ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್‌ ಅಂಬಾನಿ ಮೊದಲಿಗ

|
Google Oneindia Kannada News

ಬೆಂಗಳೂರು, ಸೆ. 17 : ಶೇರು ಮಾರುಕಟ್ಟೆ ಜಿಗಿತ ಮತ್ತು ರೂಪಾಯಿ ಮೌಲ್ಯವರ್ಧನೆ ಭಾರತ ಶ್ರೀಮಂತರ ಖಜಾನೆಯನ್ನು ಮತ್ತಷ್ಟು ತುಂಬಿಸಿದೆ ಎಂದು 'ಹುರುನ್‌ ಇಂಡಿಯಾ ರಿಚ್ ಪಟ್ಟಿ' ಹೇಳಿದೆ. ಮಂಗಳವಾರ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಭಾರತೀಯ ಕೋಟ್ಯಧಿಪತಿಗಳ ಆಸ್ತಿ ಮೌಲ್ಯದ ಲೆಕ್ಕಾಚಾರ ನೀಡಿದೆ.

ಜಿಡಿಪಿ ದರ ಏರಿಕೆ, ಹಣದುಬ್ಬರ ಇಳಿಕೆ, ಪೆಟ್ರೋಲ್ ದರ ಇಳಿಕೆ ಮುಂತಾದ ಸಂಗತಿಗಳು ಉದ್ಯಮಿಗಳ ಆದಾಯದ ಮೇಲೂ ಪರಿಣಾಮ ಬೀರಿದ್ದು ಕೋಟ್ಯಧಿಪತಿಗಳ ಆಸ್ತಿ ಲೆಕ್ಕ ನೀಡಲಾಗಿದೆ.(ದೋಡ್ಡ ಉದ್ಯಮಿ ಮುಕೇಶ್ ಅಂಬಾನಿ ಮಕ್ಕಳ ಕಥೆ ಹೀಗಿದೆ!)

mukesh

ಶೇರು ಮಾರುಕಟ್ಟೆಯಲ್ಲಿನ ಬೆಳವಣಿಗೆಯ ಉದ್ಯಮಿಗಳ ಆಸ್ತಿ ಹೆಚ್ಚಳಕ್ಕೆ ಕಾರಣ ಎಂದು ಹುರುನ್‌ ವರದಿಯ ಅಧ್ಯಕ್ಷ ರುಪೆಟ್ ಹುಗ್ ವರ್ಫ್ ಹೇಳಿದ್ದಾರೆ. ಚೀನಾ ಮತ್ತು ಭಾರತ ಎರಡೂ ದೇಶಗಳಲ್ಲಿ ಖಾಸಗಿ ಕ್ಷೇತ್ರಗಳು ಪ್ರತಿದಿನ ಗಣನೀಯ ಬೆಳವಣಿಗೆ ದಾಖಲಿಸುತ್ತಿವೆ. ಚೀನಾ ರಿಯಲ್‌ ಎಸ್ಟೇಟ್ ವಿಭಾಗದಲ್ಲಿ ಸಾಧನೆ ಮಾಡಿದ್ದರೆ, ಭಾರತ ಆರೋಗ್ಯ ಮತ್ತು ಔಷಧ ಉತ್ಪಾದಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ 230 ಜನರ ಪಟ್ಟಿ ಬದಿಗಿಟ್ಟು ಈ ಬಾರಿ 141 ಶ್ರೀಮಂತರ ಆಸ್ತಿ ಲೆಕ್ಕ ಹಾಕಿ ಅಂತಿಮ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಂಬಾನಿ ಟಾಪ್
ಮುಖೇಶ್‌ ಅಂಬಾನಿ ಭಾರತೀಯ ಕೋಟ್ಯಧಿಪತಿಗಳಲ್ಲಿ ಅಗ್ರಗಣ್ಯ. 1.65 ಕಲ್ಷ ಕೋಟಿ ರೂ. ಆಸ್ತಿಹೊಂದಿರುವ ಮುಖೇಶ್‌ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 37 ರಷ್ಟು ಏರಿಕೆ ಕಂಡಿದ್ದಾರೆ.

ಕಳೆದ ವರ್ಷ ಶ್ರೀಮಂತರ ಪಟ್ಟಿಯಲ್ಲಿ ಸ್ಪರ್ಧೆ ನೀಡಿದ್ದ ಎಲ್ಲ 230 ಜನರನ್ನು ಹಿಂದಿಕ್ಕಿದ ಅಂಬಾನಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮುಖೇಶ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಕಳೆದ ವರ್ಷ 78 ಸಾವಿರ ಕೋಟಿ ರೂ. ಬಂಡವಾಳವನ್ನು ವಿವಿಧ ವಿಭಾಗಗಳ ಮೇಲೆ ಹೂಡಿತ್ತು. ಅಲ್ಲದೇ ಭಾರತದ ಪ್ರಮುಖ ಮಾಧ್ಯಮ ಸಂಸ್ಥೆ 'ನೆಟ್ ವರ್ಕ್-18' ನ್ನು 4,200 ಕೋಟಿ ರೂ.ಗೆ ಖರೀದಿಸಿತ್ತು.(ಮಾಧ್ಯಮ ಕ್ಷೇತ್ರದಲ್ಲಿ ರಿಲಯನ್ಸ್ ಭಾರಿ ಸಂಚಲನ!)

ಸನ್‌ ಫಾರ್ಮಾಟಿಕಲ್ಸ್‌ ಒಡೆಯ ದಿಲೀಪ್‌ ಶಾಂಘ್ವಿ ಎರಡನೇ ಸ್ಥಾನ ಪಡೆದಿದ್ದು ಮಿತ್ತಲ್‌ ಅವರನ್ನು ಮೊದಲ ಬಾರಿಗೆ ಹಿಂದಿಕ್ಕಿದ್ದಾರೆ. ಅವರ ಆಸ್ತಿ ಪ್ರಮಾಣದಲ್ಲಿ ಶೇ. 43 ಹೆಚ್ಚಳವಾಗಿದ್ದು 1.29 ಲಕ್ಷ ಕೋಟಿ ಆಸ್ತಿಗೆ ಒಡೆಯರಾಗಿದ್ದಾರೆ.

ಜಪಾನ್‌ ಮೂಲದ ರಾನ್‌ಬೈಸಿಯನ್ನು ಖರೀದಿಸುವ ಮೂಲಕ ಸನ್‌ ವಿಶ್ವದ ಐದನೇ ದೊಡ್ಡ ಔ‍ಷಧ ಉತ್ಪಾದಕ ಸಂಸ್ಥೆಯಾಗಿ ಹೊರಹೊಮ್ಮಿದೆ. ರಾನ್‌ಬೈಸಿಯ ವಾರ್ಷಿಕ ವರಮಾನವೇ 10,800 ಕೋಟಿ ರೂಪಾಯಿಗಳಷ್ಟಿದೆ.(ಭಾರತ ಶ್ರೀಮಂತರ ರಾಷ್ಟ್ರ, ಮುಖೇಶ್ ನಂ.1)

ಅದಾನಿ ಶ್ರೇಯಾಂಕದಲ್ಲೂ ಜಿಗಿತ
ಗೌತಮ್‌ ಅದಾನಿ ಅಗ್ರ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ. ಈ ವರ್ಷ ಶೇ. 152 ರಷ್ಟು ಏರಿಕೆಕಂಡಿರುವ ಅವರ ಆಸ್ತಿ ಒಟ್ಟು ಮೌಲ್ಯ 44 ಸಾವಿರ ಕೋಟಿ ರೂಪಾಯಿ. ಶೇರು ಮಾರುಕಟ್ಟೆಯ ಮೇಲೆ ಪ್ರಭುತ್ವ ಸಾಧಿಸಿರುವ ಅದಾನಿ ಎಂಟರ್‌ ಪ್ರೈಸಸ್‌ ಉತ್ತಮ ಸಾಧನೆ ಮಾಡಿದೆ.

ಎಲ್‌.ಎನ್‌ ಮಿತ್ತಲ್‌ ಒಂದು ಸ್ಥಾನ ಹಿಂದಕ್ಕೆ ಜಾರಿದ್ದು ಒಟ್ಟು 97 ಸಾವಿರ ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅಜಿಂ ಪ್ರೆಂಜಿಯ ವಿಪ್ರೋ ಸಂಸ್ಥೆ ಶೇ.11 ರಷ್ಟು ಏರಿಕೆ ಕಂಡಿದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. 86 ಸಾವಿರ ಕೋಟಿ ರೂ. ಒಡೆತನದದ ಪ್ರೆಂಜಿ ದಕ್ಷಿಣ ಭಾರತದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಶಿವ ನಾಡರ್ ಒಡೆತನದ ಎಚ್‌ಸಿಎಲ್ ಟೆಕ್ನಾಲಜೀಸ್‌ ಸಹ ಉತ್ತಮ ಸಾಧನೆ ಮಾಡಿದೆ.

ಕುಸಿದ ಬಿರ್ಲಾ
72 ಸಾವಿರ ಕೋಟಿ ರೂ. ಆಸ್ತಿ ಹೊಂದಿರುವ ಎಸ್‌.ಪಿ,ಹಿಂದುಜಾ 6 ನೇ ಸ್ಥಾನ ಪಡೆದುಕೊಂಡಿದ್ದಾರೆ. ಏಳನೇ ಸ್ಥಾನ ಪಾಲ್ಲೋಂಜಿ ಮಿಸ್ಟ್ರಿ ಪಾಲಾಗಿದೆ.
ಆದರೆ, ಆದಿತ್ಯ ಬಿರ್ಲಾ ಒಡೆತನದ ಕುಮಾರ್‌ ಮಂಗಲಂ ಬಿರ್ಲಾ ಈ ಬಾರಿ ಎಂಟನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎರಡು ಸ್ಥಾನ ಕಳೆದುಕೊಂಡಿದೆ.

ಆದರೆ ಆದಾಯದಲ್ಲಿ ಶೇ. 24ರಷ್ಟು ಏರಿಕೆ ದಾಖಲಿಸಿದ್ದು 61 ಸಾವಿರ ಕೋಟಿ ಆಸ್ತಿ ಇದೆ ಎಂದು ದಾಖಲೆಗಳು ತಿಳಿಸಿವೆ. ಟೆಲಿಕಾಂ ಕ್ಷೇತ್ರದ ದಿಗ್ಗಜ ಮೋಗುಲ್ ಸುನೀಲ್ ಮಿತ್ತಲ್‌ 51 ಸಾವಿರ ಕೋಟಿ ಒಂಭತ್ತಬೇ ಸ್ಥಾನ ಪಡೆದಿದ್ದಾರೆ.

English summary
The stock market boom and a slight strengthening of the rupee have helped drive up the number of dollar billionaires in the country to record highs, according to the Hurun India Rich List for 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X