ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ನಲ್ಲಿ ಆ್ಯಂಡ್ರಾಯ್ಡ್‌ 11 ಬಿಡುಗಡೆ: ಸಿಹಿ ತಿಂಡಿ ಹೆಸರು 'ರೆಡ್ ವೆಲ್ವೆಟ್ ಕೇಕ್'

|
Google Oneindia Kannada News

ನವದೆಹಲಿ, ಜುಲೈ 25: ಸ್ಮಾರ್ಟ್‌ಫೋನ್ ಬಳಕೆಯನ್ನು ಅತ್ಯಂತ ಸರಳ ಮತ್ತು ಸುಲಭಗೊಳಿಸಿದ ಆ್ಯಂಡ್ರಾಯ್ಡ್‌, ತನ್ನ ಹೊಸ ಆವೃತ್ತಿಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ (ಒಎಸ್)ಗಳಿಗೆ ಸಿಹಿ ತಿಂಡಿ ಹೆಸರಿನೊಂದಿಗೆ ಗುರುತಿಸುವುದನ್ನು ಕಳೆದ ವರ್ಷದ ಆ್ಯಂಡ್ರಾಯ್ಡ್‌ 10 ರಿಂದ ನಿಲ್ಲಿಸಿತ್ತು. ಆದರೆ ಆ್ಯಂಡ್ರಾಯ್ಡ್‌ 11 ರೊಂದಿಗೆ ಗೂಗಲ್ ಸಿಹಿ ತಿಂಡಿ ಹೆಸರುಗಳನ್ನು ಬಳಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ತೋರುತ್ತಿದೆ.

Recommended Video

48 ನಿಮಿಷದಲ್ಲಿ 5 Km ಆಟೋ ಎಳೆದ ಭೂಪ | Oneindia Kannada

ಗೂಗಲ್ ಆ್ಯಂಡ್ರಾಯ್ಡ್‌ 11 ಆಂತರಿಕ ಹೆಸರು "ರೆಡ್ ವೆಲ್ವೆಟ್ ಕೇಕ್" ಎಂದು ತಿಳಿದುಬಂದಿದೆ.

8,000 ರುಪಾಯಿ ಒಳಗೆ ಹೊಸ ಮೊಬೈಲ್ ಬಿಡುಗಡೆ ಮಾಡಿದ ರಿಯಲ್‌ ಮಿ8,000 ರುಪಾಯಿ ಒಳಗೆ ಹೊಸ ಮೊಬೈಲ್ ಬಿಡುಗಡೆ ಮಾಡಿದ ರಿಯಲ್‌ ಮಿ

ಆಂಡ್ರಾಯ್ಡ್ ಎಂಜಿನಿಯರಿಂಗ್ ಉಪಾಧ್ಯಕ್ಷ ಡೇವ್ ಬರ್ಕ್ ಅವರು ಪಾಡ್ಕ್ಯಾಸ್ಟ್ ಸಂದರ್ಶನದಲ್ಲಿ ಆಲ್ ಆ್ಯಂಡ್ರಾಯ್ಡ್‌ 11 ರ ಆಂತರಿಕ ಹೆಸರಿನ ಬಗ್ಗೆ ಮಾತನಾಡಿದರು. ಆಂಡ್ರಾಯ್ಡ್ 11 ಗೆ ಯಾವ ಸಿಹಿತಿಂಡಿ ಹೆಸರಿಡಲಾಗುವುದು ಅಥವಾ ಅದು ಆಂತರಿಕ ಸಿಹಿ ಹೆಸರನ್ನು ಹೊಂದಿದೆಯೇ ಎಂದು ಕೇಳಲಾದ ಪ್ರಶ್ನೆಗೆ ''ನನ್ನ ತಂಡದ ಎಂಜಿನಿಯರ್ ಅವರು ಏನು ಕೆಲಸ ಮಾಡುತ್ತಿದ್ದಾರೆ ಎಂದು ನೀವು ಕೇಳಿದರೆ, ಅವರು ಆರ್‌ವಿಸಿ ಎಂದು ಹೇಳುತ್ತಾರೆ. ಆದ್ದರಿಂದ, ಆರ್‌ವಿಸಿ ರೆಡ್ ವೆಲ್ವೆಟ್ ಕೇಕ್ ಆಗಿದೆ, "ಬರ್ಕ್ ಉತ್ತರಿಸಿದ್ದರು.

ರೆಡ್ ವೆಲ್ವೆಟ್ ಕೇಕ್ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ

ರೆಡ್ ವೆಲ್ವೆಟ್ ಕೇಕ್ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ

ಎಂಜಿನಿಯರ್‌ಗಳು ಆರ್‌ವಿಸಿ ಬಳಸುತ್ತಿದ್ದರೂ ಆಂಡ್ರಾಯ್ಡ್‌ಗಾಗಿ ಓಪನ್ ಸೋರ್ಸ್ ಕೋಡ್‌ಗಳಲ್ಲಿ ‘ಆರ್' ಮಾತ್ರ ಕಾಣಿಸುತ್ತದೆ ಎಂದು ಬರ್ಕ್ ಹೇಳಿದರು. ಆದ್ದರಿಂದ ರೆಡ್ ವೆಲ್ವೆಟ್ ಕೇಕ್ ಬಗ್ಗೆ ಬೇರೆಲ್ಲಿಯೂ ಉಲ್ಲೇಖವಿಲ್ಲ.

ಆ್ಯಂಡ್ರಾಯ್ಡ್‌ ಮೊದಲ ಆವೃತ್ತಿ ಬಿಡುಗಡೆಯಾಗಿದ್ದು 2008ರಲ್ಲಿ

ಆ್ಯಂಡ್ರಾಯ್ಡ್‌ ಮೊದಲ ಆವೃತ್ತಿ ಬಿಡುಗಡೆಯಾಗಿದ್ದು 2008ರಲ್ಲಿ

ಆ್ಯಂಡ್ರಾಯ್ಡ್‌ ಮೊದಲ ಆವೃತ್ತಿ 1.0 ಬಿಡುಗಡೆಯಾಗಿದ್ದು 2008ರಲ್ಲಿ. ಆ್ಯಸ್ಟ್ರಾಯ್ಡ್‌ ಎಂದು ಕರೆಯಲಾಗಿದ್ದ ಆ ತಂತ್ರಾಂಶ ಸಾಮಾನ್ಯ ಬಳಕೆದಾರರಿಗೆ ದೊರೆತಿರಲಿಲ್ಲ. ಹೊಸ ಆವೃತ್ತಿಗಳನ್ನು ಬಳಕೆಗೆ ತರುವ ಜೊತೆಗೆ ಗ್ರಾಹಕರನ್ನು ಸೆಳೆಯಲು ಸಿಹಿ ತಿಂಡಿಗಳ ಹೆಸರನ್ನು ಪ್ರಯೋಗಿಸಿತು. ಈವರೆಗೆ 14 ಸಿಹಿ ತಿಂಡಿ ಹೆಸರುಗಳಿಗಾಗಿ(ಡೆಸರ್ಟ್) ವರ್ಣಮಾಲೆಯ ಕ್ರಮವನ್ನು ಅನುಸರಿಸಿತು.

ಆ್ಯಂಡ್ರಾಯ್ಡ್‌ 11 ಸೆಪ್ಟೆಂಬರ್ 8 ರಂದು ಬಿಡುಗಡೆ

ಆ್ಯಂಡ್ರಾಯ್ಡ್‌ 11 ಸೆಪ್ಟೆಂಬರ್ 8 ರಂದು ಬಿಡುಗಡೆ

ಗೂಗಲ್‌ನ ಇತ್ತೀಚಿನ ಆಂಡ್ರಾಯ್ಡ್ 11 ಪ್ರಸ್ತುತ ಆಯ್ದ ಸ್ಮಾರ್ಟ್‌ಫೋನ್‌ಗಳಿಗಾಗಿ ಬೀಟಾದಲ್ಲಿ ಲಭ್ಯವಿದೆ.ಬಹುಶಃ ಸೆಪ್ಟೆಂಬರ್ 8 ರಂದು ಹೊಸ ಆವೃತ್ತಿಯು ಬಿಡುಗಡೆಯಾಗುತ್ತದೆ.

ಆ್ಯಂಡ್ರಾಯ್ಡ್‌ ಸಿಹಿ ತಿಂಡಿ ಹೆಸರುಗಳು

ಆ್ಯಂಡ್ರಾಯ್ಡ್‌ ಸಿಹಿ ತಿಂಡಿ ಹೆಸರುಗಳು

ಕಪ್‌ಕೇಕ್ (ಆ್ಯಂಡ್ರಾಯ್ಡ್‌ 1.5), ಡೋನಟ್ (1.6). ಎಕ್ಲೇರ್ (2.0, 2.0.1, 2.1), ಪ್ರೋಯೊ (2.2), ಜಿಂಜರ್‌ಬ್ರೆಡ್ (2.3, 2.3.3), ಹನಿ ಕಾಂಬ್ (3.0, 3.1, 3.2), ಐಸ್‌ ಕ್ರೀ ಸ್ಯಾಂಡ್ವಿಚ್ (4.0, 4.0.3), ಕಿಟ್‌ಕ್ಯಾಟ್ (4.4), ಲಾಲಿಪಾಪ್ (5.0, 5.1), ಮಾರ್ಷ್‌ಮಲೊ (6.0), ನೋಗಟ್ (7.0, 7.1), ಓರಿಯೊ (8.0, 8.1) ಹಾಗೂ 2018ರಲ್ಲಿ ಬಿಡುಗಡೆಯಾ ಪೈ (9.0) ಆ್ಯಂಡ್ರಾಯ್ಡ್ ಪೈಕಿ ಸಿಹಿ ತಿಂಡಿ ಹೆಸರಿನ ಕೊನೆಯ ಒಎಸ್ ಆಗಿದೆ. ನಂತರ ಆ್ಯಂಡ್ರಾಯ್ಡ್‌ 10 ಎಂದು ಹೆಸರಿಸಲಾಗಿತ್ತು.

English summary
Google couldn’t stop using dessert names at all with Android 11’s internal name revealed to be “Red Velvet Cake”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X