ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಬಲ್ ಟಿವಿ ಗ್ರಾಹಕರ ಗಮನಕ್ಕೆ 130 ರು ಗೆ ಸಿಗಲಿದೆ ಹೆಚ್ಚು ಚಾನೆಲ್ಸ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 04: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಫೆಬ್ರವರಿ 01ರಿಂದ ಹೊಸ ಕೇಬಲ್ ನೀತಿ ಜಾರಿಗೆ ತಂದ ಬಳಿಕವೂ ಕೇಬಲ್ ಆಪರೇಟರ್, ಡಿಟಿಎಚ್ ಸಂಸ್ಥೆ ಹಾಗೂ ಗ್ರಾಹಕರ ನಡುವೆ ದರ ಏರಿಕೆ ಇಳಿಕೆ ಚಕಮಕಿ ನಡೆಯುತ್ತಲೇ ಇದೆ. ಈ ನಡುವೆ ಕೇಬಲ್ ಆಪರೇಟರ್ ಗಳಿಂದ ಗ್ರಾಹಕರಿಗೆ ಶುಲ್ಕ ಇಳಿಕೆ ಬಗ್ಗೆ ಸುದ್ದಿ ಬಂದಿದೆ.

ಡಿಟಿಎಚ್ ಸೇವಾ ಸಂಸ್ಥೆಗಲಾದ ಏರ್ ಟೆಲ್, ಡಿಶ್ ಟಿವಿ, ಹಾಥ್ವೇ, ಸಿಟಿ ಕೇಬಲ್ ಹಾಗೂ ಸ್ಥಳೀಯ ಕೇಬಲ್ ಆಪರೇಟರ್ ಗಳು ತಮ್ಮ ದರ ಪಟ್ಟಿಯನ್ನು ಈಗಾಗಲೇ ಚಂದಾದರರಿಗೆ ಪ್ರದರ್ಶಿಸತೊಡಗಿವೆ. ಪ್ರಸಾರಕಾರರು, ಡಿಟಿಎಚ್ ಆಪರೇಟರ್ ಗಳು ಮತ್ತು Multi System Operators(ಎಂಎಸ್ಒ)ಗಳ ಜತೆ ಟ್ರಾಯ್ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ ಬಳಿಕ ದರಗಳನ್ನು ನಿಗದಿ ಮಾಡಲಾಗಿದೆ.

ಟ್ರಾಯ್ ನಲ್ಲಿ ಟಿವಿ ವಾಹಿನಿ ದರ ಪಟ್ಟಿ, ಕನ್ನಡ ಚಾನೆಲ್ ಆಯ್ಕೆ ಹೇಗೆ?ಟ್ರಾಯ್ ನಲ್ಲಿ ಟಿವಿ ವಾಹಿನಿ ದರ ಪಟ್ಟಿ, ಕನ್ನಡ ಚಾನೆಲ್ ಆಯ್ಕೆ ಹೇಗೆ?

ಆದರೆ ಬೆಲೆ ಏರಿಕೆ ಬಗ್ಗೆ ಗ್ರಾಹಕರಿಂದ ಕೇಬಲ್ ಒಕ್ಕೂಟದಿಂದ ದೂರುಗಳು ಕೇಳಿ ಬಂದಿದ್ದರಿಂದ ಟ್ರಾಯ್ ಹಾಗೂ ಅಖಿಲ ಭಾರತ ಡಿಜಿಟಲ್ ಕೇಬಲ್ ಒಕ್ಕೂಟವು (AIDCF) ಮಾಸಿಕ ಕೇಬಲ್ ಟಿವಿ ಶುಲ್ಕದಲ್ಲಿ ಬದಲಾವಣೆ ತರಲು ಮುಂದಾಗಿದೆ. ತನ್ನ ಗ್ರಾಹಕರಿಗೆ 150 ಚಾನೆಲ್‌ಗಳ ಸೇವೆಯನ್ನು 130 ರೂ.ಗಳ ಕನಿಷ್ಠ ಮಟ್ಟದ ಶುಲ್ಕದ ದರದಲ್ಲಿ ನೀಡಲು AIDCF ನಿರ್ಧರಿಸಿದೆ.

ದರ ಪಟ್ಟಿ ಬಗ್ಗೆ ಯಾವುದಾದರೂ ಗೊಂದಲಗಳಿದ್ದರೆ 011-23237922 (ಎ.ಕೆ. ಭಾರಧ್ವಾಜ್​) ಮತ್ತು 011-23220209 (ಅರವಿಂದ್​ ಕುಮಾರ್​) ಇಲ್ಲವೇ ಇ- ಮೇಲ್​ [email protected] ಅಥವಾ [email protected]. ಗೆ ಸಂಪರ್ಕಿಸಬಹುದು

ಹೊಸ ನಿಯಮ ಡಿಟಿಎಚ್ ಗೆ ಇನ್ನು ಲಭ್ಯವಿಲ್ಲ

ಹೊಸ ನಿಯಮ ಡಿಟಿಎಚ್ ಗೆ ಇನ್ನು ಲಭ್ಯವಿಲ್ಲ

ಹೊಸ ನಿಯಮ ಜಾರಿಗೆ ಬರುವ ಮುನ್ನ 100 ಕ್ಕಿಂತ ಹೆಚ್ಚಿನ ಚಾನೆಲ್‌ಗಳು ಹಾಕಿಸಿಕೊಳ್ಳಲು ಬಯಸುವವರು, ಪ್ರತಿ ಹೆಚ್ಚುವರಿ ಚಾನೆಲ್ ಮೇಲೆ 20-25 ರೂ.ಗಳ ಶುಲ್ಕ ವಿಧಿಸಲಾಗುತ್ತಿತ್ತು. ಈ ಸೌಲಭ್ಯವು ಸದ್ಯಕ್ಕೆ ಕೇವಲ ಕೇಬಲ್ ಟಿವಿ ಗ್ರಾಹಕರಿಗೆ ಮಾತ್ರವೇ ಲಭ್ಯವಿದ್ದು, DTH ಗ್ರಾಹಕರಿಗೆ ಇನ್ನೂ ಇದರ ಅನುಕೂಲ ಸಿಕ್ಕಿಲ್ಲ. ಸದ್ಯದ ಮಟ್ಟಿಗೆ ಟಾಟಾ ಸ್ಕೈ ಹಾಗೂ ಸನ್ ಡೈರೆಕ್ಟ್‌ಗಳು ತಮ್ಮ ಮೂಲ ಶುಲ್ಕ ದರದಲ್ಲಿ ಕೊಂಚ ಇಳಿಕೆ ಮಾಡಿವೆ

ಶುಲ್ಕ ಬದಲಾವಣೆ ಬಗ್ಗೆ ಮಾಹಿತಿ ಎಲ್ಲಿ ಸಿಗಲಿದೆ?

ಶುಲ್ಕ ಬದಲಾವಣೆ ಬಗ್ಗೆ ಮಾಹಿತಿ ಎಲ್ಲಿ ಸಿಗಲಿದೆ?

ಟ್ರಾಯ್ ನಿಯಮ, ಚಾನೆಲ್ ಆಯ್ಕೆ ಹಾಗೂ ಕೇಬಲ್ ಆಪರೇಟರ್, ಡಿಟಿಎಚ್ ಕಂಪನಿಗಳ ಅಫರ್ ಬಗ್ಗೆ ಚಾನೆಲ್ ನಂಬರ್ 999(ಕೇಬಲ್ ಟಿವಿ ಅಪರೇಟರ್ ಸಂಪರ್ಕಿಸಿ ಕೇಳಿರಿ)ರಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಗ್ರಾಹಕರಿಗೆ ಎಸ್ಎಂಎಸ್ ಮೂಲಕ, ಪ್ರಾತ್ಯಕ್ಷಿಕೆ ವಿಡಿಯೋ, ಪಾಂಪ್ಲೆಟ್ ಮೂಲಕ ಕೂಡಾ ಮಾಹಿತಿ ನೀಡಲಾಗುತ್ತಿದೆ. ಈಗ ಹೊಸ ನಿಯಮದ ಪ್ರಕಾರ ಒಂದು ಚಾನೆಲ್ ಅಥವಾ ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್ ಹಾಕಿಸಿಕೊಳ್ಳಬಹುದು.

ಏರ್ ಟೆಲ್ ಡಿಜಿಟಲ್ ಟಿವಿಯಲ್ಲಿ ಚಾನೆಲ್ ಆಯ್ಕೆ ವಿಧಾನ ಹೇಗೆ?ಏರ್ ಟೆಲ್ ಡಿಜಿಟಲ್ ಟಿವಿಯಲ್ಲಿ ಚಾನೆಲ್ ಆಯ್ಕೆ ವಿಧಾನ ಹೇಗೆ?

ನೂರಾರು ಉಚಿತ ಚಾನೆಲ್ ಲಭ್ಯವಿದೆ

ನೂರಾರು ಉಚಿತ ಚಾನೆಲ್ ಲಭ್ಯವಿದೆ

ನೂರಾರು ಚಾನೆಲ್ ಉಚಿತವಿದೆ: ದೂರದರ್ಶನದ ಉಚಿತ 26 ಚಾನೆಲ್ ಸೇರಿದಂತೆ 100 ಚಾನೆಲ್(74 Free to Air) ಗಳನ್ನು ವೀಕ್ಷಿಸಬಹುದು. ಇದಕ್ಕಾಗಿ 130 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ ಶೇ. 18 ರಷ್ಟು ಜಿ.ಎಸ್.ಟಿ. ಪಾವತಿಸಿ 154 ರೂ.ಗೆ 100 ಚಾನಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. ಈಗ ಈ ಸಂಖ್ಯೆಯನ್ನು 150ಕ್ಕೇರಿಸಲಾಗಿದೆ.

ಎಚ್ ಡಿ ಚಾನೆಲ್ ಬೇಕಾದರೆ ಹೆಚ್ಚು ಶುಲ್ಕ

ಎಚ್ ಡಿ ಚಾನೆಲ್ ಬೇಕಾದರೆ ಹೆಚ್ಚು ಶುಲ್ಕ

HD ಚಾನೆಲ್ ಹೊರತು ಪಡಿಸಿ ಎಸ್ ಡಿ ಚಾನೆಲ್ ಗಳ 100ರ ಪ್ಯಾಕ್ ಗೆ 184ರು ಗಿಂತ ಅಧಿಕ ನೀಡಬೇಡಿ ಎಂದು ಟ್ರಾಯ್ ಸೂಚಿಸಿದೆ. ಪ್ರತಿ 25 ಉಚಿತ ಚಾನೆಲ್ ಗಳಿಗೆ ಜಿ.ಎಸ್.ಟಿ. ಸೇರಿ 25 ರೂ.ಪಾವತಿಸಬೇಕಿದೆ. ಪ್ರತಿಯೊಂದು ಚಾನೆಲ್ ಗೂ 1 ಪೈಸೆಯಿಂದ 19 ರೂ.ರವರೆಗೆ ದರ ನಿಗದಿಯಾಗಿದೆ ಎಂದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ(ಟ್ರಾಯ್) ತಿಳಿಸಿದೆ.

English summary
All India Digital Cable Federation(AIDCF) has decided to offer FTA150 Standard Definition(SD) channel for NCF of Rs 130.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X