ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಮಲಾ ಸೀತಾರಾಮನ್ ನಿರ್ಧಾರವನ್ನು ಹೊಗಳಿದ ಆನಂದ್ ಮಹೀಂದ್ರಾ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ಕಾರ್ಪೊರೇಟ್ ತೆರಿಗೆ ಕಡಿತದ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ದೇಶದಾದ್ಯಂತ ಉದ್ಯಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡುತ್ತಿದ್ದಂತೆಯೇ ಷೇರು ಪೇಟೆ ಸೂಚ್ಯಂಕವೂ ಹುಮ್ಮಸ್ಸಿನಿಂದ ಜಿಗಿತ ಕಂಡಿರುವುದು ಹೂಡಿಕೆದಾರರು ಹಾಗೂ ಉದ್ಯಮಗಳಲ್ಲಿ ಖುಷಿ ನೀಡಿದೆ.

ತಗ್ಗಿದ ಆಮದು ಸುಂಕ, ಎಲ್ಇಡಿ ಮತ್ತು ಎಲ್.ಸಿ.ಡಿ. ಟಿವಿ ಬೆಲೆ ಇಳಿಕೆ?ತಗ್ಗಿದ ಆಮದು ಸುಂಕ, ಎಲ್ಇಡಿ ಮತ್ತು ಎಲ್.ಸಿ.ಡಿ. ಟಿವಿ ಬೆಲೆ ಇಳಿಕೆ?

ಉದ್ಯಮಿ ಆನಂದ್ ಮಹೀಂದ್ರಾ ಕೂಡ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಅಮೆರಿಕದ ಪ್ರವಾಸದಲ್ಲಿರುವ ಅವರು ಈ ನಡೆಯನ್ನು ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ.

ಆರ್ಥಿಕ ಸುಧಾರಣೆಗೆ ಮಹತ್ವದ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್ಆರ್ಥಿಕ ಸುಧಾರಣೆಗೆ ಮಹತ್ವದ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್

'ಅಮೆರಿಕದಲ್ಲಿ ಈ ಸುದ್ದಿಯಿಂದ ಎಚ್ಚರಗೊಂಡೆ. ದಿನವನ್ನು ಆರಂಭಿಸಲು ಇದು ಅತ್ಯುತ್ತಮ ಮಾರ್ಗ. ಕಂಪೆನಿಗಳು ಕಡಿಮೆ ತೆರಿಗೆ ಪಾವತಿಸಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಅಲ್ಲ. ಏಕೆಂದರೆ ಇದು ಮತ್ತೊಂದು ನೀತಿಯನ್ನು ತಿರುಚುವಿಕೆಯಲ್ಲ. ನಿರ್ಮಲಾ ಸೀತಾರಾಮನ್ ಅವರು ಹಾರಿಸಿರುವ ಗುಂಡಿನ ಸದ್ದು ಜಗತ್ತಿನೆಲ್ಲೆಡೆ ಕೇಳಿಸುತ್ತದೆ. ಭಾರತವು ಜಾಗತಿಕ ಹೂಡಿಕೆದಾರರಿಗೆ ಆಹ್ವಾನ ಪತ್ರಿಕೆಯನ್ನು ರವಾನಿಸಿದೆ' ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.

Anand Mahindra Praises Nirmala Sitharaman For Slashing Corporate Tax

ವಿ. ಜಿ. ಸಿದ್ದಾರ್ಥ ಮಾಲಿಕತ್ವದ ಗ್ಲೋಬಲ್ ವಿಲೇಜ್ 2700 ಕೋಟಿಗೆ ಮಾರಾಟ ವಿ. ಜಿ. ಸಿದ್ದಾರ್ಥ ಮಾಲಿಕತ್ವದ ಗ್ಲೋಬಲ್ ವಿಲೇಜ್ 2700 ಕೋಟಿಗೆ ಮಾರಾಟ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡಲು ದೇಶಿ ಉತ್ಪಾದನಾ ಕಂಪೆನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇ 25.17ಕ್ಕೆ ಕಡಿತಗೊಳಿಸಿರುವುದಾಗಿ ಪ್ರಕಟಿಸಿದ್ದರು. ಇದಲ್ಲದೆ ಹೂಡಿಕೆದಾರರನ್ನು ಸೆಳೆಯಲು ವಿವಿಧ ತೆರಿಗೆ ವಿನಾಯಿತಿಗಳನ್ನು ಘೋಷಿಸಿದ್ದರು.

English summary
Businessman Anand Mahindra hailed the decision of slashing Corporate tax by finance minister Nirmala Sitharaman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X