ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕಾನೂನು: ಮಾಧ್ಯಮ ಸಂಸ್ಥೆಗಳಿಗೆ ಗೂಗಲ್, ಫೇಸ್‌ಬುಕ್‌ ಹಣ ನೀಡಬೇಕು

|
Google Oneindia Kannada News

ಸಿಡ್ನಿ, ಫೆಬ್ರವರಿ 25: ಸ್ಥಳೀಯ ಸುದ್ದಿ ವಿಷಯಗಳಿಗೆ ಜಾಗತಿಕ ಡಿಜಿಟಲ್ ದಿಗ್ಗಜ ಸಂಸ್ಥೆಗಳು ಹಣ ಪಾವತಿ ಮಾಡುವಂತಹ ಮಹತ್ವದ ಕಾನೂನನ್ನು ಆಸ್ಟ್ರೇಲಿಯಾ ಸಂಸತ್ತು ಅಂಗೀಕರಿಸಿದೆ. ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬದಲಾವಣೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ಸರ್ಕಾರ ತರಲು ಉದ್ದೇಶಿಸಿದ್ದ ಈ ಕಾನೂನಿನ ವಿರುದ್ಧ ಫೇಸ್‌ಬುಕ್ ಮತ್ತು ಗೂಗಲ್ ಸಂಸ್ಥೆಗಳು ಕೊನೆಯವರೆಗೂ ತೀವ್ರ ಹೋರಾಟ ನಡೆಸಿದ್ದವು. ತಾಂತ್ರಿಕ ದಿಗ್ಗಜ ಸಂಸ್ಥೆಗಳು ಸುದ್ದಿಗಳನ್ನು ಹಂಚಿಕೊಳ್ಳಲು ಸ್ಥಳೀಯ ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿಸಲು ಒಪ್ಪಿಕೊಳ್ಳಬೇಕಿದೆ.

ವಿದ್ಯುನ್ಮಾನ ಮಾಧ್ಯಮಗಳಿಗೆ ನಿಯಂತ್ರಣ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆವಿದ್ಯುನ್ಮಾನ ಮಾಧ್ಯಮಗಳಿಗೆ ನಿಯಂತ್ರಣ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ

ಹೊಸ ಕಾನೂನಿನ ಪ್ರಕಾರ ಗೂಗಲ್ ಹಾಗೂ ಫೇಸ್‌ಬುಕ್ ಸಂಸ್ಥೆಗಳು ಸ್ಥಳೀಯ ವಿಷಯಗಳನ್ನು ಪಡೆದುಕೊಳ್ಳಲು ಲಕ್ಷಾಂತರ ಮಿಲಿಯನ್ ಡಾಲರ್ ಹಣ ಹೂಡಿಕೆ ಮಾಡಬೇಕಾಗಲಿದೆ. ಇದು ಜಗತ್ತಿನಾದ್ಯಂತ ಇತರೆ ದೇಶಗಳಿಗೂ ಮಾದರಿ ಕ್ರಮವಾಗುವ ಸಾಧ್ಯತೆ ಇರುವುದರಿಂದ ಸರ್ಕಾರಗಳು ಹಾಗೂ ತಾಂತ್ರಿಕ ಸಂಸ್ಥೆಗಳ ನಡುವೆ ತೀವ್ರ ಸಂಘರ್ಷ ಏರ್ಪಸುವ ಸಾಧ್ಯತೆ ಇದೆ. ಮುಂದೆ ಓದಿ.

ಗೂಗಲ್ ಮತ್ತು ಫೇಸ್‌ಬುಕ್

ಗೂಗಲ್ ಮತ್ತು ಫೇಸ್‌ಬುಕ್

ತನ್ನ 'ಶೋಕೇಸ್' ಉತ್ಪನ್ನದಲ್ಲಿ ಗೋಚರವಾಗುವ ಸುದ್ದಿ ವಿಚಾರಗಳಿಗೆ ಗೂಗಲ್ ಹಣ ಪಾವತಿಸಬೇಕಾಗಲಿದೆ. ಹಾಗೆಯೇ ಫೇಸ್‌ಬುಕ್ ತನ್ನ 'ನ್ಯೂಸ್' ವಿಭಾಗದಲ್ಲಿ ಪ್ರಕಟವಾಗುವ ಸುದ್ದಿಗಳ ಪೂರೈಕೆದಾರರಿಗೆ ಹಣ ಪಾವತಿಸಬೇಕಾಗಲಿದೆ. ಈ ಕಾನೂನು ಆಸ್ಟ್ರೇಲಿಯಾದಲ್ಲಿ ಕೆಲವು ತಿಂಗಳ ಬಳಿಕ ಜಾರಿಯಾಗುವ ನಿರೀಕ್ಷೆಯಿದೆ.

ಉಚಿತ ಬಳಕೆ ಮೂಲಕ ಲಾಭ

ಉಚಿತ ಬಳಕೆ ಮೂಲಕ ಲಾಭ

ಆನ್‌ಲೈನ್‌ನಲ್ಲಿ ಜಾಹೀರಾತು ಪ್ರಕಟಿಸುವುದರಲ್ಲಿ ಪ್ರಾಬಲ್ಯ ಮೆರೆಯುವ ತಾಂತ್ರಿಕ ಕಂಪೆನಿಗಳು, ಸಾಂಪ್ರದಾಯಿಕ ಸುದ್ದಿ ಸಂಸ್ಥೆಗಳಿಂದ ಉಚಿತವಾಗಿ ಸುದ್ದಿಗಳನ್ನು ಪಡೆದುಕೊಂಡು ಲಾಭ ಮಾಡಿಕೊಳ್ಳುತ್ತಿವೆ ಎಂದು ಸರ್ಕಾರದ ನಿಯಂತ್ರಕ ಇಲಾಖೆಗಳು ಆರೋಪಿಸಿವೆ. ಈ ಕಾನೂನು ತಮ್ಮ ವಹಿವಾಟಿನ ಮಾದರಿಗೆ ದೊಡ್ಡ ಬೆದರಿಕೆಯಾಗಲಿವೆ ಎಂದು ಆತಂಕಗೊಂಡಿರುವ ಕಂಪೆನಿಗಳು, ವ್ಯಾಪಕ ವಿರೋಧ ವ್ಯಕ್ತಪಡಿಸಿವೆ.

'ಬಿಬಿಸಿ' ಬ್ಯಾನ್ ಮಾಡಿದ ಚೀನಾ, ಕಾರಣವೇನು ಗೊತ್ತಾ..?'ಬಿಬಿಸಿ' ಬ್ಯಾನ್ ಮಾಡಿದ ಚೀನಾ, ಕಾರಣವೇನು ಗೊತ್ತಾ..?

ಮಾಧ್ಯಮಗಳ ಜತೆ ಒಪ್ಪಂದ ಕಡ್ಡಾಯ

ಮಾಧ್ಯಮಗಳ ಜತೆ ಒಪ್ಪಂದ ಕಡ್ಡಾಯ

ಕಂಪೆನಿಗಳು ಮಾಧ್ಯಮ ಸಂಸ್ಥೆಗಳ ಜತೆಗೆ ವ್ಯವಹಾರ ನಡೆಸುವುದು ಕಡ್ಡಾಯ ಎಂಬ ನಿಯಮಕ್ಕೆ ಹಾಗೂ ಹಣಕಾಸು ಒಪ್ಪಂದದ ಹೇರಿಕೆಯ ಹಕ್ಕನ್ನು ಆಸ್ಟ್ರೇಲಿಯಾದ ಸ್ವತಂತ್ರ ಸಂಸ್ಥೆಯೊಂದಕ್ಕೆ ನೀಡಿರುವುದು ಹೆಚ್ಚಿನ ವಿರೋಧಕ್ಕೆ ಒಳಗಾಗಿದೆ. ಸರ್ಕಾರದ ತಿದ್ದುಪಡಿ ವೇಳೆ ಈ ನಿಯಮಗಳಲ್ಲಿ ನಾಟಕೀಯ ರೀತಿಯಲ್ಲಿ ಕಡಿತ ಮಾಡಲಾಗಿದೆ.

ಮಾಧ್ಯಮ ಉಳಿಸುವ ಪ್ರಯತ್ನ

ಮಾಧ್ಯಮ ಉಳಿಸುವ ಪ್ರಯತ್ನ

ನ್ಯೂಸ್ ಮೀಡಿಯಾ ಆಂಡ್ ಡಿಜಿಟಲ್ ಪ್ಲಾಟ್‌ಫಾರ್ಮ್ಸ್ ಮ್ಯಾಂಡೇಟರಿ ಬಾರ್ಗೈನಿಂಗ್ ಕೋಡ್ ಎಂಬ ಈ ಕಾನೂನು ಆಸ್ಟ್ರೇಲಿಯಾದಲ್ಲಿನ ಸಾರ್ವಜನಿಕ ಹಿತಾಸಕ್ತಿ ಪತ್ರಿಕೋದ್ಯಮದ ಉಳಿವಿಗೆ ನೆರವಾಗುವಂತೆ ಅವರು ಸೃಷ್ಟಿಸುವ ವಿಷಯಗಳಿಗೆ ನ್ಯಾಯೋಚಿತ ರೀತಿಯಲ್ಲಿ ಸಂಭಾವನೆಯನ್ನು ಸೃಷ್ಟಿಸುವಂತೆ ಮಾಡುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಸಂಬಂಧ ಒಪ್ಪಂದಗಳನ್ನು ಮಾಡಿಕೊಳ್ಳಲು ಗೂಗಲ್ ಮತ್ತು ಫೇಸ್‌ಬುಕ್ ಸಂಸ್ಥೆಗಳಿಗೆ ಎರಡು ತಿಂಗಳು ಹೆಚ್ಚುವರಿ ಸಮಯ ನೀಡಲಾಗಿದೆ.

ಸಾವಿರಾರು ಉದ್ಯೋಗ ನಷ್ಟ

ಸಾವಿರಾರು ಉದ್ಯೋಗ ನಷ್ಟ

ಈಗಾಗಲೇ ಗೂಗಲ್ ಸಂಸ್ಥೆಯು ರುಪರ್ಟ್ ಮುರ್ಡೋಕ್ ಅವರ ನ್ಯೂಸ್ ಕಾರ್ಪ್ ಮತ್ತು ನೈನ್ ಎಂಟರ್‌ಟೈನ್‌ಮೆಂಟ್ ಸೇರಿದಂತೆ ವಿವಿಧ ಸ್ಥಳೀಯ ಮಾಧ್ಯಮ ಕಂಪೆನಿಗಳೊಂದಿಗೆ ಲಕ್ಷಾಂತರ ಡಾಲರ್ ಮೊತ್ತದ ಒಪ್ಪಂದಗಳನ್ನು ಮಾಡಿಕೊಂಡಿದೆ. ಡಿಜಿಟಲ್ ಸಂಸ್ಥೆಗಳಿಗೆ ಜಾಹೀರಾತು ಆದಾಯ ಹರಿದುಹೋದ ಕಾರಣ ಆಸ್ಟ್ರೇಲಿಯಾದಲ್ಲಿ ಕಳೆದ ದಶಕದಲ್ಲಿ ಅನೇಕ ಮಾಧ್ಯಮ ಸಂಸ್ಥೆಗಳು ನಷ್ಟದಿಂದ ಮುಚ್ಚಿಹೋಗಿದ್ದು, ಸಾವಿರಾರು ಮಾಧ್ಯಮ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

English summary
Australia's parliament passed a law requiring Google and Facebook to pay for local news content.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X