ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಸೃಷ್ಟಿಗಾಗಿ ಉತ್ತಮ ವ್ಯವಹಾರ ಜಾಲ ಅಗತ್ಯ: ಕೆಜೆ ಜಾರ್ಜ್

|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಅವರು ಆಸಿಯಾನ್ ಶೃಂಗಸಭೆ 2019ರಲ್ಲಿ ಬಿ2ಬಿ, ಬಿ2ಸಿ ಮತ್ತು ಜಿ2ಜಿ ಕಾರ್ಯಕ್ರಮ ಉದ್ಘಾಟಿಸಿದರು.

ಆಸಿಯಾನ್ ಶೃಂಗಸಭೆ 2019ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತಮ ಹೂಡಿಕೆ ಒಳಹರಿವು ಮತ್ತು ಉದ್ಯೋಗ ಸೃಷ್ಟಿಗಾಗಿ ಉತ್ತಮ ವ್ಯವಹಾರ ಜಾಲವನ್ನು ಅಭಿವೃದ್ಧಿಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಕರ್ನಾಟಕದಲ್ಲಿ ಉದ್ದಿಮೆಗಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡುವಲ್ಲಿ ತಮ್ಮ ಸರ್ಕಾರ ಬದ್ಧ ಎಂದು ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಸಿಆರ್ ಪಿಎಫ್ ನಲ್ಲಿ 39 ಹುದ್ದೆಗಳಿವೆ, ಕೂಡಲೇ ಅರ್ಜಿ ಹಾಕಿಸಿಆರ್ ಪಿಎಫ್ ನಲ್ಲಿ 39 ಹುದ್ದೆಗಳಿವೆ, ಕೂಡಲೇ ಅರ್ಜಿ ಹಾಕಿ

ಈ ಪ್ರತಿಷ್ಠಿತ ಸಭೆಯಲ್ಲಿ ಮಾತನಾಡಿದ ಅವರು, "18 ಗುರುತಿಸಲ್ಪಟ್ಟ ವ್ಯವಹಾರ ಕ್ಷೇತ್ರಗಳ ಬಗ್ಗೆ ಗಮನ ಹರಿಸಲಾಗಿದ್ದು, ಆಸಿಯಾನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ವ್ಯವಹಾರ ಸಮಾವೇಶ-2019, ರಫ್ತು ಅವಕಾಶಗಳು, ಜಂಟಿ ಸಹಭಾಗಿತ್ವ, ತಂತ್ರಜ್ಞಾನ, ಉತ್ಪಾದನಾ ಸಾಮರ್ಥ್ಯ ಹೆಚ್ಚಳದ ಸಾಧ್ಯತೆಗಳನ್ನು ಪರಿಶೀಲಿಸಲು ಉತ್ತಮ ವೇದಿಕೆ ಎಂದು ಬಣ್ಣಿಸಿದರು. ರಾಜ್ಯದಲ್ಲಿ ನಿರ್ದಿಷ್ಟ ಉತ್ಪಾದನಾ ಕ್ಲಸ್ಟರ್‍ಗಳನ್ನು ರಚಿಸಿಕೊಂಡು, ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಒಂಬತ್ತು ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು" ಎಂದು ವಿವರಿಸಿದರು.

Asean Summit 2019 : Minister George inaugurates B2B, B2C & G2G programs

ದತ್ತಾಂಶ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ, ಆ್ಯನಿಮೇಶನ್, ವಿಷುವಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ ಕ್ಷೇತ್ರ, ಸೈಬರ್ ಭದ್ರತೆ, ಮೆಷಿನ್ ಇಂಟೆಲಿಜೆನ್ಸ್ & ರೋಬೋಟಿಕ್ಸ್ ಹೀಗೆ ಹಲವು ವಲಯಗಳಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಿ ಈ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಬೆಂಗಳೂರು ಗ್ರಾಂ. ಕೋರ್ಟ್‌ನಲ್ಲಿ 149 ಹುದ್ದೆಗೆ ಅರ್ಜಿ ಆಹ್ವಾನಬೆಂಗಳೂರು ಗ್ರಾಂ. ಕೋರ್ಟ್‌ನಲ್ಲಿ 149 ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ ಕೈಗೊಂಡ ಕ್ರಮಗಳನ್ನು ವಿವರಿಸಿದ ಸಚಿವ ಕೆ.ಜೆ.ಜಾರ್ಜ್, "ನಮ್ಮ ಸರ್ಕಾರ ಕರ್ನಾಟಕವನ್ನು ಅದರಲ್ಲೂ ಮುಖ್ಯವಾಗಿ ಬೆಂಗಳೂರು ನಗರವನ್ನು ಮುಂದಿನ ಪೀಳಿಗೆಯ ತಂತ್ರಜ್ಞಾನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಬದ್ಧವಾಗಿದೆ ಹಾಗೂ ಆ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ. ಥೊಲಾನ್ ಶ್ರೇಯಾಂಕದ ಪ್ರಕಾರ, ಬೆಂಗಳೂರು ನಗರವನ್ನು ಜಾಗತಿಕಮಟ್ಟದಲ್ಲಿ ನಂಬರ್ ವನ್ ಡಿಜಿಟನ್ ನಗರ ಎಂದು ಗುರುತಿಸಲಾಗಿದೆ. ವಿಶ್ವದ 25 ಹೈಟೆಕ್ ನಗರಗಳ ಪೈಕಿ 19ನೇ ಸ್ಥಾನದಲ್ಲಿರುವ ಭಾರತದ ಏಕೈಕ ನಗರವಾಗಿರುವ ಬೆಂಗಳೂರು, ಬರ್ಲಿನ್, ಹಾಂಕಾಂಗ್ ಹಾಗೂ ಸೆಹಗನ್ ನಗರಗಳನ್ನೂ ಮೀರಿಸಿದೆ ಎಂದು ವಿವರಿಸಿದರು.

English summary
Asean Summit 2019 : Minister George inaugurated B2B, B2C & G2G programs. George stressed on the need of business networking for better investment influx and employment creation. Further, the minister assured of all the support for investors to have a conducive investment ecosystem in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X