ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ನೌಕರರಿಗೆ ಟಿಕ್‌ ಟಾಕ್ ಡಿಲೀಟ್ ಮಾಡಿ ಎಂದ ಅಮೆಜಾನ್: ನಂತರ ಇಮೇಲ್ 'ತಪ್ಪು' ಎಂದು ಹೇಳಿಕೆ

|
Google Oneindia Kannada News

ನವದೆಹಲಿ, ಜುಲೈ 11: ಟಿಕ್‌ ಟಾಕ್ ಸೇರಿದಂತೆ ಚೀನಾದ 59 ಆ್ಯಪ್‌ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದ ಬಳಿಕ, ಅಮೆರಿಕಾದ ದೈತ್ಯ ಕಂಪನಿ ಅಮೆಜಾನ್ ತನ್ನ ಉದ್ಯೋಗಿಗಳಿಗೆ ಟಿಕ್‌ಟಾಕ್ ಅನ್ನು ಡಿಲೀಟ್ ಮಾಡುವಂತೆ ಕೇಳಿದೆ. ಅಮೆಜಾನ್‌ನಿಂದ ಬರುವ ಇಮೇಲ್ ಬಳಸುವ ಫೋನ್‌ನಿಂದ ಟಿಕ್‌ಟಾಕ್ ಅನ್ನು ತಕ್ಷಣ ತೆಗೆದುಹಾಕುವಂತೆ ಕಂಪನಿ ಇಮೇಲ್ ಮೂಲಕ ನೌಕರರನ್ನು ಕೇಳಿದೆ.

Recommended Video

Who is Vikas Dubey ? | ಯಾರು ಈ ವಿಕಾಸ್ ದೂಬೆ ? | Oneindia Kannada

ಜೆಫ್ ಬೇಜೋಸ್ ಸಂಪತ್ತು ದಾಖಲೆಯ ಹೆಚ್ಚಳ: ಆಸ್ತಿ 171.6 ಬಿಲಿಯನ್ ಡಾಲರ್ಜೆಫ್ ಬೇಜೋಸ್ ಸಂಪತ್ತು ದಾಖಲೆಯ ಹೆಚ್ಚಳ: ಆಸ್ತಿ 171.6 ಬಿಲಿಯನ್ ಡಾಲರ್

ಚೀನೀ ಅಪ್ಲಿಕೇಶನ್ ಭದ್ರತಾ ಬೆದರಿಕೆ ಎಂದು ತಿಳಿಸಿರುವ ಕಂಪನಿ ಈ ಹಿನ್ನಲೆಯಲ್ಲಿ ಅಮೆಜಾನ್‌ನಿಂದ ಯಾವ ಇಮೇಲ್‌ಗಳು ಬರುತ್ತವೆ ಎಂಬುದರ ಬಗ್ಗೆ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ ಫೋನ್‌ನಲ್ಲಿ ಟಿಕ್‌ ಟಾಕ್ ಅನ್ನು ಬಳಸಬಾರದು ಎಂದು ಹೇಳಿದೆ.

Tiktok Ban:Amazon Tells Employees To Delete Tiktok, Then Takes It Back

ಈ ಕುರಿತು ವಿವಾದ ಉಲ್ಬಣಗೊಂಡ ನಂತರ ಟಿಕ್‌ಟಾಕ್ ಅನ್ನು ತೆಗೆದುಹಾಕುವ ಬಗ್ಗೆ ಕಂಪನಿಯು ಇಮೇಲ್ 'ತಪ್ಪು' ಎಂದು ಹೇಳಿದೆ. ಅಮೆಜಾನ್ ಈ ಹಿಂದೆ ತನ್ನ ಎಲ್ಲ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿತ್ತು ಮತ್ತು ಟಿಕ್‌ಟಾಕ್ ಅನ್ನು ಶುಕ್ರವಾರದಿಂದ ಅಮೆಜಾನ್ ಫೋನ್‌ನಿಂದ ತೆಗೆದುಹಾಕಬೇಕು, ಏಕೆಂದರೆ ಇದು ಸುರಕ್ಷತೆಯ ಅಪಾಯಗಳನ್ನುಂಟುಮಾಡುತ್ತದೆ ಎಂದು ತಿಳಿಸಿತ್ತು.

ಆದರೆ ತನ್ನ ಇಮೇಲ್ 'In Error' ಎಂದು ಹೇಳುವ ಮೂಲಕ ತನ್ನ ನಿರ್ಧಾರದಿಂದ ಹಿಂದೆ ಸರಿದಂತಿದೆ.

English summary
Amazon made waves on Friday by ordering employees to remove TikTok from their devices, only to announce hours later that the directive had been sent by mistake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X