ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪಲ್ ವಾಚ್ ಸೀರಿಸ್ 3 ನಲ್ಲಿ ಜಿಯೋ ನೆಟ್ವರ್ಕ್

By Mahesh
|
Google Oneindia Kannada News

ಮುಂಬೈ, ಮೇ 12: ಜಿಯೋ, ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‍ವರ್ಕ್, ಇಂದು ತಾನು ಆಪಲ್ ವಾಚ್ ಸೀರಿಸ್ 3 (ಜಿಪಿಎಸ್ + ಸೆಲ್ಯುಲಾರ್) ಅನ್ನು ಮಾರಾಟ ಮಾಡಲು ಆರಂಭಿಸಿರುವುದಾಗಿ ಪ್ರಕಟಿಸಿದೆ, ಇದು ವಿಶ್ವದ ನಂಬರ್ ಒನ್ ವಾಚ್‍ಗೆ ಬಿಲ್ಟ್ ಇನ್ ಸೆಲ್ಯುಲಾರ್ ಅನ್ನು ಸೇರಿಸಿದೆ.

ಸೆಲ್ಯುಲಾರ್ ನೊಂದಿಗೆ, ಗ್ರಾಹಕರು ಕೇವಲ ತಮ್ಮ ಆಪಲ್ ವಾಚ್ ಧರಿಸಿಕೊಂಡು ಎಲ್ಲಿ ಹೋದರೂ ಜನರೊಂದಿಗೆ ಹಾಗೂ ಮಾಹಿತಿಯೊಂದಿಗೆ ಸಂಪರ್ಕದಲ್ಲಿ ಇರಬಹುದಾಗಿದೆ.

ಮೊಬೈಲ್ ಸುಪ್ರಭಾತಮ್: ನೆಟ್ಟು ಉಚಿತಮ್ ಹುಚ್ಚು ಖಚಿತಮ್ಮೊಬೈಲ್ ಸುಪ್ರಭಾತಮ್: ನೆಟ್ಟು ಉಚಿತಮ್ ಹುಚ್ಚು ಖಚಿತಮ್

ಆಪಲ್ ವಾಚ್ ಸೀರಿಸ್ 3 (ಜಿಪಿಎಸ್+ಸೆಲ್ಯುಲಾರ್ )ನ ಗ್ರಾಹಕರ ಪ್ರಾರಂಭಕ್ಕೆ ನೆರವಾಗಲು, ಜಿಯೋ ಕ್ರಾಂತಿಕಾರಕ ಜಿಯೋಎವ್ರೀವೇರ್ ಕನೆಕ್ಟ್ ಸೇವೆಯನ್ನು ತನ್ನ ಎಲ್ಲಾ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಘೋಷಿಸಿದೆ. ಆಪಲ್ ವಾಚ್ ಸೀರಿಸ್ 3 (ಜಿಪಿಎಸ್+ ಸೆಲ್ಯುಲಾರ್) ಈಗ ಜಿಯೋದಲ್ಲಿ ರಿಲಯನ್ಸ್ ಡಿಜಿಟಲ್ ಮತ್ತು ಜಿಯೋ ಮಳಿಗೆಗಳಲ್ಲಿ ಲಭ್ಯ ಇರಲಿದೆ.

ಜಿಯೋ ಎವ್ರೀವೇರ್ ಕನೆಕ್ಟ್

ಜಿಯೋ ಎವ್ರೀವೇರ್ ಕನೆಕ್ಟ್

ಜಿಯೋದ ಹೊಸ ಚಿಂತನೆಯ ಸೇವೆಯಾದ ಜಿಯೋ ಎವ್ರೀವೇರ್ ಕನೆಕ್ಟ್ ಜಿಯೋ ಬಳಕೆದಾರರಿಗೆ ತಮ್ಮ ಐಫೋನ್ ಮತ್ತು ಆಪಲ್ ವಾಚ್ ಸೀರಿಸ್ 3 (ಜಿಪಿಎಸ್ + ಸೆಲ್ಯುಲಾರ್) ಎರಡರಲ್ಲೂ ಒಂದೇ ಜಿಯೋ ನಂಬರ್ ಬಳಕೆ ಮಾಡಲು, ಐಫೋನ್ ಇಲ್ಲದೇ ಇದ್ದರೂ ಕೂಡ ಕರೆ ಮಾಡಲು ಮತ್ತು ಸ್ವೀಕರಿಸಲು, ಡಾಟಾ ಬಲಿಷ್ಠವಾದ ಜಿಯೋ ನೆಟ್‍ವರ್ಕ್ ನಿಂದ ಡಾಟಾ ಮತ್ತು ಅಪ್ಲಿಕೇಶನ್ ಗಳನ್ನು ಬಳಸಲು ಅವಕಾಶ ನೀಡುತ್ತದೆ.

ಜಿಯೋ ಎವ್ರೀವೇರ್ ಕನೆಕ್ಟ್ ಕುರಿತು

ಜಿಯೋ ಎವ್ರೀವೇರ್ ಕನೆಕ್ಟ್ ಕುರಿತು

ಜಿಯೋ ಎವ್ರೀವೇರ್ ಕನೆಕ್ಟ್ ಕುರಿತು ಮಾತನಾಡಿದ ಜಿಯೋ ವಕ್ತಾರ, 'ಸುಧಾರಿತ ಸೆಲ್ಯುಲಾರ್ ತಂತ್ರಜ್ಞಾನದ ಸಾಮಥ್ರ್ಯವನ್ನು ಆಪಲ್ ವಾಚ್ ಸೀರಿಸ್ 3ರೊಂದಿಗೆ ಬೆಸೆಯಲಾಗಿದೆ, ಇದು 4ಜಿ ನೆಟ್‍ವರ್ಕ್ ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಭಾರತಾದ್ಯಂತ 4ಜಿ ನೆಟ್‍ವರ್ಕ್ ಹೊಂದಿರವ ಏಕೈಕ ನೆಟ್‍ವರ್ಕ್ ಜಿಯೋ ಆಗಿದ್ದು, ಇದು ಹೋಲಿಸಲಸಾಧ್ಯವಾದ ಧ್ವನಿ ಸೇವೆ (ವೋಲ್ಟೆ)ಯನ್ನು ಒದಗಿಸುತ್ತಿದೆ' ಎಂದರು.

ಆಪಲ್ ವಾಚ್ ಸೀರಿಸ್ 3ನಲ್ಲಿ ಬಿಲ್ಟ್ ಇನ್ ಸೆಲ್ಯುಲಾರ್

ಆಪಲ್ ವಾಚ್ ಸೀರಿಸ್ 3ನಲ್ಲಿ ಬಿಲ್ಟ್ ಇನ್ ಸೆಲ್ಯುಲಾರ್

ಆಪಲ್ ವಾಚ್ ಸೀರಿಸ್ 3ನಲ್ಲಿ ಬಿಲ್ಟ್ ಇನ್ ಸೆಲ್ಯುಲಾರ್ ಇದ್ದು, ಇದು ಪಕ್ಕದಲ್ಲಿ ಐಫೋನ್ ಇಲ್ಲದೇ ಇದ್ದರೂ ಕೂಡಾ ಕರೆ ಮಾಡಲು, ಸಂದೇಶ ಸ್ವೀಕರಿಸಲು ಅವಕಾಶ ಕಲ್ಪಿಸುತ್ತದೆ. ಹೀಗಾಗಿ ದಿನಪೂರ್ತಿ ಸಂಪರ್ಕದಲ್ಲಿರಬಹುದಾಗಿದೆ. ಈ ಥರ್ಡ್ ಜನರೇಶನ್ ಆಪಲ್ ವಾಚ್ ಇಂಟಲಿಜೆಂಟ್ ಕೋಚಿಂಗ್ ಫೀಚರ್ ಹೊಂದಿದೆ, ಜಲ ನಿರೋಧಕವಾಗಿದೆ, ಇದು ಎರಡು ಮಾಡೆಲ್‍ಗಳಲ್ಲಿ ಬರುತ್ತದೆ, ಒಂದು, ಜಿಪಿಎಸ್ ಪ್ಲಸ್ ಸೆಲ್ಯುಲಾರ್, ಇನ್ನೊಂದು ಜಿಪಿಎಸ್. ಇವೆರಡೂ ಶೇಕಡಾ 70ರಷ್ಟು ವೇಗದ ಡ್ಯುವಲ್ ಕೋರ್ ಪ್ರೊಸೆಸರ್ ಹಾಗೂ ಹೊಸ ವೈರ್ ಲೆಸ್ ಚಿಪ್ ಅನ್ನು ಹೊಂದಿರಲಿದೆ.

ಆಪಲ್ ವಾಚ್ ಸೀರಿಸ್ 3 (ಜಿಪಿಎಸ್ + ಸೆಲ್ಯುಲಾರ್)

ಆಪಲ್ ವಾಚ್ ಸೀರಿಸ್ 3 (ಜಿಪಿಎಸ್ + ಸೆಲ್ಯುಲಾರ್)

ಆಪಲ್ ವಾಚ್ ಸೀರಿಸ್ 3 (ಜಿಪಿಎಸ್ + ಸೆಲ್ಯುಲಾರ್) ಅನ್ನು ಸಕ್ರಿಯಗೊಳಿಸಲು ಗ್ರಾಹಕರು ಮೊದಲು ಐಒಎಸ್ 11.3 ಮತ್ತು ವಾಚ್ ಒಎಸ್ 4.3 ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ನಂತರ ಐಫೋನ್ > ಜನರಲ್> ಅಬೌಟ್ ಆಂಡ್ ಫಾಲೋ ದಿ ಪ್ರಾಂಪ್ಟ್ ಟು ಅಪ್ಡೇಟ್ ಟು ಲೇಟೆಸ್ಟ್ ಕ್ಯಾರಿಯರ್ ಸೆಟಿಂಗ್ಸ್ ನಲ್ಲಿ ಟ್ಯಾಪ್ ಸೆಟಿಂಗ್ಸ್ ಮಾಡಬೇಕು.

English summary
Apple Watch Series 3 with built-in cellular arrives at the world’s largest mobile data network, Jio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X