ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌: ಅಕ್ಟೋಬರ್ 1ರಿಂದ ಈ ಹೊಸ ನಿಯಮಗಳು ಜಾರಿ?

|
Google Oneindia Kannada News

ಜಾಗತಿಕವಾಗಿ ಭಾರತೀಯ ರೂಪಾಯಿ ಮೌಲ್ಯವು ಕುಸಿಯುತ್ತಿದೆ ಇನ್ನು ಇದರ ಮಧ್ಯದಲ್ಲಿ ಮುಂದಿನ ತಿಂಗಳು ಅಕ್ಟೋಬರ್ 1ರಿಂದ ಪ್ರತಿದಿನ ಬ್ಯಾಂಕ್‌ಗೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗಲಿವೆ. ಅಕ್ಟೋಬರ್ ಆರಂಭದೊಂದಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಡ್-ಆನ್-ಫೈಲ್ ಟೋಕನೈಸೇಶನ್ ನಿಯಮವು ಬದಲಾಗಲಿದೆ. ಅಕ್ಟೋಬರ್ 1ರಿಂದ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ.

ಹೌದು, ಸೆಪ್ಟೆಂಬರ್ ತಿಂಗಳು ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಇದಾದ ನಂತರ ಅಕ್ಟೋಬರ್ ತಿಂಗಳು ಪ್ರಾರಂಭವಾಗುತ್ತದೆ. ನಿಮ್ಮ ಬ್ಯಾಂಕ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಹಲವು ನಿಯಮಗಳು ಅಕ್ಟೋಬರ್ ಮೊದಲಿನಿಂದ ಬದಲಾಗಲಿವೆ. ಮುಂದಿನ ತಿಂಗಳಿನಿಂದ ಅನೇಕ ದೈನಂದಿನ ವಿಷಯಗಳು ಬದಲಾಗಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ಜೀವನಕ್ಕೆ ಸಂಬಂಧಿಸಿವೆ. ಇವುಗಳಲ್ಲಿ ಬ್ಯಾಂಕಿಂಗ್ ನಿಯಮಗಳಿಂದ ಹಿಡಿದು ಎಲ್‌ಪಿಜಿ ಗ್ಯಾಸ್‌ಗೆ ಅನೇಕ ಬದಲಾವಣೆಗಳು ಸೇರಿವೆ. ಮುಂದಿನ ತಿಂಗಳಿನಿಂದ ಯಾವ ನಿಯಮಗಳು ಬದಲಾಗಲಿವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ.

 ಅಟಲ್ ಪಿಂಚಣಿ ಯೋಜನೆಗೆ ಹೊಸ ನಿಯಮ?

ಅಟಲ್ ಪಿಂಚಣಿ ಯೋಜನೆಗೆ ಹೊಸ ನಿಯಮ?

ಮುಂದಿನ ತಿಂಗಳಿನಿಂದ ಅಟಲ್ ಪಿಂಚಣಿ ಯೋಜನೆಯ ನಿಯಮಗಳಲ್ಲಿ ಸರ್ಕಾರ ಬದಲಾವಣೆ ತರಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರು ಮಾಸಿಕ 5000 ರೂ.ವರೆಗೆ ಪಿಂಚಣಿ ಪಡೆಯುತ್ತಾರೆ. ಈಗ ಅಕ್ಟೋಬರ್ 1ರಿಂದ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಯ ನಂತರ, ಹೊಸ ನಿಯಮಗಳ ಅಡಿಯಲ್ಲಿ ಆದಾಯ ತೆರಿಗೆ ಪಾವತಿಸುವ ಜನರು ಇನ್ನು ಮುಂದೆ ಈ ಯೋಜನೆಯ ಲಾಭವನ್ನು ಪಡೆಯುವುದಿಲ್ಲ ಹಾಗಾಗಿ ಈ ಹೊಸ ನಿಯಮವು ಅಕ್ಟೋಬರ್ 1, 2022ರಿಂದ ಜಾರಿಗೆ ಬರಲಿದೆ.

ನೀವು ತೆರಿಗೆ ಪಾವತಿಸಿದರೆ ಮತ್ತು ಅಟಲ್ ಪಿಂಚಣಿ ಯೋಜನೆ (APY)ಯ ಲಾಭವನ್ನು ಪಡೆಯಲು ಬಯಸಿದರೆ, ನಂತರ ಎಚ್ಚರದಿಂದಿರಿ. ಅಕ್ಟೋಬರ್ 1, 2022 ರಿಂದ ತೆರಿಗೆ ಪಾವತಿಸುವ ಯಾವುದೇ ನಾಗರಿಕರು APYಗೆ ಸೇರಲು ಅರ್ಹರಾಗಿರುವುದಿಲ್ಲ. ಅಂದರೆ, ಈ ತಿಂಗಳಿನಿಂದ ನಿಮಗೆ ಇನ್ನೂ 7 ದಿನಗಳು ಉಳಿದಿವೆ. ಇಲ್ಲಿಯವರೆಗೆ, ಸಾಮಾನ್ಯ ಜನರಲ್ಲದೆ, ತೆರಿಗೆ ಪಾವತಿದಾರರೂ ಈ ಯೋಜನೆಗೆ ಸೇರಬಹುದಾಗಿತ್ತು. ಆದರೆ ಅಕ್ಟೋಬರ್ 1, 2022 ರಿಂದ ಇದರಲ್ಲಿ ದೊಡ್ಡ ಬದಲಾವಣೆಯಾಗಲಿದೆ. APY ದೇಶದಲ್ಲಿ ಜನಪ್ರಿಯ ಸರ್ಕಾರಿ ಪಿಂಚಣಿ ಯೋಜನೆಯಾಗಿದೆ. ಇದರ ಚಂದಾದಾರರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಭಾರತೀಯ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಪ್ರಕಾರ, ಸುಮಾರು 40 ಮಿಲಿಯನ್ ಜನರು ಈ ಯೋಜನೆಗೆ ಸೇರಿದ್ದಾರೆ.

 6 ದಿನಗಳು ಉಳಿದಿವೆ ಮಾತ್ರ

6 ದಿನಗಳು ಉಳಿದಿವೆ ಮಾತ್ರ

ನೀವು ಸಹ ತೆರಿಗೆ ಪಾವತಿದಾರರಾಗಿದ್ದರೆ ಮತ್ತು ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ನಿಮಗೆ ಸೆಪ್ಟೆಂಬರ್ ವರೆಗೆ ಸಮಯವಿದೆ. ಅಂದರೆ, ಇಂದಿನಿಂದ ಇನ್ನೂ 6 ದಿನಗಳಿವೆ. ಈ 6 ದಿನಗಳಲ್ಲಿ ನೀವು ಖಾತೆಯನ್ನು ಪ್ರಾರಂಭಿಸಿದ್ದರೆ, ಅಕ್ಟೋಬರ್ 1ರ ನಂತರ, ನಿಯಮದ ಅನುಷ್ಠಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಅಕ್ಟೋಬರ್ 1ರ ನಂತರ ತೆರಿಗೆ ಪಾವತಿಸಿದ ನಂತರ ಖಾತೆಯನ್ನು ತೆರೆದರೆ, ನಂತರ ಮಾಹಿತಿಯ ಸ್ವೀಕೃತಿಯ ಮೇಲೆ ಅದನ್ನು ಮುಚ್ಚಲಾಗುತ್ತದೆ ಹಾಗೂ ಈ ಯೋಜನೆಯ ಯಾವುದೇ ಲಾಭ ಸಿಗುವುದಿಲ್ಲ.

 ಡಿಮ್ಯಾಟ್ ಖಾತೆಯು ಹೆಚ್ಚು ಸುರಕ್ಷಿತ

ಡಿಮ್ಯಾಟ್ ಖಾತೆಯು ಹೆಚ್ಚು ಸುರಕ್ಷಿತ

ಡಿಮ್ಯಾಟ್ ಖಾತೆದಾರರಿದ್ದಾರೆ ಮತ್ತು ಈ ಮೂಲಕ ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಖರೀದಿಸುವ ಅಥವಾ ಮಾರಾಟ ಮಾಡುವವರಿಗೆ ಒಳ್ಳೆಯ ಸುದ್ದಿ ಇದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಜೂನ್ 14ರಂದು ಸುತ್ತೋಲೆ ಹೊರಡಿಸಿತ್ತು. ಡಿಮ್ಯಾಟ್ ಖಾತೆದಾರರು ಸೆಪ್ಟೆಂಬರ್ 30, 2022ರೊಳಗೆ ಎರಡು ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸುವುದು ಕಡ್ಡಾಯವಾಗಿದೆ. ಎರಡು ಅಂಶದ ದೃಢೀಕರಣವನ್ನು ಸಕ್ರಿಯಗೊಳಿಸದಿದ್ದರೆ ಅಕ್ಟೋಬರ್ 1ರಿಂದ ಡಿಮ್ಯಾಟ್ ಖಾತೆಗೆ ಲಾಗಿನ್ ಮಾಡಲು ಸಾಧ್ಯವಾಗುವುದಿಲ್ಲ. ಈ ಸುತ್ತೋಲೆಯ ಅಡಿಯಲ್ಲಿ, ಖಾತೆದಾರನು ತನ್ನ ಡಿಮ್ಯಾಟ್ ಖಾತೆಗೆ ಲಾಗಿನ್ ಮಾಡಲು ಬಯೋಮೆಟ್ರಿಕ್ ದೃಢೀಕರಣವನ್ನು ದೃಢೀಕರಣ ಅಂಶವಾಗಿ ಬಳಸಬೇಕಾಗುತ್ತದೆ.

 ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಿಯಮಗಳು

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಿಯಮಗಳು

ಅಕ್ಟೋಬರ್ 1ರಿಂದ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತವೆ. ರಿಸರ್ವ್ ಬ್ಯಾಂಕ್ ಪಾವತಿ ಕಂಪನಿಗಳು ಗ್ರಾಹಕರ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಡೇಟಾವನ್ನು ಸಂಗ್ರಹಿಸುವುದನ್ನು ನಿಷೇಧಿಸಿದೆ. ಪಾವತಿ ಕಂಪನಿಗಳು ಈಗ ಕಾರ್ಡ್‌ಗೆ ಬದಲಾಗಿ ಪರ್ಯಾಯ ಕೋಡ್‌ನ್ನು ಒದಗಿಸಬೇಕಾಗುತ್ತದೆ. ಟೋಕನ್ ಎಂದು ಹೆಸರಿಸಲಾಗಿದೆ. ಈ ಟೋಕನ್ ಅನನ್ಯವಾಗಿರುತ್ತದೆ ಇದು ಒಂದೇ ಸಮಯದಲ್ಲಿ ಅನೇಕ ಕಾರ್ಡ್‌ಗಳಿಗೆ ಕಾರ್ಯನಿರ್ವಹಿಸುತ್ತದೆ.

 ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತೆ ಏರಿಕೆ?

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತೆ ಏರಿಕೆ?

ಅಕ್ಟೋಬರ್ 1ರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆಯಾಗಲಿದೆ. ಪ್ರತಿ ತಿಂಗಳ ಮೊದಲ ದಿನದಂದು, ಗೃಹಬಳಕೆಯ ಎಲ್‌ಪಿಜಿ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಹೊಸ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಹಾಗಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆ ಕಂಡು ಬಂದರು ಬರಬಹುದು. ಇನ್ನು ರಿಸರ್ವ್ ಬ್ಯಾಂಕ್ ಆಫ್ ಹಣಕಾಸು ನೀತಿ ರೂಸಿಸಲು ಸಿದ್ಧತೆಯಲಿದೆ ಮುಂದಿನ ವಾರ ಅನೇಕ ಬ್ಯಾಂಕ್‌ ವಾಣಿಜ್ಯ ವ್ಯವಹಾಗಳ ಕುರಿತಾಗಿ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಇನ್ನು ರೂಪಾಯಿ ಮೌಲ್ಯವು ಕುಸಿತದಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಾವ ರೀತಿ ಹಣಕಾಸು ನೀತಿ ರೂಪಿಸಲಿದೆ ಹಾಗೂ ಜನರಿಗೆ ಯಾವ ರೀತಿ ಹೊರೆಯಾಗಲಿದೆ ಎಂಬುವುದು ಕಾದು ನೋಡಬೇಕಾಗಿದೆ.

English summary
Atal Pension Yojana: Big blow to taxpayers! What will change from October 1 Check here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X