ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಲಕ್ಷ ಕೋಟಿ ಡಾಲರ್ ಮಾರುಕಟ್ಟೆ ಮೌಲ್ಯವನ್ನು ತಲುಪಿದ ಮೊದಲ ಕಂಪನಿ ಆಪಲ್

|
Google Oneindia Kannada News

ವಾಷಿಂಗ್ಟನ್, ಆಗಸ್ಟ್‌ 19: ಬಹುದೊಡ್ಡ ಮೊಬೈಲ್ ಬ್ರ್ಯಾಂಡ್ ಆಪಲ್ ಕಂಪನಿಯು 2 ಟ್ರಿಲಿಯನ್ ಡಾಲರ್ (ಎರಡು ಲಕ್ಷ ಕೋಟಿ ಡಾಲರ್) ಮಾರುಕಟ್ಟೆ ಮೌಲ್ಯವನ್ನು ತಲುಪಿದ ಅಮೆರಿಕಾದ ಮೊದಲ ಕಂಪನಿಯಾಗಿದೆ. ಕೇವಲ ಎರಡು ವರ್ಷಗಳಲ್ಲಿ ಆಪಲ್ ಬಂಡವಾಳ ಮಾರುಕಟ್ಟೆ ಮೌಲ್ಯಮಾಪನವು ದ್ವಿಗುಣಗೊಂಡಿದೆ.

ಐಫೋನ್ ಉತ್ಪಾದಿಸುವ ಚೀನಾದಲ್ಲಿನ ಕಾರ್ಖಾನೆಗಳ ಸ್ಥಗಿತ ಮತ್ತು ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ಅದರ ಚಿಲ್ಲರೆ ಮಾರಾಟವನ್ನು ಮುಚ್ಚಿದ್ದರೂ ಕಂಪನಿಯು ಈ ವರ್ಷ ಸುಮಾರು 60 ಪ್ರತಿಶತದಷ್ಟು ಲಾಭ ಗಳಿಸಿದೆ.

ಆ್ಯಪಲ್ ಸಿಇಒ ಟಿಮ್ ಕುಕ್ ಈಗ ಶತಕೋಟ್ಯಧಿಪತಿಆ್ಯಪಲ್ ಸಿಇಒ ಟಿಮ್ ಕುಕ್ ಈಗ ಶತಕೋಟ್ಯಧಿಪತಿ

ಕಂಪನಿಯು ಭಾರಿ ನಿಷ್ಠಾವಂತ ತನ್ನ ಗ್ರಾಹಕರ ನೆಲೆಯನ್ನು ಹೊಂದಿದ್ದು, ಆಪಲ್ ಉತ್ಪನ್ನಗಳನ್ನು ನಂಬುವ ಗ್ರಾಹಕರಿದ್ದಾರೆ. ಜನರು ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಸಿಲುಕಿರುವಾಗ ಆನ್‌ಲೈನ್‌ನಲ್ಲಿ ಐಫೋನ್‌ಗಳು ಮತ್ತು ಇತರ ಸಾಧನಗಳನ್ನು ಖರೀದಿಸುವುದನ್ನು ಮುಂದುವರೆಸಿದರು.

Apple Becomes First US Company To Be Valued At 2 Trillion Dollar

ಮುಂಬರುವ ನಾಲ್ಕು-ಫಾರ್-ಒನ್ ಸ್ಟಾಕ್ ವಿಭಜನೆಯು ಆಪಲ್‌ನ ಷೇರುಗಳನ್ನು ಹೆಚ್ಚು ಹೂಡಿಕೆದಾರರಿಗೆ ಕೈಗೆಟುಕುವಂತೆ ಮಾಡಿದೆ. ಇದು ಮೂರು ವಾರಗಳ ಹಿಂದೆ ಘೋಷಣೆಯಾದ ನಂತರ ರ್ಯಾಲಿಯನ್ನು ಹುಟ್ಟುಹಾಕಿದೆ.

ಆಪಲ್, ಮೈಕ್ರೋಸಾಫ್ಟ್, ಅಮೆಜಾನ್, ಫೇಸ್‌ಬುಕ್ ಮತ್ತು ಗೂಗಲ್‌ ಸೇರಿ ಕೇವಲ ಐದು ಕಂಪನಿಗಳು ಎಸ್ & ಪಿ 500 ರ ಸಂಪೂರ್ಣ ಮೌಲ್ಯದ ಸುಮಾರು 23 ಪ್ರತಿಶತದಷ್ಟು ಪಾಲನ್ನು ಹೊಂದಿದೆ.

English summary
Apple became the first US-listed company to reach a $2 trillion market capitalization on August 19, doubling in valuation in just over two years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X