• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಪಲ್ ಕಂಪೆನಿಯಿಂದ ಹೊಸ ಫೋನ್ ಗಳು, ವಾಚ್, ಅಬ್ಬಾ! ಏನು ಬೆಲೆಯೋ..

|

ಸೆಪ್ಟೆಂಬರ್ ತಿಂಗಳು ಬಂತೆಂದರೆ ಆಪಲ್ ಕಂಪೆನಿಯ ಫೋನ್, ವಾಚ್, ಲ್ಯಾಪ್ ಟಾಪ್, ಮ್ಯಾಕ್, ಟ್ಯಾಬ್ಲೆಟ್ ಗಳಿಗಾಗಿ ಎದುರು ನೋಡುವವರು ಆ ದಿನಕ್ಕಾಗಿ ಕಾಯುತ್ತಾರೆ. ಏಕೆಂದರೆ ಆ ತಿಂಗಳಲ್ಲಿ ಒಂದು ದಿನ ಆಪಲ್ ತನ್ನ ಹೊಸ ಉತ್ಪನ್ನಗಳನ್ನು ಘೋಷಣೆ ಮಾಡುತ್ತದೆ. ಜತೆಗೆ ಜಗತ್ತಿನ ಹಲವೆಡೆ ಆ ತಿಂಗಳಲ್ಲಿ ರಿಯಾಯಿತಿ ನೀಡುತ್ತದೆ.

ಅಂಥದ್ದೇ ಕಾರ್ಯಕ್ರಮ ಸೆಪ್ಟೆಂಬರ್ 12ನೇ ತಾರೀಕು ಆಗಿದೆ. ಐಫೋನ್ ನ ಮೂರು ಹೊಸ ಮಾದರಿ ಹಾಗೂ ವಾಚ್ ಸೀರೀಸ್ 4 ಅನ್ನು ಪರಿಚಯಿಸಿದೆ ಆಪಲ್. ಈ ಕಂಪೆನಿಯ ಉತ್ಪನ್ನಗಳು ದುಬಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಬಳಸಿದ ಮೇಲೆ ಉಳಿದವು ಇಷ್ಟವಾಗಲ್ಲ ಎನ್ನುವವರು ಸಹ ಇದ್ದಾರೆ. ಇವೆಲ್ಲ ಅವರವರ ಭಾವಕ್ಕೆ ಬಿಟ್ಟ ವಿಚಾರ.

ಈ ಲೇಖನದಲ್ಲಿ ಹೊಸದಾಗಿ ಘೋಷಣೆ ಮಾಡಿದ ಐಫೋನ್ ಮಾದರಿಗಳು, ವಾಚ್ ನ ದರದ ಮಾಹಿತಿ ಇಲ್ಲಿದೆ.

ಐಫೋನ್

XR

64 GB $749

128 GB $799

256 GB $899

1 ಟ್ರಿಲಿಯನ್ ಡಾಲರ್ ಕಂಪನಿಯಾದ ಆಪಲ್ ಈಗ 2 ಫೇಸ್ಬುಕ್ ಗೆ ಸಮ!

XS

64 GB $999

256 GB $1,149

512 GB $1,349

XS Max

64 GB $1099

256 GB $1249

512 GB $ 1449

ಆಪಲ್ ವಾಚ್ ಸೀರೀಸ್ 4

ಜಿಪಿಎಸ್ ಮಾತ್ರ ಇರುವಂಥದ್ದು $399

ಜಿಪಿಎಸ್ ಹಾಗೂ ಸೆಲ್ಯುಲಾರ್ ಇರುವಂಥದ್ದು $499

ಹೊಸ iOS 12,MacOS Mojave ಬಿಡುಗಡೆ ಮಾಡಿದ ಆಪಲ್

ಇದೀಗ ಹೊಸ ಫೋನ್ ಗಳ ಘೋಷಣೆ ಮಾಡಿದ ಆಪಲ್ ಈ ಹಿಂದೆ ಮಾರಾಟಕ್ಕೆ ಲಭ್ಯವಿದ್ದ ಐಫೋನ್ X, 6, 6S ಹಾಗೂ SE ಮಾದರಿಗಳ ಮಾಹಿತಿಯನ್ನು ತನ್ನ ವೆಬ್ ಸೈಟ್ ನಿಂದ ತೆಗೆದಿದೆ. ಅದರರ್ಥ ಇನ್ನು ಮುಂದೆ ಅವು ಮಾರಾಟಕ್ಕೆ ಲಭ್ಯವಿರುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಆಪಲ್ ಉತ್ಪನ್ನಗಳ ಬೆಲೆಗಳನ್ನು ಅಮೆರಿಕ ಡಾಲರ್ ನಲ್ಲಿ ಕೊಡಲಾಗಿದೆ. ಶುಕ್ರವಾರದ ದಿನದ ಕೊನೆಗೆ ಒಂದು ಡಾಲರ್ ಗೆ ಭಾರತದ ರುಪಾಯಿ ಬೆಲೆ 71.90. ಅಂದರೆ ಮೇಲೆ ನೀಡಲಾದ ಬೆಲೆಯನ್ನು 71.90ರಿಂದ ಗುಣಿಸಿದರೆ ಬರುವ ಮೊತ್ತ ಭಾರತದ ರುಪಾಯಿಯದಾಗಿರುತ್ತದೆ. ಅಷ್ಟಕ್ಕೆ ಅಮೆರಿಕದಲ್ಲಿ ಮಾರಲಾಗುತ್ತದೆ.

ಇನ್ನು ಭಾರತದಲ್ಲಿ ಮತ್ತೂ ಹೆಚ್ಚಳವಾಗುತ್ತದೆ. ಏಕೆಂದರೆ ಆಮದು ಸುಂಕ ಕೂಡ ಅದಕ್ಕೆ ಸೇರಿಕೊಳ್ಳುತ್ತದೆ. ಒಂದು ವೇಳೆ ಬೆಂಗಳೂರಿನಲ್ಲೇ ಆಪಲ್ ಇವುಗಳನ್ನು ಉತ್ಪಾದಿಸಿದರೂ ಅಮೆರಿಕಗಂತೂ ಕಡಿಮೆ ಬೆಲೆಗೆ ಸಿಗುವ ಸಾಧ್ಯತೆ ಇಲ್ಲ. ಹೊಸ ಐಫೋನ್ ಗಳು ಹಾಗೂ ವಾಚ್ ನ ಬಗ್ಗೆ ಮಾಹಿತಿಯಾಯಿತು. ಅದರಲ್ಲಿ ಏನಂಥ ವಿಶೇಷ? ಯಾಕಿಷ್ಟು ಬೆಲೆ, ಫೀಚರ್ಸ್ ಏನು, ಕ್ಯಾಮೆರಾ ಮತ್ತೊಂದು ಎಂಬ ಮಾಹಿತಿ ಬೇಕಿದ್ದರೆ ಒನ್ ಇಂಡಿಯಾ ಗಿಜ್ ಬಾಟ್ ನಲ್ಲಿ ನೋಡಿ.

English summary
Here is the details of Apple company I phones new models and watch series 4. Price details are given here. You want more details about the phones like features and other things visit Oneindia Kannada Gizbot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X