• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆ್ಯಪಲ್ ಹೊಸ ಆಪರೇಟಿಂಗ್ ಸಿಸ್ಟಂ 'iOS 11' ವಿಶೇಷತೆಯೇನು?

|

ನವದೆಹಲಿ, ಸೆಪ್ಟೆಂಬರ್ 19: ಆ್ಯಪಲ್ ಕಂಪನಿಯ ಹೊಸ ಆಪರೇಟಿಂಗ್ ಸಿಸ್ಟಂ ಆದ 'ಐಒಎಸ್ 11' ಸೆ. 19ರಂದು ಬಿಡುಗಡೆಯಾಗಿದೆ. ಇದರ ಬಗ್ಗೆ ಇದೇ ವರ್ಷ ಜೂನ್ 5ರಂದೇ ಮಾಹಿತಿ ನೀಡಿತ್ತು ಆ್ಯಪಲ್ ಕಂಪನಿ.

ಐಫೋನ್, ಐಪ್ಯಾಡ್, ಐಪಾಡ್ ಗಳಿಗೆ ಈ ಹೊಸ ಸಾಫ್ಟ್ ವೇರ್ ಅನ್ನು ಅಪ್ ಡೇಟ್ ಮಾಡಬಹುದು ಎಂದು ಹೇಳಲಾಗಿದೆ. ಈ ಹೊಸ ಆಪರೇಟಿಂಗ್ ಸಿಸ್ಟಂ ನಲ್ಲಿ ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಹೆಚ್ಚು ವಿಶೇಷವಾಗಿ ಬಳಸಿಕೊಳ್ಳಲಾಗಿದೆ. ಅಲ್ಲದೆ, ವರ್ಚುವಲ್ ರಿಯಾಲಿಟಿ ತಂತ್ರಾಂಶದ ಮೂಲಕ ಈ ಆ್ಯಪ್ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ ಎಕ್ಸ್ ಫೋನುಗಳ ಬಿಡುಗಡೆ

ಈ ಹಿಂದೆ ಬಂದಿರುವ ಆ್ಯಪಲ್ ಕಂಪನಿಯ ಎಲ್ಲಾ ಒಎಸ್ ಗಳಿಗಿಂತಲೂ ಈ ಹೊಸ ಒಎಸ್ ಭಾರೀ ವಿಭಿನ್ನವಾಗಿದ್ದು, ಬಳಕೆದಾರರಿಗೆ ಹೊಸ ಅನುಭೂತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಐಫೋನ್ 5ಎಸ್ ಹಾಗೂ ಅದರ ನಂತರದ ಮಾಡೆಲ್ ಗಳ ಫೋನ್ ಗಳಿಗೆ ಈ ಹೊಸ ಆಪರೇಟಿಂಗ್ ಸಿಸ್ಟಂ ಅನ್ನು ಉಚಿತವಾಗಿ ಅಪ್ ಡೇಟ್ ಮಾಡಿಕೊಳ್ಳಬಹುದಾಗಿದೆ.

ಆಪಲ್ ನಲ್ಲಿ ಕನ್ನಡ ಕೀಬೋರ್ಡ್ ಬಳಕೆ ಈಗ ಸುಲಭ

ಎಲ್ಲಾ ಐಪ್ಯಾಡ್ ಏರ್, ಐಪಾಡ್ ಪ್ರೊ ಮಾಡೆಲ್ ಗಳು, ಐಪ್ಯಾಡ್ 5ನೇ ತಲೆಮಾರಿನ (5th generation) ಉಪಕರಣಗಳು, ಐಪ್ಯಾಡ್ ಮಿನಿ 2 ಹಾಗೂ ಆನಂತರದ ಎಲ್ಲಾ ಐಪಾಡ್ ಟಚ್ (6th generation) ಗಳಿಗೆ ಈ ಆಪರೇಟಿಂಗ್ ಸಿಸ್ಟಂ ಉಚಿತವಾಗಿ ಅಪ್ ಡೇಟ್ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಆದರೆ, ಕೆಲವು ಮಾಡೆಲ್ ಐಫೋನ್ ಗಳಿಗೆ ಹಣ ಪಾವತಿಸುವ ಮೂಲಕ ಈ ಆಪರೇಟಿಂಗ್ ಸಿಸ್ಟಂ ಅನ್ನು ಅಪ್ ಡೇಟ್ ಮಾಡಿಕೊಳ್ಳಬೇಕಿದೆ. ಈ ಸೌಲಭ್ಯ ಸದ್ಯಕ್ಕೆ ಅಮೆರಿಕದಲ್ಲಿ ಮಾತ್ರ ಲಭ್ಯವಿದೆ.

ಸ್ಪ್ಲಿಟ್ ಸ್ಕ್ರೀನ್ ಅನುಕೂಲ

ಸ್ಪ್ಲಿಟ್ ಸ್ಕ್ರೀನ್ ಅನುಕೂಲ

- ಬಹು ಕಾರ್ಯ ನಿರ್ವಹಣೆಗೆ (ಮಲ್ಟಿ ಟಾಸ್ಕಿಂಗ್) ಹೆಚ್ಚು ಆದ್ಯತೆ.

- ಹೆಚ್ಚು ಉಪಯೋಗಿಸುವ ಆ್ಯಪ್ ಗಳನ್ನು ಯಾವುದೇ ಪರದೆ ಮೂಲಕ ಕ್ಷಿಪ್ರವಾಗಿ ತೆರೆಯಲು ಅನುಕೂಲ

- ಒಂದೇ ಪರದೆಯಲ್ಲಿ 'ಸ್ಪ್ಲಿಟ್ ವ್ಯೂ' (ದ್ವಿ ಪರದೆ) ಮಾದರಿಗೆ ಬದಲಾಯಿಸಿ ಎರಡು ದಾಖಲೆ, ಕಡತ, ಫೋಟೋಗಳನ್ನು ಏಕಕಾಲದಲ್ಲಿ ವೀಕ್ಷಿಸಲು ಅನುಕೂಲ.

ಡ್ರಾಗ್ ಆ್ಯಂಡ್ ಡ್ರಾಪ್ ಗೆ ಆದ್ಯತೆ

ಡ್ರಾಗ್ ಆ್ಯಂಡ್ ಡ್ರಾಪ್ ಗೆ ಆದ್ಯತೆ

- ನಿಮ್ಮೆಲ್ಲಾ ಕಡತಗಳನ್ನು (ಫೈಲ್) ಒಂದೇ ನಿರ್ದಿಷ್ಟ ಜಾಗದಲ್ಲಿ ಸಂಗ್ರಹಿಸಡಲು ಈಗ ಮತ್ತಷ್ಟು ಅವಕಾಶ. ಐಕ್ಲೌಡ್, ಬಾಕ್ಸ್, ಡ್ರಾಪ್ ಬಾಕ್ಸ್ ಹಾಗೂ ಇನ್ನಿತರ ಸೇವೆಗಳು ಲಭ್ಯ.

- ಯಾವುದೇ ಫೈನಲ್ ಗಳನ್ನು ಬೇರೆಡೆಗೆ ವರ್ಗಾಯಿಸಲು ಅನುಕೂಲವಾಗುವಂತೆ ಡ್ರಾಗ್ ಆ್ಯಂಡ್ ಡ್ರಾಪ್ ಮಾದರಿ ವೈಶಿಷ್ಟ್ಯತೆ.

ತ್ವರಿತ ಬರಹ ಸಾಧ್ಯ

ತ್ವರಿತ ಬರಹ ಸಾಧ್ಯ

- ಐಪ್ಯಾಡ್ ನಲ್ಲಿರುವ ಆ್ಯಪಲ್ ಪೆನ್ಸಿಲ್ ಈಗ ಮತ್ತಷ್ಟು ಪ್ರಭಾವಿ. ಇನ್ ಲೈನ್ ಡ್ರಾವಿಂಗ್, ಇನ್ ಸ್ಟಂಟ್ ನೋಟ್ಸ್ ವಿಶೇಷತೆಗಳಿಗೆ ಮತ್ತಷ್ಟು ಮೆರುಗು. ಪರದೆ ಲಾಕ್ ಆಗಿದ್ದಾಗಲೂ ಪೆನ್ಸಿಲ್ ಐಕಾನ್ ಟ್ಯಾಪ್ ಮಾಡುವುದರಿಂದ ತ್ವರಿತ ಬರಹ ಸಾಧ್ಯ.

- ಉತ್ಕೃಷ್ಟ ಗುಣಮಟ್ಟದ ಎಐ-ವಿಆರ್ ಆಯ್ಕೆ. ಐಫೋನ್, ಐಪ್ಯಾಡ್ ಗಳೆರಡರಲ್ಲೂ ಇದು ಲಭ್ಯ.

ಹೆಚ್ಚುವರಿ ಫೀಚರ್ ಗಳು

ಹೆಚ್ಚುವರಿ ಫೀಚರ್ ಗಳು

- ಕ್ಯಾಮೆರಾಗಳ ಕಾರ್ಯನಿರ್ವಹಣೆ ಮತ್ತಷ್ಟು ಪರಿಣಾಮಕಾರಿ. ಭಾವಚಿತ್ರ, ವಿಡಿಯೋ ಇತ್ಯಾದಿಗಳಲ್ಲಿ ಮತ್ತಷ್ಟು ಸ್ಪಷ್ಟತೆ.

- ಕಂಟ್ರೋಲ್ ಸೆಂಟರ್, ಒನ್ ಹ್ಯಾಂಡೆಡ್ ಕೀ ಮೋಡ್ - ಇವು ಹೆಚ್ಚುವರಿ ಫೀಚರ್ ಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Apple will on Sept 19, 2017, released the the iOS 11, which it had unveiled on June 5, for iPhone, iPad, iPod Touch users.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more