ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂ ಇನ್ಮುಂದೆ ಪೇಪರ್ ಲೆಸ್

By Mahesh
|
Google Oneindia Kannada News

ಮುಂಬೈ, ಮೇ.31: ಖಾಸಗಿ ವಲಯದ ಎರಡನೇ ಅತಿದೊಡ್ಡ ಬ್ಯಾಂಕ್ ಎಚ್ ಡಿಎಫ್ ಸಿ ಹೊಸ ಪರಿಸರ ಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂನಲ್ಲಿ ಇನ್ಮುಂದೆ ಕಾಗದರಹಿತವಾಗಲಿದೆ. ಗ್ರಾಹಕರಿಗೆ ಎಸ್ ಎಂಎಸ್ ಮೂಲಕ ಅಲರ್ಟ್ ನೀಡಲು ಬ್ಯಾಂಕ್ ನಿರ್ಧರಿಸಿದೆ.

ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂನಿಂದ ಕ್ಯಾಶ್ ಪಡೆಯುವಾಗ ರಸೀತಿ ಪಡೆಯುವ ಕ್ರಮಕ್ಕೆ ಬ್ರೇಕ್ ಬೀಳಲಿದೆ. ಇದರ ಬಳಿಕೆ ಕ್ಯಾಶ್ ವಿಥ್ ಡ್ರಾ ಮಾಡಿಕೊಂಡ ಮೇಲೆ ಎಸ್ ಎಂಎಸ್ ಮೂಲಕ ಗ್ರಾಹಕರಿಗೆ ಅಲರ್ಟ್ ಕಳಿಸಲಾಗುತ್ತದೆ. ಎಸ್ ಎಂಎಸ್ ನಲ್ಲಿ ವಿಥ್ ಡ್ರಾ ಮೊತ್ತ, ಬ್ಯಾಲೆನ್ಸ್ ಮೊತ್ತ ಸೇರಿದಂತೆ ಪೂರ್ತಿ ವಿವರ ಲಭ್ಯವಾಗಲಿದೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿ ಹೇಳಿದ್ದಾರೆ.[ಕ್ರೆಡಿಟ್ ಕಾರ್ಡ್ ಪಿನ್‌ ಅಂಚೆಯಲ್ಲಿ ಬರಲ್ಲ]

ATM use: HDFC Bank to stop paper slips,to send detailed SMSes

ಈ ಹೊಸ ವ್ಯವಸ್ಥೆಯನ್ನು ಮೊದಲಿಗೆ ಕೆಲವು ಎಟಿಎಂಗಳಲ್ಲಿ ಜಾರಿಗೊಳಿಸಲಾಗುತ್ತದೆ. ನಂತರ ದೇಶದೆಲ್ಲೆಡೆ ಇರುವ ಸುಮಾರು 11,700 ಎಟಿಎಂಗಳಲ್ಲಿ ಜೂನ್ ತಿಂಗಳ ಅಂತ್ಯಕ್ಕೆ ಜಾರಿಗೊಳಿಸಲಾಗುತ್ತದೆ ಎಂದು ತಿಳಿದು ಬಂದಿದೆ. [ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ] (ಪಿಟಿಐ)

ಎಚ್ ಡಿಎಫ್ ಸಿ ಬ್ಯಾಂಕಿನ ಎಟಿಎಂ ಮೂಲಕ ಪ್ರತಿ ತಿಂಗಳಿಗೆ ಸುಮಾರು 2 ಕೋಟಿ ರು ಪ್ರತಿ ತಿಂಗಳಿಗೆ ವಿಥ್ ಡ್ರಾ ಕಾಣಲಾಗುತ್ತಿದೆ. ಈ ಪರಿಸರ ಸ್ನೇಹಿ ವ್ಯವಸ್ಥೆ ಜಾರಿಗೊಂಡರೆ ಸರಿ ಸುಮಾರು 10 ಕೋಟಿ ರು ಗೂ ಅಧಿಕ ಮೊತ್ತ ಉಳಿಯಲಿದೆ. ಕಳೆದ ವರ್ಷ ಸುಮಾರು 500ಕ್ಕೂ ಅಧಿಕ ಹೊಸ ಎಟಿಎಂ ಕೇಂದ್ರಗಳನ್ನು ಎಚ್ ಡಿಎಫ್ ಸಿ ತನ್ನ ಜಾಲಕ್ಕೆ ಸೇರಿಸಿಕೊಂಡಿದೆ. [ಗೃಹಸಾಲ, ವಾಹನ ಸಾಲ ಬಡ್ಡಿದರ ಇಳಿಕೆ]

ಈ ಮುಂಚೆ ಎಚ್ ಡಿಎಫ್ ಸಿ ಹಸಿರು ಪಿನ್ ಜಾರಿಗೊಳಿಸಿತ್ತು. ಗ್ರಾಹಕರಿಗೆ ಪಿನ್‌ ನಂಬರ್‌ಗಳನ್ನು ಮೊಬೈಲ್‌ ಮೆಸೆಜ್ ಮೂಲಕ ತಲುಪಿಸಲಾಗುತ್ತದೆ. ಮೊದಲ ಬಾರಿಯ ಪಾಸ್‌ ವರ್ಡ್‌ಗಳನ್ನು ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಗ್ರಾಹಕರು ಅಗತ್ಯಬಿದ್ದರೆ ಬ್ಯಾಂಕ್‌ನ ಎಟಿಎಂ ಗಳಲ್ಲಿ ತಮ್ಮ ಪಾಸ್‌ ವರ್ಡ್ ಬದಲಾಯಿಸಿಕೊಳ್ಳಬಹುದು.

English summary
The second largest private sector lender HDFC Bank has decided to discontinue issuing slips after cash withdrawals at ATMs and will alert the customer through SMSes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X