ಮೇಳೈಸಿವೆ.

ದೇಶದ ಭವಿಷ್ಯದ ಸಾರಿಗೆ ವ್ಯವಸ್ಥೆ

ದೇಶದ ಭವಿಷ್ಯದ ಸಾರಿಗೆ ವ್ಯವಸ್ಥೆ

ನಮ್ಮ ಭವಿಷ್ಯಕ್ಕೆ ಸಿದ್ಧವಾಗಿರುವ ಒಮೇಗಾ-ಎಆರ್ ಸಿ ಮತ್ತು ಎಎಲ್ ಎಫ್‍ಎ-ಎಆರ್ ಸಿ ಪಿವಿ ವಾಸ್ತುಶಿಲ್ಪವಲ್ಲದೇ ಎಚ್5ಎಕ್ಸ್, 45ಎಕ್ಸ್ ಪರಿಕಲ್ಪನೆಗಳು, ಹೊಚ್ಚ ಹೊಸದಾದ ಎಲ್‍ಸಿವಿ, ಟಾಟಾ ಇಂಟ್ರಾ ವಾಹನಗಳು ದೇಶದ ಭವಿಷ್ಯದ ಸಾರಿಗೆ ವ್ಯವಸ್ಥೆಗೆ ಒಂದು ರೂಪ ಕೊಡಲಿವೆ.

ಈ ಮೂಲಕ ಈ ವಾಹನಗಳು ಟಾಟಾ ಮೋಟರ್ಸ್ ನ ಚಿತ್ರಣವನ್ನೇ ಬದಲಾಯಿಸಬಲ್ಲವಾಗಿವೆ. ಸುದೀರ್ಘವಾದ ಅನುಭವ ಮತ್ತು ಪರಿಹಾರಗಳಿಂದಾಗಿ ಟಾಟಾ ಮೋಟರ್ಸ್ ಭಾರತೀಯ ಆಟೋಮೋಟಿವ್ ಉದ್ಯಮಕ್ಕೆ ಶಕ್ತಿ ತುಂಬಲಿದೆ'' ಎಂದು ಹೇಳಿದರು.

ಈ ಆಟೋ ಎಕ್ಸ್ ಪೋದಲ್ಲಿ ಟಾಟಾ ಮೋಟರ್ಸ್ 6000 ಚದರ ಮೀಟರ್‍ನಷ್ಟು ವಿಶಾಲವಾದ ಜಾಗದಲ್ಲಿ ತನ್ನ ಮಳಿಗೆಯನ್ನು ಸ್ಥಾಪಿಸಿದೆ

#ಸ್ಮಾರ್ಟ್‍ಮೊಬಿಲಿಟಿ

#ಸ್ಮಾರ್ಟ್‍ಮೊಬಿಲಿಟಿ

ಇದಕ್ಕೆ #ಸ್ಮಾರ್ಟ್‍ಮೊಬಿಲಿಟಿ ಎಂದು ಹೆಸರಿಡಲಾಗಿದ್ದು, ಅರ್ಬನ್ ಹೈ ಡೆನ್ಸಿಟಿ ರೆಸಿಡೆನ್ಷಿಯಲ್ ಝೋನ್, ಸ್ಪೋರ್ಟ್ಸ್ ಝೋನ್, ಸ್ಮಾರ್ಟ್ ಎನರ್ಜಿ ಝೋನ್, ಸೆಮಿ-ಅರ್ಬನ್ ಝೋನ್, ಇಂಟರ್ ಅಂಡ್ ಇಂಟ್ರಾಸಿಟಿ ಝೋನ್ ಮತ್ತು ರೈಸಿಂಗ್ ಸಿಟಿ ಝೋನ್ ಎಂದು ಹಲವು ವಿಭಾಗಗಳಾಗಿ ವಿಂಗಡಿಸಿದೆ. ಈ ಎಲ್ಲಾ ವಿಭಾಗಗಳಲ್ಲಿ ಗ್ರಾಹಕರಿಗೆ ಒಪ್ಪುವಂತಹ ವಾಹನಗಳನ್ನು ಪ್ರದರ್ಶಿಸಲಾಗಿದ್ದು, ಗ್ರಾಹಕರು ತಮ್ಮ ನೆಚ್ಚಿನ ವಾಹನದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಹೊಸ ಅನುಭವ ಪಡೆಯಬಹುದಾಗಿದೆ.

ಅರ್ಬನ್ ಹೈ-ಡೆನ್ಸಿಟಿ ರೆಸಿಡೆನ್ಷಿಯಲ್ ಝೋನ್‍ನಲ್ಲಿ ಟಾಟಾ ಮೋಟರ್ಸ್ ಅತ್ಯಂತ ಬೇಡಿಕೆಯಲ್ಲಿ ಮಾರಾಟವಾಗುತ್ತಿರುವ ಕಾಂಪ್ಯಾಕ್ಟ್ ಎಸ್‍ಯುವಿಯಾದ ನೆಕ್ಸಾನ್ ಏರೋ ಮತ್ತು ಸದ್ಯದಲ್ಲೇ ಬಿಡುಗಡೆಯಾಗಲಿರುವ ನೆಕ್ಸಾನ್ ಎಎಂಟಿಯನ್ನು ಪ್ರದರ್ಶನಕ್ಕೆ ಇಟ್ಟಿದೆ

ಎಲೆಕ್ಟ್ರಿಕ್ ವಾಹನಗಳನ್ನು ಸ್ಮಾರ್ಟ್ ಎನರ್ಜಿ ಝೋನ್

ಎಲೆಕ್ಟ್ರಿಕ್ ವಾಹನಗಳನ್ನು ಸ್ಮಾರ್ಟ್ ಎನರ್ಜಿ ಝೋನ್

2030 ರ ವೇಳೆಗೆ ಎಲ್ಲಾ ವಾಹನಗಳನ್ನು ವಿದ್ಯುದ್ದೀಕರಣ ಮಾಡಬೇಕೆಂಬ ಭಾರತ ಸರ್ಕಾರದ ದೂರದೃಷ್ಟಿಯ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳನ್ನು ಸ್ಮಾರ್ಟ್ ಎನರ್ಜಿ ಝೋನ್ ವಿಭಾಗದಲ್ಲಿ ಆರು ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ವಾಹನಗಳು ವೈಯಕ್ತಿಕ ಮತ್ತು ಸಾರ್ವಜನಿಕ ಪ್ರಯಾಣಕ್ಕೆ ನೆರವಾಗಲಿವೆ.

ಸ್ಮಾರ್ಟ್ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪೂರಕವಾಗಿ ತಯಾರಿಸಲಾಗುತ್ತಿರುವ 12 ಎಂ ಎಲೆಕ್ಟ್ರಿಕ್ ಬಸ್ ಹಾಗೂ ವೈಯಕ್ತಿಕ ಪ್ರಯಾಣಕ್ಕಾಗಿ ಮ್ಯಾಜಿಕ್ ಇವಿ ಮತ್ತು ಐರಿಸ್ ಇವಿ, ಟಿಯಾಗೋ ಇವಿ, ಟಿಗೋರ್ ಇವಿ ಮತ್ತು ರೇಸ್‍ಮೋ ಇವಿ ವಾಹನಗಳನ್ನು ಇಲ್ಲಿ ಪ್ರಮುಖ ಆಕರ್ಷಣೆಯಾಗಿವೆ. ಈ ಮೂಲಕ ಸಾರ್ವಜನಿಕರು ಇಂತಹ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಮೂಲಕ ಭವಿಷ್ಯದಲ್ಲಿ ಸುಸ್ಥಿರ ಸಾರಿಗೆ ವ್ಯವಸ್ಥೆಗೆ ಕಾರಣರಾಗಬಹುದಾಗಿದೆ.

English summary
Tata Motors showcased its prowess in smart mobility at the Auto Expo 2018, keeping in line with government of India’s vision to build smart cities of the future. The automaker announced the global premiere of next generation passenger and commercial vehicles, and its new design language ‘IMPACT 2.0’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X