ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ತಿಂಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

|
Google Oneindia Kannada News

ಚೆನ್ನೈ, ಡಿಸೆಂಬರ್ 05: ಟ್ರಕ್ ಹಾಗೂ ಬಸ್ ನಿರ್ಮಾಣ ಸಂಸ್ಥೆ ಅಶೋಕ್ ಲೇಲ್ಯಾಂಡ್ ತನ್ನ ಉತ್ಪಾದನೆ ಪ್ರಕ್ರಿಯೆಯನ್ನು ಕೆಲದಿನಗಳ ಮಟ್ಟಿಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಡಿಸೆಂಬರ್ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಈ ಅನುತ್ಪಾದಕ ಅವಧಿಯನ್ನು ಆಯ್ಕೆ ಮಾಡಲಾಗಿದೆ. 2 ರಿಂದ 12 ದಿನಗಳ ಕಾಲ ಕೆಲ ಘಟಕಗಳಲ್ಲಿ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಎಸ್ಇಗೆ ಬುಧವಾರದಂದು ಅಶೋಕ್ ಲೇಲ್ಯಾಂಡ್ ಮಾಹಿತಿ ನೀಡಿದೆ.

ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?

ಚೆನ್ನೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಶೋಕ್ ಲೇಲ್ಯಾಂಡ್ ಕೂಡಾ ಬೇಡಿಕೆ ಕುಸಿತ, ಭಾರತ್ ಸ್ಟೇಜ್ 6 ನಿಯಮಾವಳಿ ಅಳವಡಿಕೆ ಪ್ರಕ್ರಿಯೆಗೆ ಒಗ್ಗಿಕೊಳ್ಳಬೇಕಾಗಿದೆ. ಹೀಗಾಗಿ ಕಳೆದ ಜುಲೈ ತಿಂಗಳಿನಿಂದಲೇ ಉತ್ಪಾದನೆಯನ್ನು ತಗ್ಗಿಸುತ್ತಾ ಬಂದಿದೆ. ಜುಲೈನಲ್ಲಿ 9 ದಿನ, ಆಗಸ್ಟ್ ನಲ್ಲಿ 10 ದಿನ, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ 13 ದಿನ, ನವೆಂಬರ್ ನಲ್ಲಿ 12 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸಿತ್ತು.

Ashok Leyland to shut down production for up to 12 days in December

ನವೆಂಬರ್ 2019ರಲ್ಲಿ ಶೇ22ರಷ್ಟು ಮಾರಾಟ ಕುಸಿತಗೊಂಡಿತ್ತು. ಕೇವಲ 10,175 ವಾಹನಗಳು ಮಾರಾಟ ಮಾಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 13119 ವಾಹನಗಳು ಮಾರಾಟವಾಗಿದ್ದವು.

ವಾಹನ ಸರ್ವಿಸಿಂಗ್ ಇನ್ನು ಸುಲಭ, ಪಿಟ್ ಸ್ಟಾಪ್ ಆಪ್ ಇದೆಯಲ್ಲವಾಹನ ಸರ್ವಿಸಿಂಗ್ ಇನ್ನು ಸುಲಭ, ಪಿಟ್ ಸ್ಟಾಪ್ ಆಪ್ ಇದೆಯಲ್ಲ

ಜುಲೈ -ಸೆಪ್ಟೆಂಬರ್ ತ್ರೈಮಾಸಿಕ ಅವಧಿಯಲ್ಲಿ ಅಶೋಕ್ ಲೇಲ್ಯಾಂಡ್ ಶೇ 92.6 ರಷ್ಟು ನಿವ್ವಳ ಲಾಭದಲ್ಲಿ ಕುಸಿತ ಕಂಡು 38.9 ಕೋಟಿ ರು ಮಾತ್ರ ಗಳಿಸಿತ್ತು. ವರ್ಷದಿಂದ ವರ್ಷಕ್ಕೆ ಇದೇ ಅವಧಿಯಲ್ಲಿ 527.7 ಕೋಟಿ ರು ಗಳಿಸಿತ್ತು. ಸಂಸ್ಥೆಯ ಆದಾಯ ಕೂಡಾ 48.4% ಕುಸಿತವಾಗಿ 3,929.5 ಕೋಟಿ ರು ಬಂದಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 28, 938 ಕೋಟಿ ರು ಗಳಿಸಿತ್ತು.

English summary
Truck and bus maker Ashok Leyland on Wednesday said it will suspend manufacturing operations at some of its plants for up to 12 days in December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X