• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಪಲ್‌ ಐಪ್ಯಾಡ್, ವಾಚ್ ಸೀರೀಸ್ 6 ಬಿಡುಗಡೆ: 15 ಸೆಕೆಂಡ್‌ನಲ್ಲಿ ರಕ್ತದೊಳಗಿನ ಆಮ್ಲಜನಕವನ್ನು ತಿಳಿಸುತ್ತೆ..!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಜಾಗತಿಕ ಮಾರುಕಟ್ಟೆಯಲ್ಲಿ ಅಗ್ರ ಬ್ರ್ಯಾಂಡ್ ಆಗಿರುವ ಆಪಲ್ ಈವೆಂಟ್ ನಲ್ಲಿ ಆಪಲ್ ವಾಚ್ ಸೀರೀಸ್ 6, ಆಪಲ್ ವಾಚ್ SE, ಐಪ್ಯಾಡ್ 8th gen ಮತ್ತು ಐಪ್ಯಾಡ್ ಏರ್ (2020) ಅನ್ನು ಬಿಡುಗಡೆ ಮಾಡಿದೆ.

ಆಪಲ್‌ನಿಂದ ಮಂಗಳವಾರ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ತನ್ನ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಗುಣಮಟ್ಟದ ಹಾಗೂ ಹೊಸ ಮಾದರಿಯ ಟೆಕ್ನಾಲಜಿಗೆ ಹೆಸರುವಾಸಿಯಾದ ಆಪಲ್‌ ಸಂಸ್ಥೆ ಈ ಬಾರಿ ಆಪಲ್ ವಾಚ್ ಸೀರೀಸ್ 6, ಹಾಗೂ ಐಪ್ಯಾಡ್ ಅನ್ನು ಪರಿಚಯಿಸಿದೆ.

 ರೆಡ್‌ಮಿ 9i ಅಗ್ಗದ ದರದಲ್ಲಿ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ ರೆಡ್‌ಮಿ 9i ಅಗ್ಗದ ದರದಲ್ಲಿ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ

ಆಪಲ್ ವಾಚ್ ಸರಣಿ 6 (ಜಿಪಿಎಸ್) 40,900 ರೂ.ಗಳಿಂದ ಪ್ರಾರಂಭವಾಗಿದ್ದರೆ, ಆಪಲ್ ವಾಚ್ ಸರಣಿ 6 (ಜಿಪಿಎಸ್ + ಸೆಲ್ಯುಲಾರ್) 49,900 ರೂಗಳಿಂದ ಪ್ರಾರಂಭವಾಗುತ್ತದೆ.

64 ಜಿಬಿ ಮತ್ತು 256 ಜಿಬಿ ಕಾನ್ಫಿಗರೇಶನ್‌ಗಳಲ್ಲಿ ಹೊಸ ಐಪ್ಯಾಡ್ ಏರ್, ಐದು ಬಣ್ಣಗಳಲ್ಲಿ ಅಕ್ಟೋಬರ್‌ನಿಂದ ಆಪಲ್ ಅಧಿಕೃತ ಮರುಮಾರಾಟಗಾರರಲ್ಲಿ ಲಭ್ಯವಿರುತ್ತವೆ. ಐಪ್ಯಾಡ್ ಏರ್‌ನ ವೈ-ಫೈ ಮಾದರಿಗಳು 54,900 ರೂ.ಗಳ ಆರಂಭಿಕ ಬೆಲೆಯಲ್ಲಿ ಮತ್ತು ವೈ-ಫೈ + ಸೆಲ್ಯುಲಾರ್ ಮಾದರಿಗಳು 66,900 ರೂ.ಗಳಿಂದ ಪ್ರಾರಂಭವಾಗುತ್ತವೆ.

ಕಂಪನಿಯು ರೆಟಿನಾ ಡಿಸ್‌ಪ್ಲೇನೊಂದಿಗೆ ಎಂಟನೇ ತಲೆಮಾರಿನ 10.2-ಇಂಚಿನ ಐಪ್ಯಾಡ್ ಅನ್ನು ಕೂಡ ಪರಿಚಯಿಸಿತು. ಕೇವಲ 29,900 ರೂಗಳಿಂದ ಪ್ರಾರಂಭವಾಗುವ ಐಪ್ಯಾಡ್ ಪ್ರಬಲ ಎ 12 ಬಯೋನಿಕ್ ಚಿಪ್ ಅನ್ನು ಹೊಂದಿದೆ, ಇದು ನ್ಯೂರಾಲ್ ಎಂಜಿನ್ ಅನ್ನು ಮೊದಲ ಬಾರಿಗೆ ಪ್ರವೇಶ ಐಪ್ಯಾಡ್‌ಗೆ ತರಲಾಗಿದೆ.

ಇನ್ನೊಂದು ವಿಶೇಷ ಅಂದರೆ ಆಪಲ್ ವಾಚ್ ಸಿರೀಸ್ 6 ಹದಿನೈದು ಸೆಕೆಂಡ್ ನೊಳಗೆ ರಕ್ತದೊಳಗಿನ ಆಮ್ಲಜನಕವನ್ನು ತಿಳಿಯಲು ಸಹಾಯ ಮಾಡುತ್ತದೆ. ಈಗಾಗಲೇ ಆಪಲ್ ನಲ್ಲಿ ಇಸಿಜಿ, ಹಾರ್ಟ್ ರೇಟ್ ಮಾನಿಟರ್, ಫಿಟ್ ನೆಸ್ ಟ್ರ್ಯಾಕರ್ ನಂಥ ವೈಶಿಷ್ಟ್ಯಗಳಿವೆ.

ಇನ್ನು ಆಪಲ್‌ ವಾಚ್ SE ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕ ಶೈಲಿಯನ್ನ ಹೊಂದಿದೆ. ಇದು ಪತನ ಪತ್ತೆಯಂತಹ ಫೀಚರ್ಸ್‌ ಅನ್ನು ಹೊಂದಿದೆ. ಇನ್ನು ಈ ವಾಚ್‌ S5 ಚಿಪ್‌ಸೆಟ್ ಪ್ರೊಸೆಸರ್‌ ಅನ್ನು ಹೊಂದಿದೆ. ಇದಲ್ಲದೆ ವಾಚ್ ಸರಣಿ 6 ವಾಟರ್ ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು, ಹೆಲ್ತ್‌ ಫೀಚರ್ಸ್‌ಗಳನ್ನು ಹೊಂದಿದೆ. ಜೊತೆಗೆ ಸ್ಪೋರ್ಟ್ಸ್‌ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ.

ಆಪಲ್ ವಾಚ್ ಎಸ್ ಇ (ಜಿಪಿಎಸ್) 29,900 ರುಪಾಯಿಯಾದರೆ, ಜಿಪಿಎಸ್ ಹಾಗೂ ಸೆಲ್ಯುಲಾರ್ ಸೇರಿ 33,900 ರುಪಾಯಿ ಆಗುತ್ತದೆ. ಹೊಸದಾಗಿ ಬಿಡುಗಡೆಯಾದ ಸಾಧನಗಳ ಭಾರತ ಲಭ್ಯತೆಯನ್ನು ನಂತರದ ದಿನಗಳಲ್ಲಿ ಪ್ರಕಟಿಸಲಾಗುವುದು.

English summary
Tech giant introduced new Watch Series 6 with a revolutionary Blood Oxygen sensor in the Covid-19 times and an iPad Air with industry-first A14 bionic chip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X