ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಪಿ ನಗರದಲ್ಲಿ ಎಥರ್ ಎನರ್ಜಿ ಇ ಸ್ಕೂಟರ್ ಟೆಸ್ಟ್ ರೈಡ್ ಮಾಡಿ!

|
Google Oneindia Kannada News

ಬೆಂಗಳೂರು, ಜೂನ್ 28: ಭಾರತದ ಮೊದಲ ಇಂಟೆಲಿಜೆಂಟ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಕ ಎಥರ್ ಎನರ್ಜಿ ಬೆಂಗಳೂರಿನ ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಎರಡನೆಯ ಎಕ್ಸ್‌ಪೀರಿಯೆನ್ಸ್‌ ಸೆಂಟರ್-ಎಥರ್ ಸ್ಪೇಸ್ ಅನ್ನು ಜೆಪಿ ನಗರದಲ್ಲಿ ಉದ್ಘಾಟಿಸಿದೆ.

ಇದು ಎಥರ್ ಹಲವು ಎಕ್ಸ್‌ಪೀರಿಯೆನ್ಸ್ ಸೆಂಟರ್‌ಗಳನ್ನು ಕರ್ನಾಟಕದ ಮುಂಚೂಣಿಯ ಆಟೊ ರೀಟೇಲರ್ ಬಿಐಎ ವೆಂಚರ್ಸ್ ಸಹಯೋಗದಲ್ಲಿ ಪರಿಚಯಿಸಿದೆ. ಭಾರತದ ಅತ್ಯಂತ ತ್ವರಿತ ಹಾಗೂ ಸ್ಮಾರ್ಟ್ ಸ್ಕೂಟರ್ ಎಥರ್ 450ಎಕ್ಸ್, ಎಥರ್ 450 ಪ್ಲಸ್‍ನೊಂದಿಗೆ ಎಥರ್ ಸ್ಪೇಸ್‍ನಲ್ಲಿ ಟೆಸ್ಟ್ ರೈಡ್ ಮತ್ತು ಕೊಳ್ಳಲು ಲಭ್ಯ.

ಎಥರ್ ಎನರ್ಜಿ ಜನವರಿ 2021ರಿಂದಲೂ ಸುಮಾರು 30 ಪಟ್ಟು ಬೇಡಿಕೆಯಲ್ಲಿ ಹೆಚ್ಚಳ ಕಂಡಿದ್ದು ತನ್ನ ಬಾಗಿಲುಗಳನ್ನು ಎರಡನೆಯ ಎಕ್ಸ್‌ಪೀರಿಯೆನ್ಸ್‌ ಸೆಂಟರ್ ತೆರೆಯುತ್ತಿದ್ದು ದಕ್ಷಿಣ ಬೆಂಗಳೂರಿನ ಗ್ರಾಹಕರು ಈಗ ಜೆ.ಪಿ.ನಗರದಿಂದ 40ಎಕ್ಸ್ ಟೆಸ್ಟ್ ರೈಡ್ ಮಾಡಬಹುದು.

ಕಳೆದ ಕೆಲ ವಾರಗಳಲ್ಲಿ ಫೇಮ್ 2 ರಿವಿಷನ್‍ಗಳಿಂದ ಶೇ.50ರಷ್ಟು ಸಬ್ಸಿಡಿ ಹೆಚ್ಚಳದಿಂದ ಎಲ್ಲ ವಿದ್ಯುತ್‍ಚಾಲಿತ ದ್ವಿಚಕ್ರ ವಾಹನಗಳ ಬೆಲೆಗಳನ್ನು ಮತ್ತಷ್ಟು ಕಡಿಮೆ ಮಾಡಿದೆ. ಕರ್ನಾಟಕ ಸರ್ಕಾರವು ವಿದ್ಯುಚ್ಚಾಲಿತ ದ್ವಿಚಕ್ರ ವಾಹನಗಳಿಗೆ ನೋಂದಣಿ ಶುಲ್ಕ ಮತ್ತು ರಸ್ತೆ ತೆರಿಗೆಯನ್ನು ಮನ್ನಾ ಮಾಡಿದೆ.

ಎಥರ್ ಎನರ್ಜಿಯ ರವ್‍ನೀತ್ ಫೊಕೆಲಾ ಮಾತನಾಡಿ

ಎಥರ್ ಎನರ್ಜಿಯ ರವ್‍ನೀತ್ ಫೊಕೆಲಾ ಮಾತನಾಡಿ

ಎಥರ್ ಎನರ್ಜಿಯ ಚೀಫ್ ಬ್ಯುಸಿನೆಸ್ ಆಫೀಸರ್ ರವ್‍ನೀತ್ ಫೊಕೆಲಾ, ''ಬೆಂಗಳೂರಿನಲ್ಲಿ ನಾವು ಸ್ವೀಕರಿಸುತ್ತಿರುವ ಟೆಸ್ಟ್‌ ರೈಡ್ ಬೇಡಿಕೆಗಳು ಅಪಾರ ಪ್ರಮಾಣದಲ್ಲಿ ಹೆಚ್ಚಾಗಿವೆ. ಅದನ್ನು ಪೂರೈಸಲು ನಾವು ಬೆಂಗಳೂರಿನಲ್ಲಿ ನಮ್ಮ ಎರಡನೆಯ ಎಕ್ಸ್‌ಪೀರಿಯೆನ್ಸ್ ಸೆಂಟರ್ ತೆರೆಯುತ್ತಿದ್ದೇವೆ. ಅಲ್ಲದೆ ಫೇಮ್II ನೀತಿಯ ಹೊಸ ಪರಿಷ್ಕರಣೆಯಿಂದ ಇವಿ ಅಳವಡಿಕೆಯ ಪ್ರಮಾಣ ಹೆಚ್ಚಾಗಲಿದೆ ಮತ್ತು ನಾವು ಬೆಂಗಳೂರು ಹಾಗೂ ಹಲವು ನಗರಗಳಲ್ಲಿ ಹೆಚ್ಚು ಎಕ್ಸ್‌ಪೀರಿಯೆನ್ಸ್ ಸೆಂಟರ್‌ಗಳನ್ನು ತೆರೆಯುವ ನಿರೀಕ್ಷೆ ಹೊಂದಿದ್ದೇವೆ. ಬಿಐಎ ವೆಂಚರ್ಸ್ ಮಹತ್ತರ ಪಾಲುದಾರರಾಗಿದ್ದಾರೆ ಮತ್ತು ಎರಡನೆಯ ಎಕ್ಸ್‌ಪೀರಿಯೆನ್ಸ್ ಸೆಂಟರ್ ತೆರೆಯುವಲ್ಲಿ ಬೆಂಬಲಿಸುತ್ತಿದ್ದಾರೆ. ವಾಹನ ವಲಯದಲ್ಲಿ ಅವರ ಅನುಭವ ಮಹತ್ವಪೂರ್ಣವಾಗಿದೆ ಮತ್ತು ಅವರ ಉತ್ಸಾಹದಿಂದ ತಡ ಮಾಡದೆ ಶೋರೂಂ ತೆರೆಯಲು ಸಾಧ್ಯವಾಗಿದೆ,'' ಎಂದರು.

ಚಾರ್ಜಿಂಗ್ ಮೂಲಸೌಕರ್ಯ ನಿರ್ಮಾಣ

ಚಾರ್ಜಿಂಗ್ ಮೂಲಸೌಕರ್ಯ ನಿರ್ಮಾಣ

ಎಥರ್ ಎನರ್ಜಿ ಮಾರುಕಟ್ಟೆಗೆ ಬಿಡುಗಡೆಯ ಮುನ್ನವೇ ಚಾರ್ಜಿಂಗ್ ಮೂಲಸೌಕರ್ಯ ನಿರ್ಮಿಸಲು ಕೂಡಾ ಹೂಡಿಕೆ ಮಾಡುತ್ತಿರುವ ಕೆಲವೇ ಒಇಎಂಗಳಲ್ಲಿ ಒಂದಾಗಿದೆ. ಕಂಪನಿಯು ಈಗಾಗಲೇ 33 ಫಾಸ್ಟ್ ಚಾರ್ಜಿಂಗ್ ತಾಣಗಳಾದ ಎಥರ್ ಗ್ರಿಡ್ ಅನ್ನು ವೈಟ್‍ಫೀಲ್ಡ್, ಇಂದಿರಾನಗರ, ಜಯನಗರ, ಜೆಪಿ ನಗರ ಇತ್ಯಾದಿ ಕಡೆಗಳಲ್ಲಿ ಹೊಂದಿದೆ.

ಎಥರ್ ಎನರ್ಜಿಯಿಂದ 22 ನಗರಗಳಲ್ಲಿ 142 ಚಾರ್ಜಿಂಗ್ ಪಾಯಿಂಟ್‍ಗಳನ್ನು ಪ್ರಾರಂಭಿಸಲಾಗಿದ್ದು ಭಾರತದಲ್ಲಿ ಇವಿ ವಾಹನ ಮಾಲೀಕರಿಗೆ ಸುಲಭ ಮತ್ತು ವೇಗದ ಚಾರ್ಜಿಂಗ್ ಸಾಧ್ಯವಾಗಿಸುತ್ತದೆ. ಎಥರ್ ಎನರ್ಜಿ ಗ್ರಾಹಕರಿಗೆ ಅವರ ಹೋಮ್ ಚಾರ್ಜರ್‌ಗಳನ್ನು ಪ್ರಾರಂಭಿಸಲು ಕೂಡಾ ನೆರವಾಗುತ್ತದೆ ಮತ್ತು ನಗರದ 993 ಅಪಾರ್ಟ್‍ಮೆಂಟ್ ಸಂಕೀರ್ಣಗಳಲ್ಲಿ ಕಳೆದ 3 ವರ್ಷಗಳಲ್ಲಿ ಹೋಮ್ ಚಾರ್ಜರ್‌ಗಳನ್ನು ಅಳವಡಿಸಿದೆ.

ಬೆಂಗಳೂರಿನಲ್ಲಿ ಎಥರ್ 450 ಎಕ್ಸ್‌ ಬೆಲೆ

ಬೆಂಗಳೂರಿನಲ್ಲಿ ಎಥರ್ 450 ಎಕ್ಸ್‌ ಬೆಲೆ

ಬೆಂಗಳೂರಿನಲ್ಲಿ ಎಥರ್ 450 ಎಕ್ಸ್‌ನ ಹೊಸ ಎಕ್ಸ್-ಶೋರೂಂ ದರ ರೂ.144,500 ಮತ್ತು ಎಥರ್ 450ಗೆ ರೂ.125,490 ಆಗಿದೆ. 125ಸಿಸಿ ಸ್ಕೂಟರ್‌ನ ಮಾಲೀಕತ್ವದ ಒಟ್ಟು ವೆಚ್ಚವನ್ನು ಪರಿಗಣಿಸಿದರೆ ಎಥರ್ 450ಎಕ್ಸ್ ಮತ್ತು ಎಥರ್ 450 ಪ್ಲಸ್ ಮಾಲೀಕರು ತನ್ನ ಹೂಡಿಕೆಯನ್ನು 18-24 ತಿಂಗಳಲ್ಲಿ ಹಿಂಪಡೆಯಬಹುದು ಮತ್ತು ನಂತರದ ವರ್ಷಗಳಲ್ಲಿ ಪ್ರತಿ ಕಿ.ಮೀ.ಗೆ ಸುಮಾರು 2ರೂ. ಉಳಿಸಬಹುದು.

Recommended Video

Rajnath Singh ಅವರು ಧಿಡೀರ್ ಎಂದು ಗಡಿಗೆ ಹೋಗಿದ್ದೇಕೆ | Rajnath Singh warns China | Oneindia Kannada
ಎಥರ್ 450ಎಕ್ಸ್ ಕುರಿತು

ಎಥರ್ 450ಎಕ್ಸ್ ಕುರಿತು

ಎಥರ್ 450ಎಕ್ಸ್ ತನ್ನ ವಿಭಾಗದಲ್ಲಿ ಅತ್ಯಂತ ತ್ವರಿತ ಮತ್ತು ಸ್ಮಾರ್ಟ್ ಸ್ಕೂಟರ್‍ಗಳಲ್ಲಿ ಒಂದಾಗಿದ್ದು ನಾಲ್ಕು ಬಣ್ಣಗಳು- ಕಂದು, ಹಸಿರು ಮತ್ತು ಬಿಳಿಯೊಂದಿಗೆ ಸೀಮಿತ ಆವೃತ್ತಿಯ ಸೀರೀಸ್ 1 ಇವೆ. ಈ ಸ್ಕೂಟರ್ 6ಕೆವಿ ಪಿಎಂಎಸ್‍ಎಂ ಮೋಟಾರ್‌ನಿಂದ ಸನ್ನದ್ಧವಾಗಿದ್ದು 2.9ಕೆಡಬ್ಲ್ಯೂಎಚ್ ಲಿಥಿಯಂ-ಅಯಾನ್ ಬ್ಯಾಟರಿ ಹೊಂದಿದ್ದು 4 ರೈಡಿಂಗ್ ಮೋಡ್‍ಗಳೊಂದಿಗೆ ಬಂದಿದೆ. ಇಕೊ, ರೈಡ್ ಮತ್ತು ಸ್ಪೋರ್ಟ್‍ನೊಂದಿಗೆ ಎಥರ್ ಎನರ್ಜಿ ಹೊಸ ಹೈ ಪರ್ಫಾರ್ಮೆನ್ಸ್ ಮೋಡ್ ಪರಿಚಯಿಸಿದೆ. `ವಾರ್ಪ್' ಎಥರ್ 450ಎಕ್ಸ್ ವಾರ್ಪ್ ಮೋಡ್‍ನಲ್ಲಿ ಕೇವಲ 3.3ಸೆಕೆಂಡಿನಲ್ಲಿ ಗಂಟೆಗೆ 0ಯಿಂದ 40 ಕಿ.ಮೀ. ಚಲಿಸುವ ಮೂಲಕ ಇದನ್ನು 125ಸಿಸಿ ವಿಭಾಗದಲ್ಲಿ ಅತ್ಯಂತ ತ್ವರಿತ ಸ್ಕೂಟರ್ ಆಗಿಸಿದೆ ಮತ್ತು ನಗರದ ಟ್ರಾಫಿಕ್ ನಡುವೆ ಸಂಚರಿಸಲು ಅತ್ಯಂತ ಪರಿಪೂರ್ಣ ಆಯ್ಕೆಯಾಗಿಸಿದೆ.

English summary
Ather Energy, India’s first intelligent electric scooter manufacturer, inaugurated its second experience centre - Ather Space, in JP Nagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X