ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಟ್ರಿಲಿಯನ್ ಡಾಲರ್ ಕಂಪನಿಯಾದ ಆಪಲ್ ಈಗ 2 ಫೇಸ್ಬುಕ್ ಗೆ ಸಮ!

By Mahesh
|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಆಗಸ್ಟ್ 03: ಐಫೋನ್ ಸೇರಿದಂತೆ ಹಲವು ಜನಪ್ರಿಯ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದನಾ ಸಂಸ್ಥೆ ಆಪಲ್ ಸಂಸ್ಥೆ ಮಾರುಕಟ್ಟೆ ಮೌಲ್ಯ 1 ಟ್ರಿಲಿಯನ್ ಯುಎಸ್ ಡಾಲರ್ ತಲುಪಿದೆ. ನ್ಯಾಸ್ ಡ್ಯಾಕ್ ನಲ್ಲಿ ಗುರುವಾರದಂದು ಪ್ರಕಟಣೆ ಹೊರಡಿಸಿದ್ದು, ವಾಲ್ ಸ್ಟ್ರೀಟ್ ನಲ್ಲಿ ಚೇತರಿಕೆ ಕಂಡು ಬಂದಿದೆ.

ಯುಎಸ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಸ್ಥೆಯೊಂದು 1 ಟ್ರಿಲಿಯನ್ ಡಾಲರ್ (6,86,15,00,00,00,000 ರು) ಮಾರುಕಟ್ಟೆ ಮೌಲ್ಯ ಗುರಿ ಮುಟ್ಟಿದೆ.

Apple becomes first company to hit $1 trn mark

ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಆಪಲ್ ಈಗ ಫೇಸ್ ಬುಕ್ ಸಂಸ್ಥೆಯ ಎರಡು ಪಟ್ಟು, ನೆಟ್ ಫ್ಲಿಕ್ಸ್ ಗಿಂತ 7 ಪಟ್ಟು, ಟ್ವಿಟ್ಟರ್ ಗಿಂತ 42ಪಟ್ಟು ದೊಡ್ಡ ಕಂಪನಿ ಎನಿಸಿಕೊಂಡಿದೆ.

1976ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಸ್ಟೀವ್ ಜಾಬ್ಸ್ ತನ್ನ ಸಂಗಡಿಗರೊಂದಿಗೆ ಆರಂಭಿಸಿದ ಸಂಸ್ಥೆ 1997ರಲ್ಲಿ ದಿವಾಳಿ ಹಂತಕ್ಕೆ ತಲುಪಿತ್ತು. 2011ರಲ್ಲಿ ಅಮೆರಿಕದಲ್ಲಿ ಅತಿದೊಡ್ಡ ಸಂಸ್ಥೆ ಎನಿಸಿಕೊಂಡಿತು. ಗುರುವಾರದಂದು ಷೇರುಪೇಟೆಯಲ್ಲಿ 207.39 ಯುಎಸ್ ಡಾಲರ್ ಮೌಲ್ಯದಂತೆ ಶೇ 2.92ರಷ್ಟು ಏರಿಕೆ ಕಂಡು ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿತು.

English summary
Apple became the first US company to top $1 trillion in market value on Thursday, leading a rebound in technology stocks that helped Wall Street pare losses and turned the Nasdaq positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X