ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಕ್ಕೆ ಭಾರಿ ಪೆಟ್ಟು, ಆಮದು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಚಿಂತನೆ

|
Google Oneindia Kannada News

ನವದೆಹಲಿ, ಜೂನ್ 22: ಚೀನಾ ಹಾಗೂ ಭಾರತ ನಡುವೆ ಲಡಾಕ್ ನ ಪೂರ್ವ ಭಾಗದ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಯೋಧರ ಬಲಿದಾನವಾಗಿದೆ. ಇದಕ್ಕೆ ಪ್ರತೀಕಾರವೆಂಬಂತೆ ಚೀನಾ ವಿರುದ್ಧ ಆರ್ಥಿಕ ಸಮರ ಸಾರಬೇಕು ಎಂಬ ಕೂಗು ಬಲವಾಗಿ ಕೇಳಿ ಬಂದಿದೆ. ಮೊದಲ ಹೆಜ್ಜೆಯಾಗಿ ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದ ಅಬಕಾರಿ ಸುಂಕ ವಿಧಿಸಲು ಭಾರತ ಸರ್ಕಾರ ಮುಂದಾಗಿದೆ ಎಂಬ ಸುದ್ದಿಯಿದೆ.

ಚೀನಾಕ್ಕೆ ಭಾರತ ರಫ್ತು ಮಾಡುವ ಪ್ರಮಾಣದ 7 ಪಟ್ಟು ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಜನವರಿ 2020ರಲ್ಲಿ 429.55 ಬಿಲಿಯನ್ ಮೌಲ್ಯದ ಸರಕು ಆಮದಾಗಿತ್ತು. ಫೆಬ್ರವರಿಯಲ್ಲಿ 317.64 ಬಿಲಿಯನ್ ಗೆ ಇಳಿಕೆಯಾಗಿದೆ. 2018-19ರಲ್ಲಿ ಚೀನಾಕ್ಕೆ ರಫ್ತು ಪ್ರಮಾಣ 16.7 ಬಿಲಿಯನ್ ಡಾಲರ್ ನಷ್ಟಿತ್ತು. ಆದರೆ, ಆಮದು ಮೌಲ್ಯ 70.3 ಬಿಲಿಯನ್ ಡಾಲರ್ ನಷ್ಟಿತ್ತು. 2020ರಲ್ಲಿ ಭಾರತದ ಒಟ್ಟಾರೆ ರಫ್ತು ಪ್ರಮಾಣ ಮೇ ತಿಂಗಳಲ್ಲಿ 19.05 ಬಿಲಿಯನ್ ಡಾಲರ್ ನಷ್ಟಿದೆ. ಆಮದು ಪ್ರಮಾಣ 22.20 ಬಿಲಿಯನ್ ಡಾಲರ್ ನಷ್ಟಿದೆ.

ಚೀನಾ ಜೊತೆಗಿನ ಡೀಲ್ ಸ್ಥಗಿತ; 5000 ಕೋಟಿ ರು ಮಹಾ ಆಘಾತಚೀನಾ ಜೊತೆಗಿನ ಡೀಲ್ ಸ್ಥಗಿತ; 5000 ಕೋಟಿ ರು ಮಹಾ ಆಘಾತ

ಭಾರತದ ಒಟ್ಟು ಆಮದು ಪ್ರಮಾಣದಲ್ಲಿ ಚೀನಾ ಶೇ 14ರಷ್ಟು ಪಾಲು ಹೊಂದಿದೆ. ಏಪ್ರಿಲ್ 2019ರಿಂದ ಫೆಬ್ರವರಿ 2020ರ ಅವಧಿಯಲ್ಲಿ ಭಾರತವು ಸುಮಾರು 62.4 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ಭಾರತದಿಂದ 15.5 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಉತ್ಪನ್ನ ರಫ್ತಾಗಿದೆ.

ಚೀನಾದಿಂದ ಏನೆಲ್ಲ ಆಮದು?, ಚೀನಾದ ಪಾಲು ಎಷ್ಟಿದೆ?

ಚೀನಾದಿಂದ ಏನೆಲ್ಲ ಆಮದು?, ಚೀನಾದ ಪಾಲು ಎಷ್ಟಿದೆ?

ಎಲೆಕ್ಟ್ರಾನಿಕ್ ಕಚ್ಚಾವಸ್ತು, ವಾಚ್, ಗಡಿಯಾರ, ಸಂಗೀತ ಉಪಕರಣ, ಆಟಿಕೆ, ಕ್ರೀಡಾ ಸಾಧನ, ಪೀಠೋಪಕರಣ, ನೆಲಹಾಸು, ಪ್ಲಾಸ್ಟಿಕ್ ಉತ್ಪನ್ನಗಳು, ಎಲೆಕ್ಟ್ರಿಕಲ್ ಮಷಿನ್, ರಾಸಾಯನಿಕ ಕಚ್ಚಾವಸ್ತು, ಕಬ್ಬಿಣ, ಉಕ್ಕು, ರಸಗೊಬ್ಬರ, ಲೋಹದ ವಸ್ತು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ 73ರಷ್ಟು ಚೀನಾ ಮೂಲದ ಶಿಯೋಮಿ, ಒಪ್ಪೋ, ಒನ್ ಪ್ಲಸ್ ಒನ್, ರಿಯಲ್ ಮಿ, ವಿವೋ ಫೋನ್ ಗಳು ಸೇಲ್ ಆಗಿವೆ. ಭಾರತದ ಪ್ರಮುಖ 30 ಬಿಲಿಯನ್ ಡಾಲರ್ ಸ್ಟಾರ್ ಅಪ್ ಕಂಪನಿಗಳ ಪೈಕಿ 18ರಲ್ಲಿ ಚೀನಾ ಹೂಡಿಕೆ ಹೊಂದಿದೆ

ಆಟೋಮೊಬೈಲ್ ಕ್ಷೇತ್ರದಲ್ಲಿ ಶೇ 30ರಷ್ಟು, ಬೊಂಬೆ, ಆಟಿಕೆ, ಟಾಯ್ಸ್ ಗೇಮ್ಸ್ ಕ್ಷೇತ್ರದಲ್ಲಿ ಶೇ 90ರಷ್ಟು ಪಾಲು, ಬೈಸಿಕಲ್ ನಿರ್ಮಾಣಕ್ಕೆ ಶೇ 50ರಷ್ಟು ಚೀನಾ ಪಾಲು ಅಗತ್ಯ. ಎಚ್ ಸಿಕ್ಯೂ ತಯಾರಿಕೆಗೆ ಬೇಕಾದ Active Pharmaceutical Ingredients (APIs), ಪಿಪಿಇ ಕಿಟ್ಸ್ ಚೀನಾದಿಂದ ಮಾತ್ರ ಪೂರೈಕೆಯಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ವ್ಯಾಪಾರ ವಹಿವಾಟು ಕೊರತೆ

ವರ್ಷದಿಂದ ವರ್ಷಕ್ಕೆ ವ್ಯಾಪಾರ ವಹಿವಾಟು ಕೊರತೆ

ಹೀಗಾಗಿ, ವರ್ಷದಿಂದ ವರ್ಷಕ್ಕೆ ವ್ಯಾಪಾರ ವಹಿವಾಟು ಕೊರತೆ ಏಪ್ರಿಲ್ -ಫೆಬ್ರವರಿ 2019-20 ಅವಧಿಯಲ್ಲಿ 50 ಬಿಲಿಯನ್ ಡಾಲರ್ ನಷ್ಟಿರುತ್ತದೆ. ಹಾಗಾಗಿ, ಚೀನಿ ಸರಕುಗಳ ನಿಷೇಧವು ಭಾರತಕ್ಕೆ ಹೊಡೆತವೇ ಹೆಚ್ಚು. ಚೀನಾದ ಒಟ್ಟು ವ್ಯಾಪಾರ ವಹಿವಾಟಿನಲ್ಲಿ ಭಾರತದ ಪಾಲು ಶೇ 2ರಷ್ಟು ಮಾತ್ರ ಅಂದರೆ, ಭಾರತದ ರಫ್ತು ಪಾಲು 2% ಹೀಗಾಗಿ ಚೀನಾಕ್ಕೆ ಯಾವುದೇ ರೀತಿ ನಿರ್ಬಂಧ, ನಿಷೇಧದ ಬಿಸಿ ತಟ್ಟಲಾರದು.

ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ಹೇರಬಹುದು

ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ಹೇರಬಹುದು

ಆದರೆ, ವ್ಯಾಪಾರ, ವಹಿವಾಟು ನಿಷೇಧ, ನಿರ್ಬಂಧ ಹೇರದೆ, ಆಮದು ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಮಾಣದ ಅಬಕಾರಿ ಸುಂಕ ಹೇರಬಹುದು. ಇದರಿಂದ ಚೀನಾ ಕಂಪನಿಗಳು ತಾವಾಗೇ ಹಿಂದೆ ಸರಿಯಬಹುದು. ಸ್ಥಳೀಯ ಕಂಪನಿಗಳು ಪೈಪೋಟಿಗೆ ಬಿದ್ದು ಉತ್ತಮ ಗುಣಮಟ್ಟದ ಸ್ವದೇಶಿ ಉತ್ಪನ್ನಗಳನ್ನು ಚೀನಿ ವಸ್ತುಗಳ ಬದಲಿಗೆ ಮಾರುಕಟ್ಟೆಗೆ ಪರಿಚಯಿಸಬಹುದು.

ಈ ಮೂಲಕ ಪ್ರಧಾನಿ ಮೋದಿ ಕರೆ ನೀಡಿದಂತೆ ಆತ್ಮ ನಿರ್ಭರ ಭಾರತ, ವೋಕಲ್ ಫಾರ್ ಲೋಕಲ್, ಮೇಕ್ ಇನ್ ಇಂಡಿಯಾ ಯೋಜನೆಗಳನ್ನು ಸಾಧಿಸಬಹುದು ಜೊತೆಗೆ ಚೀನಾಗೂ ಬಿಸಿ ಮುಟ್ಟಿಸಬಹುದು. ಆದರೆ, ಈ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದ್ದು, ಅಂತಿಮ ನಿರ್ಧಾರ ಕೈಗೊಂಡಿಲ್ಲ. ಚೀನಾ ಉತ್ಪನ್ನ ಬಳಕೆ ಕಡಿಮೆ, ನಿರ್ಬಂಧ, ನಿಷೇಧ ಕುರಿತಂತೆ ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾ ಮಂಡಳಿಗಳಿಂದಲೂ ಒತ್ತಡ ಬಂದಿದೆ. ಆದರೆ, ಸರ್ಕಾರ ಈ ಬಗ್ಗೆ ಇನ್ನೂ ತನ್ನ ನಿರ್ಧಾರ ಪ್ರಕಟಿಸಬೇಕಿದೆ.

ದೇಶಿ ಕಂಪನಿಗಳಿಗೆ ಬೆಂಬಲ, ಎಫ್ ಡಿಐ ನೀತಿಗೆ ಕಡಿವಾಣ

ದೇಶಿ ಕಂಪನಿಗಳಿಗೆ ಬೆಂಬಲ, ಎಫ್ ಡಿಐ ನೀತಿಗೆ ಕಡಿವಾಣ

ದೇಶಿ ಕಂಪನಿಗಳಿಗೆ ನೀಡುವ ಸಾಲ, ಬಡ್ಡಿದರದಲ್ಲಿ ಭಾರಿ ವಿನಾಯಿತಿ, ರಿಯಾಯಿತಿ ಅಗತ್ಯ. ಇದು ಚೀನಾ ಕೂಡಾ ಅನುಸರಿಸಿಕೊಂಡು ಬಂದಿರುವ ಮಾರ್ಗ. ದೇಶಿ ಕಂಪನಿಗಳಿಗೆ ಬೇಕಾದ ಆರ್ಥಿಕ ಪ್ಯಾಕೇಜ್ ಈಗಾಗಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮೂಲ ಸೌಕರ್ಯ ಒದಗಿಸುವುದು, ಮಾರುಕಟ್ಟೆಯಲ್ಲಿ ಚೀನಿ ಕಂಪನಿ ವಿರುದ್ಧ ಸ್ಪರ್ಧಿಸಲು ಬಲ ತುಂಬುವುದು ಆಗಬೇಕಿರುವ ಕೆಲಸ.

ವಿದೇಶಿ ನೇರ ಬಂಡವಾಳ (ಎಫ್ ಡಿಐ) ಕ್ಷೇತ್ರದಲ್ಲಿ ಇನ್ನಷ್ಟು ಉದಾರೀಕರಣ ನೀತಿ ಅಗತ್ಯ. ಚೀನಾದಿಂದ ಎಫ್ ಡಿಐ ಮೂಲಕ ಶೇ 25 ಹಾಗೂ ಯುಎಸ್ ನಿಂದ ಶೇ 10ರಷ್ಟು ಮಾತ್ರ ಭಾರತಕ್ಕೆ ದಕ್ಕುತ್ತಿದೆ. ಈ ನೀತಿ ಬದಲಾಗಬೇಕಿದೆ.

English summary
The government is considering hiking customs duty on a number of products, mainly imported from China, amid ongoing border tensions with the neighbouring country, a source said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X