• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ONLINEನಲ್ಲಿ ದೊರೆಯುತ್ತಿರುವ ತೆಂಡೂಲ್ಕರ್ ಹೆಸರಿನ ಫೋನ್ ಹೇಗಿದೆ?

|

ವಿಶ್ವ ವಿಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲೊಂದು ಸ್ಮಾರ್ಟ್ ಫೋನ್ ಬಿಡುಗಡೆಗೆ ವೇದಿಕೆ ಸಜ್ಜಾಗಿದ್ದು, ಮೇ 3ರಂದು ಈ ಫೋನ್ ಭಾರತದಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ.

ಸ್ಮಾರ್ಟ್ ಟ್ರಾನ್ ಎಂಬ ಹೈದರಾಬಾದ್ ಮೂಲದ ಕಂಪನಿ ವತಿಯಿಂದ ಸಚಿನ್ ಹೆಸರಿನಲ್ಲಿ ಬಿಡುಗಡೆಗೊಂಡಿರುವ ಈ ಸ್ಮಾರ್ಟ್ ಫೋನ್ ನ ಮಾರಾಟ ಫ್ಲಿಪ್ ಕಾರ್ಟ್ ನಲ್ಲಿ ಬುಧವಾರದಿಂದ ಆರಂಭವಾಗಿದೆ.

ಹಾಗಾದರೆ, ಸಚಿನ್ ಹಸ್ತಾಕ್ಷರವಿರುವ ಈ ಮೊಬೈಲ್ ನ ವಿಶೇಷತೆಯೇನು ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿವೆ....

ಬರೀ ಒಂದು ಸಾವಿರ ವ್ಯತ್ಯಾಸ

ಬರೀ ಒಂದು ಸಾವಿರ ವ್ಯತ್ಯಾಸ

ಈ ಫೋನ್ ಎರಡು ಮಾದರಿಗಳಲ್ಲಿ ಬರುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮೊದಲ ಮಾದರಿಯು 32 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ (ROM) ಇದರ ಬೆಲೆ, 12 ಸಾವಿರ ರು. (Rs. 12,999) ಇದೆ. ಮತ್ತೊಂದರ ಆಂತರಿಕ ಸಂಗ್ರಹಣಾ ಜಿಪಿಯು 64 ಜಿಬಿ ಇದ್ದು ಇದರ ಬೆಲೆ 14 ಸಾವಿರ ರು. (Rs. 13,999) ಇದೆ.

ಕ್ಯಾಮೆರಾ, ಬ್ಯಾಟರಿ ಇತ್ಯಾದಿ

ಕ್ಯಾಮೆರಾ, ಬ್ಯಾಟರಿ ಇತ್ಯಾದಿ

ಇನ್ನುಳಿದಂತೆ, ಎರಡೂ ಮೊಬೈಲ್ ಗಳಲ್ಲಿ 4 ಜಿಬಿ RAM ಇದ್ದು, 5.5 ಇಂಚು ಎಲ್ ಸಿಡಿ ಪರದೆ (ಗೊರಿಲ್ಲಾ ಗ್ಲಾಸ್ 3 ಸಹಿತ), ಮುಖ್ಯ ಕ್ಯಾಮೆರಾ (ಹಿಂಬದಿ ಕ್ಯಾಮೆರಾ) 13 ಮೆಗಾ ಪಿಕ್ಸೆಲ್ ಕ್ಯಾಮೆರಾ, ಮುಂಭಾಗದ ಕ್ಯಾಮೆರಾ 5 ಮೆಗಾ ಪಿಕ್ಸೆಲ್, 3000 ಎಂಎಎಚ್ ಲೀಥಿಯಮ್ ಇಯಾನ್ ಪಾಲಿಮರ್ ಬ್ಯಾಟರಿ ಹೊಂದಿದೆ.

ಆಪರೇಟಿಂಗ್ ಸಿಸ್ಟಂ ಉತ್ತಮ

ಆಪರೇಟಿಂಗ್ ಸಿಸ್ಟಂ ಉತ್ತಮ

ಇದರಲ್ಲಿ, ಸ್ನಾಪ್ ಡ್ರಾಗನ್ 652 ಪ್ರಾಸೆಸರ್ ಇದೆ. ಇದು ಆಕ್ಟಾ ಕೋರ್ ಮಾದರಿಯದ್ದಾಗಿದ್ದು, 1.44 ಗಿಗಾ ಹಟ್ಜ್ ವೇಗವಾಗಿ ಕೆಲಸ ಮಾಡಬಲ್ಲದಾಗಿದೆ. ಆ್ಯಂಡ್ರಾಯ್ಡ್ ನೌಗಟ್ ಆಪರೇಟಿಂಗ್ ಸಿಸ್ಟಂ ಹೊಂದಿದೆ.

ಇತರ ಫೀಚರ್ ಗಳೂ ಲಭ್ಯ

ಇತರ ಫೀಚರ್ ಗಳೂ ಲಭ್ಯ

ಇನ್ನು, ಇದರಲ್ಲಿ ಎರಡು ಸಿಮ್ (LTE - ಎರಡೂ ಮೈಕ್ರೋ ಸಿಮ್) ಹಾಕಬಹುದು. ವೈಫೈ, ಜಿಪಿಎಸ್, ಬ್ಲೂ ಟೂತ್, ಎನ್ ಎಫ್ ಸಿ, ಯುಎಸ್ ಬಿ ಒಟಿಜಿ, ಎಫ್ ಎಂ, ಭಾರತದಲ್ಲಿನ 3ಜಿ ಹಾಗೂ 4 ಜಿ ಬೆಂಬಲಿತ ತಂತ್ರಜ್ಞಾನಗಳಿವೆ.

ಕೆಲವು ಪ್ಲಸ್ ಪಾಯಿಂಟ್

ಕೆಲವು ಪ್ಲಸ್ ಪಾಯಿಂಟ್

ಎರಡೂ ಫೋನ್ ಗಳಲ್ಲಿ ಆ್ಯಂಡ್ರಾಯ್ಡ್ ನೌಗಟ್ ಇರುವುದು ಪ್ಲಸ್ ಪಾಯಿಂಟ್. ಇನ್ನು, ಫೋನ್ ಕೂಡ ಪರವಾಗಿಲ್ಲ. ಇಂದಿನ ಟ್ರೆಂಡ್ ಗಳಾದ ಸೆಲ್ಫೀ, 4ಜಿ, 4ಜಿ ವೈಫೈ, 4ಜಿ ಫೋನ್ ಕಾಲ್ ಗಳಿಗೆ ಇದು ಬೆಂಬಲ ನೀಡುತ್ತದೆ. ಇದೆಲ್ಲವೂ ಪ್ಲಸ್ ಪಾಯಿಂಟ್.

ಪೈಪೋಟಿ ನೀಡಲಾಗಿಲ್ಲ

ಪೈಪೋಟಿ ನೀಡಲಾಗಿಲ್ಲ

ಸಚಿನ್ ಹೆಸರಲ್ಲಿ ಮಾರುಕಟ್ಟೆಗೆ ಕಾಲಿಟ್ಟು ಜನರನ್ನು ಆಕರ್ಷಿಸುತ್ತಿರುವ ಈ ಫೋನ್ ನಲ್ಲಿ ಭಾರೀ ಭಾರೀ ವಿಶೇಷತೆಗಳೇನಿಲ್ಲ. 13 ಸಾವಿರ ಕೊಟ್ಟರೆ 32 ಜಿಬಿ ROM, 14 ಸಾವಿರ ರು. ಕೊಟ್ಟರೆ 64 ಜಿಬಿ ROM ಸಿಗುವುದೇನೋ ಸರಿ. ಆದರೆ, ಇಷ್ಟೇ ಅಥವಾ ಇದಕ್ಕಿಂತ ಒಂದೆರಡು ಸಾವಿರ ಕಡಿಮೆ ದರಗಳಿಗೆ ಇದೇ ಪ್ರಮಾಣದ ROM ಇರುವ ಫೋನುಗಳು ಲಭ್ಯವಿರುವುದರಿಂದ ಈ ಫೋನಿನಲ್ಲಿ ಅಂಥಾ ವಿಶೇಷ ಅನ್ನಿಸುವುದಿಲ್ಲ.

ಪ್ರಾಸೆಸರ್ ಮತ್ತಷ್ಟು ವೇಗದ್ದಿರಬೇಕಿತ್ತು

ಪ್ರಾಸೆಸರ್ ಮತ್ತಷ್ಟು ವೇಗದ್ದಿರಬೇಕಿತ್ತು

ಇನ್ನು, ಡಿಸ್ ಪ್ಲೇ ಪರದೆಯ ಸುರಕ್ಷೆಗಾಗಿ ಗೊರಿಲ್ಲಾ ಗ್ಲಾಸ್ 3 ಮಾದರಿ ಹಾಕಲಾಗಿದೆ. ಈಗಾಗಲೇ ಗೊರಿಲ್ಲಾ 4, 5, ಶ್ರೇಣಿಗಳು ಮಾರುಕಟ್ಟೆಗೆ ಬಂದಿವೆ. ಗೊರಿಲ್ಲಾ 5 ತುಂಬಾ ದುಬಾರಿ ಎನಿಸಿದರೂ, ಗೊರಿಲ್ಲಾ 4 ಗ್ಲಾಸ್ ಬಳಸಬಹುದಾಗಿತ್ತು.

ಇನ್ನು, ಸ್ನಾಪ್ ಡ್ರಾಗನ್ 652 ಪ್ರಾಸೆಸರ್ ಈ ಹಿಂದಿದ್ದ 625 ಪ್ರಾಸೆಸರ್ ಗಿಂತ ಶೇ. 30ರಷ್ಟು ವೇಗವಿದೆ ಎಂದು ಕಂಪನಿ ಹೇಳಿಕೊಂಡಿದ್ದರೂ, 1.44 ಗಿಗಾ ಹರ್ಟ್ಸ್ ವೇಗ ಅಷ್ಟು ಸಾಲದು ಎನ್ನಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is the overall analysis of Newly introduced mobile handset with Sachin Tendulkar Brand name. It has its own significance for using his name but lacks in providing extra ordionery specifications to buyers as expected before its lauch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more