ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ iOS 12,MacOS Mojave ಬಿಡುಗಡೆ ಮಾಡಿದ ಆಪಲ್

By Mahesh
|
Google Oneindia Kannada News

ಬೆಂಗಳೂರು, ಜೂನ್ 05: ಆಪಲ್ ಸಂಸ್ಥೆ ತನ್ನ ವಾರ್ಷಿಕ ವಿಶ್ವದಾದ್ಯಂತ ಡೆವಲಪರ್ಸ್ ಸಮ್ಮೇಳನ(WWDC) 2018ಕ್ಕೆ ಸೋಮವಾರದಂದು ಚಾಲನೆ ನೀಡಿದೆ. ಈ ಸಂದರ್ಭದಲ್ಲಿ ಕೆಲವು ಪ್ರಮುಖ ಘೋಷಣೆಗಳನ್ನು ಆಪಲ್ ಮಾಡಲು ಮುಂದಾಗಿದ್ದು, ಮುಖ್ಯವಾಗಿ ಐಒಎಸ್ 12 ಬಿಡುಗಡೆ ಘೋಷಿಸಲಾಗಿದೆ.

ಸಂಸ್ಥೆಯ ಪ್ರಮುಖ ಸಾಫ್ಟ್ ವೇರ್ ಸೇವೆಗಳಾದ ಐಒಎಸ್, ವಾಚ್ ಒಎಸ್ ಹಾಗೂ ಮ್ಯಾಕ್ ಒಎಸ್ ಕುರಿತಂತೆ ಪ್ರಮುಖ ಸುಧಾರಣೆಗಳನ್ನು ಪ್ರಕಟಿಸಲಾಗಿದೆ.

ಸಾಫ್ಟ್ ವೇರ್ ಡೆವಲಪರ್ ಗಳಿಗೆ ಸಂಚಲನ ಮೂಡಿಸಿದ ಮೈಕ್ರೋಸಾಫ್ಟ್ಸಾಫ್ಟ್ ವೇರ್ ಡೆವಲಪರ್ ಗಳಿಗೆ ಸಂಚಲನ ಮೂಡಿಸಿದ ಮೈಕ್ರೋಸಾಫ್ಟ್

ಐಒಎಸ್ 12: ಹೊಸ ಆವೃತ್ತಿ ಈ ತಿಂಗಳ ಕೊನೆಗೆ ಲಭ್ಯವಾಗಲಿದ್ದು, ಆಕ್ಟಿವಿಟಿ ವರದಿ, ಆಪ್ ಮಿತಿ, ಡು ನಾಟ್ ಡಿಸ್ಟರ್ಬ್, ನೋಟಿಫಿಕೇಷನ್ ನಿಯಂತ್ರಣ ಸೇರಿದಂತೆ ಹಲವು ಹೊಸ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಾಗಲಿದೆ.

Apple WWDC 2018: Apple iOS 12, watchOS 5, MacOS Mojave, tvOS announced

ವಾಚ್ ಒಎಸ್ : ಆಪಲ್ ನ ಧರಿಸಬಲ್ಲ ಸಾಧನಗಳಿಗೆ ಹೊಸ ಅಪ್ಡೇಟ್ ಲಭ್ಯವಿದ್ದು, ಆಕ್ಟಿವಿಟಿ ಹಂಚುವ ಸ್ಪರ್ಧೆ, ರನ್ನಿಂಗ್ ಫೀಚರ್ಸ್, ಆಟೋ ವರ್ಕ್ ಔಟ್ ಡಿಟೆಕ್ಟನ್. ಅಲ್ಲದೆ ಹೊಸ ವಾಕಿ ಟಾಕಿ ಅಪ್ಲಿಕೇಷನ್ ಸಿಗಲಿದೆ. ಸಿರಿ ವಾಚ್ ಫೇಸ್, ಆಪಲ್ ಪಾಡ್ ಕಾಸ್ಟ್ ಕೂಡಾ ಆಪಲ್ ವಾಚ್ ಒಎಸ್ 5ರಲ್ಲಿ ಲಭ್ಯ.

ಮ್ಯಾಕ್ ಒಸ್ ಮೊಜವೆ: ಇದರಲ್ಲಿ ಡಾರ್ಕ್ ಮೋಡ್, ಎಕ್ಸ್ ಕೋಡ್ ನ ಇನ್ವರ್ಟೆಡ್ ಲುಕ್ ನೀಡಲಿದೆ.

ಟಿವಿ ಒಎಸ್: ಆಪಲ್ ಟಿವಿ 4ಕೆ ನಲ್ಲಿ 4ಕೆ ಎಚ್ ಡಿ ಆರ್ ಸಿನಿಮಾಗಳು ಲಭ್ಯವಿರಲಿದೆ. ಐಟ್ಯೂನ್ ಲೈಬ್ರರಿ, ಡಾಲ್ಬಿ ಅಟ್ಮೊಸ್, ಡಾಲ್ಬಿ ವಿಷನ್ ಸೌಲಭ್ಯಗಳ ಬೆಂಬಲ ಸಿಗಲಿದೆ . ಟಿವಿಒಎಸ್ 12 ನಲ್ಲಿ ಆಟೋ ಸೈನ್ ಇನ್ ಸೌಲಭ್ಯವಿದ್ದು, ಗ್ರಾಹಕರ ಬ್ರಾಡ್ ಬ್ಯಾಂಡ್ ನೆಟ್ವರ್ಕ್ ಗೆ ಆಟೋಮ್ಯಾಟಿಕ್ ಆಗಿ ಸೈನ್ ಇನ್ ಆಗಲಿದೆ.

English summary
Apple's annual developer conference Worldwide Developer Conference (WWDC) 2018 kicked off on Monday. The company made some major announcements with an emphasis on developers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X