• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಟಿಎಫ್ ಮತ್ತೆ ಹೆಚ್ಚಳ, ವಿಮಾನಯಾನ ದರ ದುಬಾರಿ ಸಾಧ್ಯತೆ?

|
Google Oneindia Kannada News

ನವದೆಹಲಿ, ಜನವರಿ 17: ಜೆಟ್ ಇಂಧನ ಅಥವಾ ಎಟಿಎಫ್ ಬೆಲೆ ಮತ್ತೊಮ್ಮೆ ಏರಿಕೆ ಮಾಡಲಾಗಿದೆ. ಭಾನುವಾರದಿಂದಲೇ ಜಾರಿಗೆ ಬರುವಂತೆ ಶೇ 4.2ರಷ್ಟು ಏರಿಕೆಯಾಗಿದೆ, ಪೆಟ್ರೋಲ್, ಡೀಸೆಲ್ ಬೆಲೆಗಳು ಬದಲಾವಣೆಯಾಗಿಲ್ಲ. ಎಟಿಎಫ್ ಬೆಲೆ ಜನವರಿ ತಿಂಗಳಲ್ಲೇ ಎರಡನೇ ಬಾರಿ ಹೆಚ್ಚಳ ಕಂಡಿದೆ. ಕೇಂದ್ರ ಬಜೆಟ್ 2022 ಹಾಗೂ ಐದು ರಾಜ್ಯಗಳ ಚುನಾವಣೆಗೂ ಮುನ್ನ ಇಂಧನ ಬೆಲೆ ವ್ಯತ್ಯಯದ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ, ಆದರೆ, ಎಟಿಎಫ್ ಬೆಲೆ ಹೆಚ್ಚಳ ನಂತರವೂ ವಿಮಾನಯಾನ ಸಂಸ್ಥೆಗಳು ಸದ್ಯಕ್ಕಂತೂ ತಮ್ಮ ದರ ಪಟ್ಟಿ ಪರಿಷ್ಕರಿಸಿಲ್ಲ.

ಸರ್ಕಾರಿ ಸ್ವಾಮ್ಯದ ಇಂಧನ ರಿಟೈಲ್ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಏವಿಯೇಷನ್ ಟರ್ಬೈನ್ ಇಂಧನ (ATF) ಬೆಲೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕಿಲೋಲೀಟರ್‌ಗೆ 3,232.87 ಅಥವಾ ಶೇಕಡಾ 4.25 ರಿಂದ 79,294.91 ಕ್ಕೆ ಹೆಚ್ಚಿಸಲಾಗಿದೆ.

ಇದು ಈ ತಿಂಗಳಲ್ಲಿ ಎರಡನೇ ಬಾರಿ ದರ ಏರಿಕೆಯಾಗಿದೆ. ಜನವರಿ 1 ರಂದು ಪ್ರತಿ ಕಿಲೋಗೆ ರೂ 2,039.63 ಅಥವಾ ಶೇಕಡಾ 2.75 ರಿಂದ ರೂ 76,062.04 ಕ್ಕೆ ಏರಿಸಲಾಯಿತು. ಅದರ ನಂತರ, ಅಂತಾರಾಷ್ಟ್ರೀಯ ದರಗಳು ಸ್ಥಿರಗೊಂಡರೂ ಎಟಿಎಫ್ ಬೆಲೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಯಿತು.

ಡಿಸೆಂಬರ್ 1 ಮತ್ತು 15 ರಂದು ಪ್ರತಿ ಕಿಲೋಗೆ ಒಟ್ಟು ರೂ 6,812.25 ಅಥವಾ ಶೇಕಡಾ 8.4 ರಷ್ಟು ಕಡಿತಗೊಳಿಸುವ ಮೊದಲು ATF ಬೆಲೆಯು ನವೆಂಬರ್ ಮಧ್ಯದಲ್ಲಿ ಪ್ರತಿ KL ಗೆ ರೂ 80,835.04 ಕ್ಕೆ ತಲುಪಿತ್ತು.

ಹಿಂದಿನ ಹದಿನೈದು ದಿನಗಳಲ್ಲಿ ಅಂತಾರಾಷ್ಟ್ರೀಯ ಮಾನದಂಡದ ಸರಾಸರಿ ಬೆಲೆಯನ್ನು ಆಧರಿಸಿ, ಜೆಟ್ ಇಂಧನ ಬೆಲೆಗಳನ್ನು ಪ್ರತಿ ತಿಂಗಳ 1 ಮತ್ತು 16 ರಂದು ಪರಿಷ್ಕರಿಸಲಾಗುತ್ತದೆ.

ಜಾಗತಿಕವಾಗಿ ಕಚ್ಚಾತೈಲ ಬೆಲೆ ಸತತ ಏರಿಕೆಯಾಗುತ್ತಿದ್ದರೂ ಭಾರತದಲ್ಲಿಇಂದು ಕೂಡ ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ದೇಶದ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ನವೆಂಬರ್​ 4ರಿಂದ ಇಂಧನ ದರ ಸ್ಥಿರವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದು ಕಚ್ಚಾತೈಲದ ಬೆಲೆ ಏರಿಳಿತವಾಗುತ್ತಿದೆ. ಕಳೆದ ತಿಂಗಳ ದೀಪಾವಳಿ ಹಬ್ಬದ ವೇಳೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ ಬಳಿಕ ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿತ್ತು. ಕಳೆದ ನವೆಂಬರ್ ತಿಂಗಳ ದೀಪಾವಳಿ ಸಂದರ್ಭದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾದ (ಪೆಟ್ರೋಲ್ 5 ರು ಪ್ರತಿ ಲೀಟರ್ ಹಾಗೂ ಡೀಸೆಲ್ 10 ರು ಪ್ರತಿ ಲೀಟರ್) ಅನಂತರ ದೇಶದಲ್ಲಿ ಇಂಧನ ದರದಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ.

ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ನವೆಂಬರ್ 5, 2021ರಂದು 82.74 ಡಾಲರ್ ಪ್ರತಿ ಬ್ಯಾರೆಲ್ ತಲುಪಿತ್ತು. ನಂತರ ಡಿಸೆಂಬರ್ 1ರ ವೇಳೆಗೆ ಯುಎಸ್​ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 68.87 ಡಾಲರ್​ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿತ್ತು. ಅಕ್ಟೋಬರ್ 26, 2021ರಂದು ಅತ್ಯಧಿಕ 86.40 ಡಾಲರ್ ಪ್ರತಿ ಬ್ಯಾರೆಲ್ ಮುಟ್ಟಿತ್ತು.

   Virat Kohli ನಿರ್ಧಾರದಿಂದ ಆಘಾತಗೊಂಡ Rohit Sharma ಹೇಳಿದ್ದೇನು? | Oneindia Kannada

   ಈ ಸಮಯಕ್ಕೆ ಶೇ 0.39 ರಷ್ಟು ಏರಿಕೆಯಾಗಿ 86.45 ಡಾಲರ್ ಪ್ರತಿ ಬ್ಯಾರೆಲ್ ನಂತಿದೆ(1 USD=74.16 ರುಪಾಯಿ) ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.(ಪಿಟಿಐ)

   English summary
   Jet fuel or ATF price on Sunday was hiked by 4.2 per cent - the second increase in rates this month warranted by firming international oil prices, but petrol and diesel prices remained unchanged for the 72nd day in a row.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X