ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪಲ್ ಕಂಪೆನಿ ತೊರೆಯಲಿದ್ದಾರೆ ಐಫೋನ್ ವಿನ್ಯಾಸಕ ಈವ್

|
Google Oneindia Kannada News

ಸ್ಯಾನ್‌ ಫ್ರಾನ್ಸಿಸ್ಕೋ, ಜೂನ್ 28: ಜಗತ್ತಿನ ಸೆಲ್‌ಫೋನ್ ಉದ್ಯಮಕ್ಕೆ ಸವಾಲೆಸೆದ ಆಪಲ್ ಕಂಪೆನಿಯ ಐಫೋನ್, ಐಮ್ಯಾಕ್ ಮತ್ತು ಐಪ್ಯಾಡ್‌ಗಳ ವಿನ್ಯಾಸದ ಹಿಂದಿದ್ದ ಪ್ರಮುಖ ಶಕ್ತಿ, ಮುಖ್ಯ ವಿನ್ಯಾಸ ಅಧಿಕಾರಿ ಜಾನಿ ಈವ್ ಅವರು ಆಪಲ್ ಕಂಪೆನಿ ತೊರೆಯಲಿದ್ದಾರೆ.

ಮೋದಿ ಬಳಸುವ ಫೋನ್ ಯಾವುದು? ಐಫೋನ್ ಮೇಲೆ ಸಚಿವರಿಗೆ ಮೋಹ! ಮೋದಿ ಬಳಸುವ ಫೋನ್ ಯಾವುದು? ಐಫೋನ್ ಮೇಲೆ ಸಚಿವರಿಗೆ ಮೋಹ!

ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಆಪಲ್ ಜತೆ ಒಡನಾಟ ಹೊಂದಿದ್ದ ಈವ್, ತಮ್ಮದೇ ಸ್ವಂತ ವಿನ್ಯಾಸ ಕಂಪೆನಿ ಆರಂಭಿಸುವ ಉದ್ದೇಶದಿಂದ ಆಪಲ್ ತೊರೆಯಲಿದ್ದಾರೆ ಎಂದು ಕಂಪೆನಿ ತಿಳಿಸಿದೆ.

Apple iPhone designer Jony Ive leaving apple

ಈವ್ ಅವರು ಆಪಲ್‌ ಜತೆ ಸುಮಾರು 30 ವರ್ಷದ ಸಮಯದಿಂದ ಕೆಲಸ ಮಾಡಿದ್ದಾರೆ. ಕಂಪೆನಿ ತೊರೆಯುತ್ತಿದ್ದರೂ ಅವರು ಆಪಲ್ ಜತೆಗಿನ ನಂಟನ್ನು ಸಂಪೂರ್ಣವಾಗಿ ಕಡಿದುಕೊಳ್ಳುವುದಿಲ್ಲ. ಅವರ ಹೊಸ ವಿನ್ಯಾಸ ಕಂಪೆನಿಗೆ ಆಪಲ್ ಗ್ರಾಹಕನಾಗಲಿದೆ. ಹೀಗಾಗಿ ಆಪಲ್‌ ಫೋನ್ ಹಾಗೂ ಇತರೆ ಸಾಧನಗಳ ವಿನ್ಯಾಸವನ್ನು ಈವ್ ಅವರೇ ನಿಭಾಯಿಸಲಿದ್ದಾರೆ ಎಂದು ಕಂಪೆನಿ ತಿಳಿಸಿದೆ. ಆದರೆ, ಅವರು ಯಾವಾಗ ಕಂಪೆನಿ ತೊರೆಯಲಿದ್ದಾರೆ ಎಂಬ ಮಾಹಿತಿಯನ್ನು ಅದು ನೀಡಿಲ್ಲ.

ನ್ಯೂಯಾರ್ಕ್ ನ ವಿದ್ಯಾರ್ಥಿಯಿಂದ ಆಪಲ್ ಮೇಲೆ 7000 ಕೋಟಿಗೆ ದಾವೆ ನ್ಯೂಯಾರ್ಕ್ ನ ವಿದ್ಯಾರ್ಥಿಯಿಂದ ಆಪಲ್ ಮೇಲೆ 7000 ಕೋಟಿಗೆ ದಾವೆ

1990ರ ದಶಕದಿಂದಲೂ ಈವ್ ಅವರು ಆಪಲ್‌ನ ವಿನ್ಯಾಸ ತಂಡದಲ್ಲಿದ್ದರು. ಆಪಲ್‌ನ ಸಿಗ್ನೇಚರ್ ವಿನ್ಯಾಸ ಹಾಗೂ ವಿಶಿಷ್ಟ ವಿನ್ಯಾಸಗಳಿಗಾಗಿ ಅವರು ಹೆಸರಾಗಿದ್ದಾರೆ.

English summary
Chief Design Officer of Apple Jony Ive who designed iPhone, iMac and iPad is leaving the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X