ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಲ್ ಗೇಟ್ಸ್ ಹಿಂದಿಕ್ಕಿ ಅತ್ಯಂತ ಶ್ರೀಮಂತ ಎನಿಸಿದ ಜೆಫ್!

By Mahesh
|
Google Oneindia Kannada News

ನ್ಯೂಯಾರ್ಕ್, ಜುಲೈ 18: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು 'ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಇಂಡೆಕ್ಸ್' ವರದಿ ಮಾಡಿದೆ. ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ಅಮೆಜಾನ್.ಕಾಮ್ ಸ್ಥಾಪಕ ಜೆಫ್ ಬೆಜೊಸ್ ಅವರು ಅತಿ ಶ್ರೀಮಂತ ಎನಿಸಿಕೊಂಡಿದ್ದಾರೆ.

ಕಳೆದ 12 ತಿಂಗಳುಗಳಲ್ಲಿ ಜೆಫ್ ಅವರು 60 ಬಿಲಿಯನ್ ಡಾಲರ್ ನಿವ್ವಳ ಆದಾಯ ಗಳಿಸಿದ್ದಾರೆ. ಒಟ್ಟಾರೆ, 150 ಬಿಲಿಯನ್ ಡಾಲರ್ ಗಳಿಕೆ ಹೊಂದಿ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

vಫ್ಲಿಪ್ ಕಾರ್ಟ್ ನಲ್ಲಿ 13,341 ಕೋಟಿ ರೂ. ಹೂಡಿಕೆಗೆ ಮುಂದಾದ ಅಮೆಜಾನ್ vಫ್ಲಿಪ್ ಕಾರ್ಟ್ ನಲ್ಲಿ 13,341 ಕೋಟಿ ರೂ. ಹೂಡಿಕೆಗೆ ಮುಂದಾದ ಅಮೆಜಾನ್

ಬಿಲ್ ಗೇಟ್ಸ್ ಅವರು ತಮ್ಮ ಬಳಿ ಇದ್ದ ಮೈಕ್ರೋಸಾಫ್ಟ್ ಗೆ ಸೇರಿರುವ 700 ಮಿಲಿಯನ್ ಷೇರುಗಳು ಹಾಗೂ 2.9 ಬಿಲಿಯನ್ ಡಾಲರ್ ನಗದನ್ನು ಬಿಲ್ ಹಾಗೂ ಮಿಲಿಂಡಾ ಗೇಟ್ಸ್ ಸಂಸ್ಥೆಗೆ ದಾನ ಮಾಡಿದ್ದಾರೆ. ಆದರೂ ಒಟ್ಟಾರೆ ಗೇಟ್ಸ್ ಬಳಿ ಆಸ್ತಿ ಮೊತ್ತ 149 ಬಿಲಿಯನ್ ಡಾಲರ್ ನಷ್ಟಿದೆ.

Amazons Jeff Bezos beats Bill Gates in new rich list

ಜೆಫ್ ಅವರು ಪ್ರತಿ ವರ್ಷ ಬ್ಲೂ ಆರಿಜಿನ್ ಗೆ 1 ಬಿಲಿಯನ್ ಡಾಲರ್ ದಾನ ಮಾಡುತ್ತಾರೆ. ಜುಲೈ 2017ರಲ್ಲಿ ಫೋರ್ಬ್ಸ್ ವರದಿಯಂತೆ ವಿಶ್ವದ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದ ಜೆಫ್ ಈಗ ಮತ್ತೊಮ್ಮೆ ಈ ಸ್ಥಾನಕ್ಕೇರಿದ್ದಾರೆ.

ಮತ್ತೆ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ ಬಿಲ್ ಗೇಟ್ಸ್ ಮತ್ತೆ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ ಬಿಲ್ ಗೇಟ್ಸ್

ಜೆಫ್ ಅವರ ಗಳಿಕೆ ಹೆಚ್ಚಾಗಲು ಕಳೆದೆರಡು ದಿನಗಳು ನಡೆದ ಅಮೆಜಾನ್ ಪ್ರೈಮ್ ಡೇ ಸೇಲ್ ಕೂಡಾ ಕಾರಣ ಎನ್ನಬಹುದು. ಈ ನಡುವೆ ಮೈಕ್ರೋಸಾಫ್ಟ್ ನ ಕ್ಲೌಡ್ ಕಂಪ್ಯೂಟಿಗ್ ತಂತ್ರಜ್ಞಾನ ಬಳಸಲು ವಾಲ್ಮಾರ್ಟ್ ಮುಂದಾಗಿದ್ದು, ಅಮೆಜಾನ್ ಗೆ ತಕ್ಕ ಸ್ಪರ್ಧೆ ಒಡ್ಡಲು ಮುಂದಾಗಿದೆ.

English summary
Amazon founder Jeff Bezos is now worth $150bn (£113bn), according to the Bloomberg Billionaire Index. Now, he is worth higher than that of Microsoft co-founder Bill Gates, who has previously topped the rich lists - even at his peak in 1999.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X