• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

45 ದಿನ ಇಂಟರ್ನ್ ಶಿಪ್, ದಿನಕ್ಕೆ 500 ಸಂಬಳ, ವಿದ್ಯಾರ್ಥಿಗಳೇ ಗಮನಿಸಿ

|

ಬೆಂಗಳೂರು, ಅಕ್ಟೋಬರ್ 11: ಮುಂಬರುವ ಹಬ್ಬದ ಸೀಸನ್ ಮತ್ತು ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ತನ್ನ ಸಪ್ಲೈ ಚೇನ್ ನಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 2 ನೇ ಶ್ರೇಣಿ ಮತ್ತು ನಂತರದ ನಗರಗಳ ಪದವಿಪೂರ್ವ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಕಾರ್ಯಕ್ರಮವನ್ನು ಫ್ಲಿಪ್ ಕಾರ್ಟ್ ಪರಿಚಯಿಸಿದೆ. 45 ದಿನಗಳ ಪಾವತಿ ''ಲಾಂಚ್ ಪ್ಯಾಡ್'' ಇಂಟರ್ನ್ ಶಿಪ್ ಕಾರ್ಯಕ್ರಮ ಇದಾಗಿದ್ದು, ಸಪ್ಲೈ ಚೇನ್ ನಿರ್ವಹಣೆಯ ಕೌಶಲ್ಯಗಳನ್ನು ಕಲಿಯುವುದು ಮತ್ತು ಇ-ಕಾಮರ್ಸ್ ಉದ್ಯಮಕ್ಕೆ ತರಬೇತಿ ಹೊಂದಿದ ವೃತ್ತಿಪರರನ್ನೊಳಗೊಂಡ ಪರಿಸರ ವ್ಯವಸ್ಥೆಯನ್ನು ಸೃಷ್ಟಿ ಮಾಡುವುದು ಇದರ ಉದ್ದೇಶವಾಗಿದೆ.

ವಿದ್ಯಾರ್ಥಿಗಳು ಫ್ಲಿಪ್ ಕಾರ್ಟ್ ನ ಸಪ್ಲೈ ಚೇನ್ ನಲ್ಲಿ ಕೆಲಸ ಮಾಡಲು ಪೂರಕವಾಗಿ ಲಾಂಚ್ ಪ್ಯಾಡ್ ಅನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೇ, ಇ-ಕಾಮರ್ಸ್ನ ಪ್ರಮುಖ ವಿಧಾನಗಳನ್ನು ಕಲಿಯಲು ನೆರವಾಗುತ್ತದೆ. ವಿವಿಧ ಅಗತ್ಯ ಸಪ್ಲೈ ಚೇನ್ ಪಾತ್ರಗಳ ನಿರ್ವಹಣೆಯಲ್ಲಿ ಭಾರತದ ಭವಿಷ್ಯದ ಉದ್ಯೋಗ ಶಕ್ತಿಯನ್ನು ರೂಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಇದು ದೀರ್ಘಾವಧಿಯಲ್ಲಿ ಅರ್ಹವಾದ, ಉತ್ತಮ ತರಬೇತಿ ಹೊಂದಿದ ಮತ್ತು ಕೌಶಲ್ಯಭರಿತ ವೃತ್ತಿಪರರನ್ನು ರೂಪಿಸಲು ಇದು ಸಹಕಾರಿಯಾಗುತ್ತದೆ.

ದಿ ಬಿಗ್ ಬಿಲಿಯನ್‌ ಡೇಸ್‌ ಪರ ಕೊಹ್ಲಿ, ಸುದೀಪ್ ಪ್ರಚಾರ

ಈ ದಿಸೆಯಲ್ಲಿ ಫ್ಲಿಪ್ ಕಾರ್ಟ್ ಬಿನೋಲಾ(ಹರ್ಯಾಣ), ಭಿವಾಂಡಿ(ಮಹಾರಾಷ್ಟ್ರ), ಉಲುಬೇರಿಯಾ ಮತ್ತು ಡಾಂಕುನಿ (ಪಶ್ಚಿಮ ಬಂಗಾಳ), ಮಾಲೂರು (ಕರ್ನಾಟಕ), ಮೇಡ್ಚಲ್(ತೆಲಂಗಾಣ) ಸೇರಿದಂತೆ ಒಟ್ಟು 21 ಪಟ್ಟಣಗಳ ಶಿಕ್ಷಣ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸುತ್ತಿದೆ.

ಫುಲ್ ಫಿಲ್ ಮೆಂಟ್ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ

ಫುಲ್ ಫಿಲ್ ಮೆಂಟ್ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ

ಆಯ್ಕೆಯಾದ ವಿದ್ಯಾರ್ಥಿಗಳನ್ನು ಫ್ಲಿಪ್ ಕಾರ್ಟ್ ತನ್ನ ಫುಲ್ ಫಿಲ್ ಮೆಂಟ್ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಲಿದೆ. ಮುಂಬರುವ ಹಬ್ಬದ ಋತುವಿನಲ್ಲಿ ಮತ್ತು ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ವರೆಗೆ ಈ ಇಂಟರ್ನ್ ಶಿಪ್ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಇ-ಕಾಮರ್ಸ್ ಕಾರ್ಯಾಚರಣೆಗಳ ಉನ್ನತ ಮಟ್ಟದ ಒಳನೋಟಗಳನ್ನು ತಿಳಿಸಿಕೊಡಲಿದೆ.

ಸಪ್ಲೈ ಚೇನ್ ನಿರ್ವಹಣೆ ತರಬೇತಿ

ಸಪ್ಲೈ ಚೇನ್ ನಿರ್ವಹಣೆ ತರಬೇತಿ

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಪ್ಲೈ ಚೇನ್ ನಿರ್ವಹಣೆಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ತರಬೇತಿಯನ್ನು ನೀಡಲಾಗುತ್ತದೆ. ಈ ವೇಳೆ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ತನ್ನ ಎಲ್ಲಾ ಕೇಂದ್ರಗಳಲ್ಲಿ ಸಿಬ್ಬಂದಿ ಪ್ರವೇಶ ಮಾಡುವ ಮುನ್ನ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ, ಕೆಲಸ ಮಾಡುವ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ, ಎಲ್ಲಾ ಸಂದರ್ಭದಲ್ಲಿಯೂ ಆರೋಗ್ಯ ಸೇತು ಆ್ಯಪ್ ಅನ್ನು ಬಳಸಲಾಗುತ್ತದೆ.

ಕಳೆದ ವರ್ಷ ಆರಂಭವಾದ ಇಂಟರ್ನ್ ಶಿಪ್

ಕಳೆದ ವರ್ಷ ಆರಂಭವಾದ ಇಂಟರ್ನ್ ಶಿಪ್

ಕಳೆದ ವರ್ಷ ಆರಂಭವಾದ ಇಂಟರ್ನ್ ಶಿಪ್ ಕಾರ್ಯಕ್ರಮದಲ್ಲಿ ದೇಶಾದ್ಯಂತ 2000 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಸಪ್ಲೈ ಚೇನ್ ನಿರ್ವಹಣೆ ಕುರಿತು ತಿಳಿದುಕೊಂಡಿದ್ದರು. ಅಲ್ಲದೇ, ಪಾಲುದಾರರ ಪರಿಸರ ವ್ಯವಸ್ಥೆಯನ್ನು ಒಂದೆಡೆ ಸೇರಿಸುವ ಫ್ಲಿಪ್ ಕಾರ್ಟ್ ನ ಹಲವಾರು ಉಪಕ್ರಮಗಳ ಬಗ್ಗೆ ಅರಿತುಕೊಳ್ಳಲು ಇದು ಸಹಕಾರಿಯಾಗಿದೆ. ಈ ಮಾನ್ಯತೆ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಕಾರ್ಯಾಚರಣೆಗಳಲ್ಲಿ ದೀರ್ಘಕಾಲೀನವಾದ ಸ್ಥಿತಿ ಸ್ಥಾಪಕತ್ವ ಮತ್ತು ಚುರುಕುತನವನ್ನು ಬೆಳೆಸಲು ಇದು ಸಹಾಯ ಮಾಡುತ್ತದೆ.

ಹಿರಿಯ ಉಪಾಧ್ಯಕ್ಷ ಅಮಿತೇಶ್ ಝಾ

ಹಿರಿಯ ಉಪಾಧ್ಯಕ್ಷ ಅಮಿತೇಶ್ ಝಾ

ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ನ ಹಿರಿಯ ಉಪಾಧ್ಯಕ್ಷ ಅಮಿತೇಶ್ ಝಾ ಅವರು, ವೃತ್ತಿಪರ ಜಗತ್ತಿಗೆ ಪಾದಾರ್ಪಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಲ್ಲಿ ಈ ಇಂಟರ್ನ್ ಶಿಪ್ ಕಾರ್ಯಕ್ರಮಗಳು ತೀವ್ರ ಕುತೂಹಲವನ್ನು ಮೂಡಿಸುತ್ತಿವೆ. ಎಚ್ಚರಿಕೆಯಿಂದ ರೂಪಿಸಲಾಗಿರುವ ನಮ್ಮ ಇಂಟರ್ನ್ ಶಿಪ್ ಕಾರ್ಯಕ್ರಮ ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ. ಮುಂಬರುವ ಹಬ್ಬದ ಋತುವಿನಲ್ಲಿ ನಮ್ಮ ತರಬೇತಿ ಹೊಂದುವ ಅಭ್ಯರ್ಥಿಗಳಿಗೆ ಆಕರ್ಷಕವಾಗಿ ಮತ್ತು ಕೆಲಸದಲ್ಲಿ ಅನುಭವವನ್ನು ಒದಗಿಸುವ ವಿಶ್ವಾಸ ನಮಗಿದೆ. ಅಲ್ಲದೇ, ಸಪ್ಲೈ ಚೇನ್ ಕಡೆಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸಲು ಇದು ಸಹಾಯ ಮಾಡುತ್ತದೆ'' ಎಂದರು.

English summary
Flipkart announced paid internship programme Launchpad for undergraduate students from tier-II cities and beyond to work in its supply chain ahead of the festive season and the Big Billion Days sale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X