ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಸ್ ಎಲ್ಜಿಯಿಂದ ವಾಹನ ಕ್ರಿಮಿನಾಶಕ ಸಲ್ಯೂಷನ್

|
Google Oneindia Kannada News

ಬೆಂಗಳೂರು, ಜೂನ್ 03: ಭಾರತದ ಅಗ್ರಗಣ್ಯ ಗ್ಯಾರೇಜ್ ಸಾಧನಗಳ ಉತ್ಪಾದನೆ ಮತ್ತು ವಿತರಣಾ ಸಂಸ್ಥೆಯಾದ ಮತ್ತು ಎಲ್ಜಿ ಈಕ್ವಿಪ್‍ಮೆಂಟ್ಸ್ ಲಿಮಿಟೆಡ್‍ನ ಕಂಪ್ರೆಸ್ಡ್ ಏರ್ ಸೊಲ್ಯೂಶನ್ಸ್ ಸರಬರಾಜು ಅಂಗಸಂಸ್ಥೆಯಾದ ಎಟಿಎಸ್ ಎಲ್ಜಿ, ಹೊಸ ಶ್ರೇಣಿಯ ವಾಹನ ಕ್ರಿಮಿನಾಶಕ ಸೊಲ್ಯೂಶನ್ ಬಿಡುಗಡೆ ಮಾಡಿದೆ.

ಈ ಓಝೋನ್ ಏರ್ ಸ್ಟೆರಿಲೈಸರ್, ಓಝೋನ್ (ಸಕ್ರಿಯ ಆಮ್ಲಜನಕದಿಂದ ಉತ್ಪಾದಿಸಿದ ತಾಜಾ ಉತ್ಪನ್ನ) ಬಳಸಿಕೊಂಡು ಬ್ಯಾಕ್ಟೀರಿಯಾ, ವೈರಸ್, ಮೌಲ್ಡ್ಸ್, ಅಲರ್ಜಿ ಕಣ, ದುರ್ವಾಸನೆ ಮತ್ತು ವೊಲೆಟೈಲ್ ಆರ್ಗಾನಿಕ್ ಕಾಂಪೌಂಡ್ (ವಿಓಸಿ)ನಂಥ ಹಾನಿಕಾರಕ ಮಾಲಿನ್ಯಕಾರಕ ಕಣಗಳನ್ನು ನಿರ್ಮೂಲನೆ ಮಾಡುತ್ತದೆ. ಈ ಮೂಲಕ ಸಣ್ಣ ಪ್ರಯಾಣಿಕ ಕಾರುಗಳು, ಸೆಡಾನ್‍ಗಳು, ಎಸ್‍ಯುವಿಗಳು, ಎಸ್‍ಸಿವಿ/ಎಚ್‍ಸಿವಿಯಂಥ ವಾಣಿಜ್ಯ ವಾಹನಗಳ ಚಾಲಕ ಕ್ಯಾಬಿನ್ ಮತ್ತು ಆ್ಯಂಬುಲೆನ್ಸ್ ನ ಒಳಗಿನ ಪರಿಸರವನ್ನು ಸುರಕ್ಷಿತ ಹಾಗೂ ಸ್ವಚ್ಛವಾಗಿಡಲು ಸಹಕಾರಿಯಾಗಿದೆ.

ವಾಹನ ಸರ್ವಿಸಿಂಗ್ ಇನ್ನು ಸುಲಭ, ಪಿಟ್ ಸ್ಟಾಪ್ ಆಪ್ ಇದೆಯಲ್ಲವಾಹನ ಸರ್ವಿಸಿಂಗ್ ಇನ್ನು ಸುಲಭ, ಪಿಟ್ ಸ್ಟಾಪ್ ಆಪ್ ಇದೆಯಲ್ಲ

ಕಾರು ಅಥವಾ ವಾಹನಗಳಲ್ಲಿ ಮುಚ್ಚಿದ ವಾತಾವರಣದಿಂದಾಗಿ ಮಾಲಿನ್ಯಕಾರಕ ಅಂಶಗಳ ಅಪಾಯ ಕಡಿಮೆ ಇದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ದಟ್ಟವಾಗಿದೆ. ಆದರೆ, ವಾಹನಗಳ ಸ್ವಚ್ಛತೆ, ಸ್ಟರಿಲೈಸ್ ಮಾಡುವುದು ಮುಖ್ಯವಾಗಿದೆ.

ಕಾರುಗಳಲ್ಲಿ ಸೋಂಕು ಒಯ್ಯುವ ಸಾಧ್ಯತೆ

ಕಾರುಗಳಲ್ಲಿ ಸೋಂಕು ಒಯ್ಯುವ ಸಾಧ್ಯತೆ

ಲಾಕ್‍ಡೌನ್ ಸಡಿಲಿಕೆಯಾಗಿ ಜನತೆ ತಮ್ಮ ದೈನಂದಿನ ಕೆಲಸದ ವೇಳಾಪಟ್ಟಿಗೆ ವರ್ಗಾಂತರಗೊಳ್ಳುತ್ತಿದ್ದು, ಕಾರು ಅಥವಾ ವಾಹನಗಳಲ್ಲಿ ಮುಚ್ಚಿದ ವಾತಾವರಣದಿಂದಾಗಿ ಮಾಲಿನ್ಯಕಾರಕ ಅಂಶಗಳ ಅಪಾಯ ಕಡಿಮೆ ಇದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ದಟ್ಟವಾಗಿದೆ. ಆದಾಗ್ಯೂ ಅಧ್ಯಯನಗಳ ಪ್ರಕಾರ, ನಾಲ್ಕು ಚಕ್ರದ ವಾಹನಗಳು ಸೋಂಕು ಒಯ್ಯುವ ಸಾಧ್ಯತೆ ಅಧಿಕ. ವಾಹನದ ಒಳಾಂಗಣದಲ್ಲಿ ಹಲವು ಎತ್ತರದ ಮೇಲ್ಮೈಗಳು, ಎಸಿ ಘಟಕ ಮತ್ತು ಕೆಳ ಸಂಪರ್ಕ ಭಾಗಗಳಾದ ಹೆಡ್‍ಲೈನರ್, ಹೆಡ್‍ರೆಸ್ಟ್ ಮತ್ತು ಕಿಟಕಿ ಗಾಜುಗಳಿದ್ದು, ವಾಹನಗಳು ಮಾಲಿನ್ಯಕಾರಕ ಅಂಶಗಳಿಂದ ಮುಕ್ತವಾಗಲು ಶುಚಿಗೊಳಿಸುವುದು ಅಗತ್ಯ.

ಎಟಿಎಸ್ ಎಲ್ಜಿ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ತಿವಾರಿ

ಎಟಿಎಸ್ ಎಲ್ಜಿ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ತಿವಾರಿ

ಎಟಿಎಸ್ ಎಲ್ಜಿ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ತಿವಾರಿ ಅವರ ಪ್ರಕಾರ, "ಇದು ಅತ್ಯಂತ ಅಸಾಧಾರಣ ಕಾಲಘಟ್ಟವಾಗಿದ್ದು, ಪ್ರಸ್ತುತ ಲಾಕ್‍ಡೌನ್‍ನಿಂದಾಗಿ ನಮ್ಮಲ್ಲಿ ಬಹುತೇಕ ಮಂದಿ ದಿನದ 24 ಗಂಟೆಯೂ ಮನೆಯೊಳಗೆಯೇ ಇರತ್ತೇವೆ. ನಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಮರಳಿದಾಗ ಕೋವಿಡ್-19 ಹರಡುವಿಕೆಯನ್ನು ತಡೆಯುವುದು ಅತಿ ಅಗತ್ಯ. ಎಟಿಎಸ್ ಎಲ್ಜಿ ಈ ನಿಟ್ಟಿನಲ್ಲಿ ನಮ್ಮ ಪ್ರತಿಯೊಬ್ಬ ಗ್ರಾಹಕರಿಗೂ ವಾಹನದೊಳಗೆ ಸ್ವಚ್ಛ ಹಾಗೂ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಸಲ್ಯೂಷನ್ ಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ. ಓಝೋನ್ ಏರ್ ಸ್ಟೆರಿಲೈಸರ್ ನಮ್ಮ ಬದ್ಧತೆಯನ್ನು ಅನುಶೋಧನೆಯಾಗಿ ಪರಿವರ್ತಿಸಿದ್ದು, ಸಾಂಕ್ರಾಮಿಕೋತ್ತರ ವಿಶ್ವಕ್ಕೆ ಸುಲಲಿತ ವರ್ಗಾವಣೆಯನ್ನು ಇದು ಖಾತ್ರಿಪಡಿಸುತ್ತದೆ"

ಲಾಕ್ಡೌನ್: ಕಾರು, ಬೈಕು ಸ್ಟಾರ್ಟ್ ಆಗ್ತಿಲ್ವ, ಪಿಟ್ ಸ್ಟಾಪ್ ಇದ್ಯಲ್ಲ!ಲಾಕ್ಡೌನ್: ಕಾರು, ಬೈಕು ಸ್ಟಾರ್ಟ್ ಆಗ್ತಿಲ್ವ, ಪಿಟ್ ಸ್ಟಾಪ್ ಇದ್ಯಲ್ಲ!

ಓಝೋನ್ ಏರ್ ಸ್ಟೆರಿಲೈಸರ್ ಸಲ್ಯೂಷನ್

ಓಝೋನ್ ಏರ್ ಸ್ಟೆರಿಲೈಸರ್ ಸಲ್ಯೂಷನ್

ಎಟಿಎಸ್ ಎಲ್ಜಿ ತಂಡವು ಓಝೋನ್ ಏರ್ ಸ್ಟೆರಿಲೈಸರ್ ಸಲ್ಯೂಷನ್ ಅನ್ನು ಯಂತ್ರಗಳಿಗೆ ಸುಲಭವಾಗಿ ಬಳಸಲು, ಕಾಂಪ್ಯಾಕ್ಟ್, ಒಂದೆಡೆಯಿಂದ ಸುಲಭವಾಗಿ ಒಯ್ಯಲು ಮತ್ತು ಶೂನ್ಯ ನಿರ್ವಹಣೆ ಹಾಗೂ ಬಳಕೆಗೆ ಯೋಗ್ಯವಾಗುವಂತೆ ಮಾಡಿದೆ. ಮಧ್ಯಮ ಗಾತ್ರದ ಕಾರನ್ನು ಅಥವಾ ಎಸ್‍ಸಿವಿ, ಎಲ್‍ಸಿವಿ ಮತ್ತು ಎಚ್‍ಸಿವಿ ವರೆಗಿನ ವಾಣಿಜ್ಯ ವಾಹನಗಳ ಕ್ಯಾಬಿನ್‍ಗಳನ್ನು ಕೇವಲ 10 ನಿಮಿಷಗಳಲ್ಲಿ ಇದು ಸೋಂಕುಮುಕ್ತಗೊಳಿಸುತ್ತದೆ.

20 ನಿಮಿಷಗಳಲ್ಲಿ ಸಂಪೂರ್ಣ ಸೋಂಕುಮುಕ್ತ

20 ನಿಮಿಷಗಳಲ್ಲಿ ಸಂಪೂರ್ಣ ಸೋಂಕುಮುಕ್ತ

ಅಂತೆಯೇ ಎಸ್‍ಯುವಿ ಅಥವಾ ವ್ಯಾನ್‍ಗಳನ್ನು 20 ನಿಮಿಷಗಳಲ್ಲಿ ಸಂಪೂರ್ಣ ಸೋಂಕುಮುಕ್ತಗೊಳಿಸುತ್ತದೆ. ಓಝೋನ್ ಏರ್ ಸ್ಟೆರಿಲೈಸರ್, ವಾಹನದ ಬ್ಯಾಟರಿ ಮೂಲಕ 12 ವಿ ಡಿಸಿ ವಿದ್ಯುತ್ ಬಳಸಿಕೊಂಡು, ನೈಸರ್ಗಿಕ ಗಾಳಿ ಅಥವಾ ಸಾಮಾನ್ಯ ಆಮ್ಲಜನಕ ಕಣಗಳನ್ನು ಓಝೋನ್ ಅಥವಾ ಓ3 ಕಣಗಳನ್ನಾಗಿ ಮಾರ್ಪಡಿಸುತ್ತದೆ. ಈ ಮೂಲಕ ಹಾನಿಕಾರಕ ಅಥವಾ ಕಣಗಳನ್ನು ಉಳಿಸುವ ಹೆಚ್ಚುವರಿ ರಾಸಾಯನಿಕಗಳ ಅಥವಾ ಸೋಂಕು ನಿವಾರಕಗಳ ಅಗತ್ಯತೆಯನ್ನು ಶೂನ್ಯಗೊಳಿಸುತ್ತದೆ.

English summary
India’s leading garage equipment manufacturer and distributor and a subsidiary of Elgi Equipments Limited, a global supplier of compressed air solutions, has launched its new range of vehicle sterilization solutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X