ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ್ಯಪಲ್ ಸಿಇಒ ಟಿಮ್ ಕುಕ್ ಈಗ ಶತಕೋಟ್ಯಧಿಪತಿ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 12: ಆ್ಯಪಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಟಿಮ್ ಕುಕ್ ಜಾಗತಿಕ ಬಿಲಿಯನೇರ್ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ. ಟೆಕ್ ಸಂಸ್ಥೆಯ ಷೇರುಗಳು ಗಗನಕ್ಕೇರಿದ ಬಳಿಕ ಟಿಮ್ ಕುಕ್ ನಿವ್ವಳ ಆಸ್ತಿ ಮೌಲ್ಯ ಹೆಚ್ಚಾಗಿ ಜಗತ್ತಿನ ಬಿಲಿಯನೇರ್ ಪಟ್ಟಿಗೆ ಸೇರಿದ್ದಾರೆ.

ಜಾಗತಿಕವಾಗಿ ಕೊರೊನಾವೈರಸ್ ಸೋಂಕಿನ ಪ್ರಭಾವದಿಂದ ಹೊರಬರುತ್ತಿರುವ ಹೂಡಿಕೆದಾರರು ಷೇರು ಮಾರುಕಟ್ಟೆಯ ಮೇಲೆ ಹಣ ಹೂಡುತ್ತಿದ್ದಾರೆ. ಟೆಕ್ ದೈತ್ಯ ಆ್ಯಪಲ್ ಮಾರುಕಟ್ಟೆ ಮೌಲ್ಯ ಏರಿಕೆಯಾಗಿದ್ದು ಕಂಪನಿಯಲ್ಲಿ 8,47,969 ನೇರ ಷೇರುಗಳನ್ನು ಹೊಂದಿರುವ ಕುಕ್ ಕಳೆದ ವರ್ಷ ತಮ್ಮ ವೇತನ ಪ್ಯಾಕೇಜಿನ ಭಾಗವಾಗಿ 125 ಮಿಲಿಯನ್ ಡಾಲರ್(96 ಮಿ) ಗಿಂತ ಹೆಚ್ಚಿನ ಹಣವನ್ನು ಪಡೆದಿದ್ದರು.

ಚೀನಾದಿಂದ ಆ್ಯಪಲ್ ಐಫೋನ್ ಉತ್ಪಾದನೆ ಭಾರತಕ್ಕೆ ಶಿಫ್ಟ್‌ ?ಚೀನಾದಿಂದ ಆ್ಯಪಲ್ ಐಫೋನ್ ಉತ್ಪಾದನೆ ಭಾರತಕ್ಕೆ ಶಿಫ್ಟ್‌ ?

ಕಳೆದ ವಾರ, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತು 100 ಬಿಲಿಯನ್ (76 ಮಿ) ಆಗಿತ್ತು. ಆ್ಯಪಲ್, ಫೇಸ್‌ಬುಕ್ ಮತ್ತು ಅಮೆಜಾನ್ ಸೇರಿದಂತೆ ತಂತ್ರಜ್ಞಾನ ಕಂಪನಿಗಳು ಕೊರೊನಾವೈರಸ್ ಕಾರಣಕ್ಕೆ ಹೆಚ್ಚಿನ ಜನರು ಆನ್‌ಲೈನ್‌ ವ್ಯಾಪಾರಕ್ಕೆ ಮನಸು ಮಾಡಿದಂತೆಲ್ಲಾ ತಮ್ಮ ಲಾಭಾಂಶವನ್ನು ಹೆಚ್ಚಿಸಿಕೊಂಡಿದೆ.

Apple CEO Tim Cook Joined Billionaire Club

ಸಿಲಿಕಾನ್-ವ್ಯಾಲಿ ಮೂಲದ ಆ್ಯಪಲ್ ಈಗ 2 ಟ್ರಿಲಿಯನ್ ಡಾಲರ್ ಮಟ್ಟವನ್ನು ತಲುಪಿದ ಮೊದಲ ಕಂಪನಿ ಎಂಬ ಮೈಲಿಗಲ್ಲ ಸ್ಥಾಪಿಸಿದೆ. ಎರಡು ವರ್ಷಗಳ ಹಿಂದೆ ಇದು 1 ಟ್ರಿಲಿಯನ್ ಡಾಲರ್ ಮಟ್ಟವನ್ನು ತಲುಪಿತ್ತು.

ಕುಕ್ ಯಾವುದೇ ಕಂಪನಿಯನ್ನು ಸೃಷ್ಟಿಸದೇ, ಹೊಸ ಬ್ರ್ಯಾಂಡ್ ಕಂಡುಹಿಡಿಯದೇ ಬಿಲಿಯನೇರ್ ಆಗಿರುವುದು ಅಪರೂಪ. ಆದರೆ ಕುಕ್ ಆ್ಯಪಲ್ ಅನ್ನು ವಿಶ್ವದ ಅತ್ಯಂತ ಅಮೂಲ್ಯವಾದ ಸಾರ್ವಜನಿಕ ವಹಿವಾಟು ಕಂಪನಿಯಾಗಿ ನಿರ್ಮಿಸಿದ್ದಾರೆ.

English summary
Apple CEO Tim Cook has passed the $1 billion mark, officially making him a billionaire
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X