ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಿದ ಅಮೆಜಾನ್

|
Google Oneindia Kannada News

ಬೆಂಗಳೂರು, ಮೇ 21 : ಮನೆ ಬಾಗಿಲಿಗೆ ಆಹಾರ ತಲುಪಿರುವ ಕ್ಷೇತ್ರಕ್ಕೆ ಅಮೆಜಾನ್ ಇಂಡಿಯಾ ಪಾದಾರ್ಪಣೆ ಮಾಡಲಿದೆ. ಈಗಾಗಲೇ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ವಿಗ್ಗಿ ಮತ್ತು ಝೆಮ್ಯೂಟೋಗೆ ಇದರಿಂದಾಗಿ ಪೈಪೋಟಿ ಎದುರಾಗಲಿದೆ.

ಗುರುವಾರ ಅಮೆಜಾನ್ ಇಂಡಿಯಾ ಈ ಕುರಿತು ಘೋಷಣೆ ಮಾಡಿದೆ. ಫುಡ್ ಡೆಲಿವರಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬೆಂಗಳೂರು ಸೇರಿದಂತೆ ಕೆಲವು ನಗರದಲ್ಲಿ ಆರಂಭಿಸಲಾಗುತ್ತದೆ ಎಂದು ಹೇಳಿದೆ. ಅಮೆಜಾನ್ ಅಪ್ಲಿಕೇಶನ್‌ನಲ್ಲಿಯೇ ಆಹಾರವನ್ನು ಜನರು ಆರ್ಡರ್ ಮಾಡಬಹುದು.

ಲಾಕ್ ಡೌನ್; 1,100 ಉದ್ಯೋಗ ಕಡಿತದ ಘೋಷಣೆ ಮಾಡಿದ ಸ್ವಿಗ್ಗಿ ಲಾಕ್ ಡೌನ್; 1,100 ಉದ್ಯೋಗ ಕಡಿತದ ಘೋಷಣೆ ಮಾಡಿದ ಸ್ವಿಗ್ಗಿ

ಪ್ರಾಯೋಗಿಕವಾಗಿ ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಈ ಸೇವೆ ಆರಂಭವಾಗಿದೆ. ಪಿನ್ ಕೋಡ್ ಬಳಸಿಕೊಂಡು ಜನರು ತಮ್ಮ ಬಡಾವಣೆಗೆ ಸೇವೆ ಲಭ್ಯವಿದೆಯೇ? ಎಂದು ಪರೀಕ್ಷಿಸಬಹುದಾಗಿದೆ.

ಉದ್ಯೋಗ, ವೇತನ ಕಡಿತದ ಘೋಷಣೆ ಮಾಡಿದ ಝೊಮ್ಯಾಟೋ ಉದ್ಯೋಗ, ವೇತನ ಕಡಿತದ ಘೋಷಣೆ ಮಾಡಿದ ಝೊಮ್ಯಾಟೋ

Amazon To Launch Food Delivery Service In Bengaluru

ಅಮೆಜಾನ್ ಪ್ರತಿಷ್ಠಿತ ಹೋಟೆಲ್‌ಗಳ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಅಡಿಗಾಸ್, ಫ್ರೆಶ್‌ಮೆನ್ಯು, ನಮಸ್ತೆ, ಚಾಯ್ ಪಾಯಿಂಟ್ ಸೇರಿದಂತೆ ವಿವಿಧ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದೆ. ಚೈನೀಸ್ ಖಾದ್ಯಗಳನ್ನು ತಯಾರು ಮಾಡುವ ಸಂಸ್ಥೆಗಳ ಜೊತೆಗೂ ಒಪ್ಪಂದ ಆಗಿದೆ.

ಜೊಮಾಟೊ ಮತ್ತು ಸ್ವಿಗ್ಗಿ ಆರ್ಡರ್, ಕ್ಯಾನ್ಸಲ್ ದುಬಾರಿಯಾಗಲಿದೆ ಜೊಮಾಟೊ ಮತ್ತು ಸ್ವಿಗ್ಗಿ ಆರ್ಡರ್, ಕ್ಯಾನ್ಸಲ್ ದುಬಾರಿಯಾಗಲಿದೆ

ಜನರು ಆಹಾರ ಪದಾರ್ಥಗಳ ಡೆಲಿವರಿಗಾಗಿ ಹಲವು ದಿನಗಳಿಂದ ಬೇಡಿಕೆ ಇಡುತ್ತಿದ್ದರು. ಈಗಾಗಲೇ ಇರುವ ಸೇವೆಗಳ ಜೊತೆ ಆಹಾರ ಪದಾರ್ಥಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಲಾಕ್ ಡೌನ್ ಸಮಯದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಅಮೆಜಾನ್ ಹೇಳಿದೆ.

ಲಾಕ್ ಡೌನ್ ಅವಧಿಯಲ್ಲಿ ಅಮೆಜಾನ್ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಪ್ರದೇಶಕ್ಕೆ ಅಗತ್ಯ ವಸ್ತುಗಳ ಸರಬರಾಜನ್ನು ಮಾಡಲಾಗಿದೆ. ಇದನ್ನೇ ಆಧಾರವಾಗಿ ಇಟ್ಟುಕೊಂಡು ಆಹಾರ ಪದಾರ್ಥಗಳ ಡೆಲಿವರಿಗೆ ಮುಂದಾಗಿದೆ.

ಸ್ವಿಗ್ಗಿ ಮತ್ತು ಝೊಮ್ಯಾಟೋ ಲಾಕ್ ಡೌನ್ ಅವಧಿಯಲ್ಲಿ ಆದ ನಷ್ಟದಿಂದ ಹೊರ ಬರಲು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿವೆ. ಇಂತಹ ಸಂದರ್ಭದಲ್ಲಿ ಅಮೆಜಾನ್ ಹೊಸದಾಗಿ ಈ ಕ್ಷೇತ್ರಕ್ಕೆ ಕಾಲಿಡುತ್ತಿದೆ.

English summary
Amazon India announced that it will start food delivery service in select locations of Bengaluru city on pilot project. Amazon has partnered with restaurants and 5 star hotel also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X