ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್ ಬಜಾರ್ ಸೇರಿ ಸೂಪರ್ ಮಾರ್ಕೆಟಿಗೆ ಅಮೆಜಾನ್ ಎಂಟ್ರಿ

|
Google Oneindia Kannada News

ಬೆಂಗಳೂರು, ಆಗಸ್ಟ್ 23: ಬಿಗ್ ಬಜಾರ್ ಸೇರಿದಂತೆ ಹಲವು ಸೂಪರ್ ಮಾರ್ಕೆಟ್ ಗಳ ಒಡೆತನ ಹೊಂದಿರುವ ಫ್ಯೂಚರ್ ರೀಟೈಲ್ ಸಂಸ್ಥೆಯಲ್ಲಿ ಅಮೆಜಾನ್ ಸಂಸ್ಥೆ ತನ್ನ ಪಾಲುದಾರಿಕೆ ಘೋಷಿಸಿದೆ.

ಫ್ಯೂಚರ್ ಕೂಪನ್ಸ್ ಲಿಮೆಟೆಡ್ ನಲ್ಲಿ ಅಮೆಜಾನ್ ಶೇ49ರಷ್ಟು ಪಾಲು ಹೊಂದಲಿದೆ ಎಂದು ಫ್ಯೂಚರ್ ರೀಟೈಲ್ ಘೋಷಿಸಿದೆ. ಆದರೆ, ಎರಡು ಸಂಸ್ಥೆಗಳು ಈ ಒಪ್ಪಂದ ಮೌಲ್ಯವನ್ನು ಬಹಿರಂಗಪಡಿಸಿಲ್ಲ.

ವಿಶ್ವದ ಅತಿ ದುಬಾರಿ ವಿಚ್ಛೇದನ: ಅಮೆಜಾನ್ ದಂಪತಿ ದೂರ ದೂರ ವಿಶ್ವದ ಅತಿ ದುಬಾರಿ ವಿಚ್ಛೇದನ: ಅಮೆಜಾನ್ ದಂಪತಿ ದೂರ ದೂರ

ಫ್ಯೂಚರ್ ರೀಟೈಲ್ ಮಾರುಕಟ್ಟೆ ಮೌಲ್ಯ ಸುಮಾರು 2.91 ಬಿಲಿಯನ್ ಡಾಲರ್ ನಷ್ಟಿದೆ. 900ಕ್ಕೂ ಅಧಿಕ ಮಳಿಗೆ, ಬಿಗ್ ಬಜಾರ್ ಸೇರಿ ಅನೇಕ ಸೂಪರ್ ಮಾರ್ಕೆಟ್ ಗಳನ್ನು ನಿಯಂತ್ರಿಸುತ್ತಿದೆ.

Amazon to Acquire Stake in Future Coupons that Operates Big Bazaar

ಈ ಒಪ್ಪಂದದ ನಂತರ ಫ್ಯೂಚರ್ ಕೂಪನ್ಸ್ ಮೇಲೆ ಶೇ49ರಷ್ಟು ಪಾಲು ಅಮೆಜಾನ್ ಹೊಂದಿದ್ದರೆ, ಫ್ಯೂಚರ್ ರೀಟೈಲ್ ಸ್ಥಾಪಕ ಕಿಶೋರ್ ಬಿಯಾನಿ ಹಾಗೂ ಕುಟುಂಬದ ಬಳಿ ಶೇ 47.02% ಪಾಲಿದೆ.

ಅಶ್ಲೀಲ ದೃಶ್ಯ ಪ್ರಸಾರ: ನೆಟ್ ಫ್ಲಿಕ್ಸ್, ಅಮೆಜಾನ್ ವಿರುದ್ಧ ದೂರು ಅಶ್ಲೀಲ ದೃಶ್ಯ ಪ್ರಸಾರ: ನೆಟ್ ಫ್ಲಿಕ್ಸ್, ಅಮೆಜಾನ್ ವಿರುದ್ಧ ದೂರು

ಕಳೆದ ವರ್ಷ ಸಮರಾ ಕ್ಯಾಪಿಟಲ್ ಜೊತೆ ಸೇರಿ ಸೂಪರ್ ಮಾರ್ಕೆಟ್ ಸ್ಟೋರ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದ ಅಮೆಜಾನ್, ಶಾಪಿಂಗ್ ಮಳಿಗೆ ಶಾಪರ್ಸ್ ಸ್ಟಾಪ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಹೈದರಾಬಾದಿನಲ್ಲಿ ಇತ್ತೀಚೆಗೆ ಅತಿ ದೊಡ್ಡ ಅಮೆಜಾನ್ ಸ್ಟೋರ್ ಕ್ಯಾಂಪಸ್ ಆರಂಭಗೊಂಡಿದೆ. ಒಟ್ಟಾರೆ, ಇ ಕಾಮರ್ಸ್ ಕ್ಷೇತ್ರದಲ್ಲಿ ಎದುರಾಳಿ ವಾಲ್ ಮಾರ್ಟ್ ಒಡೆತನದ ಫ್ಲಿಪ್ ಕಾರ್ತ್ ಜೊತೆ ಅಮೆಜಾನ್ ಸಮರ ಸಾರಿದೆ.

English summary
Amazon.com Inc is set to snag a minority stake in India's Future Retail Ltd, which operates more than 900 stores in India and owns several supermarket brands, including Big Bazaar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X