ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್ ಮಹಾತ್ಮೆ: ತೆಂಗಿನಕಾಯಿಗಿಂತಲೂ ಚಿಪ್ಪು ದುಬಾರಿ!

|
Google Oneindia Kannada News

ನವದೆಹಲಿ, ಜನವರಿ 16: ಈ ಇಂಟರ್ನೆಟ್ ಯುಗದಲ್ಲಿ ಅಯೋಗ್ಯವು ಯೋಗ್ಯವಾಗಿ ಬಿಡುತ್ತದೆ. ಯೋಗ್ಯವು ಮೌಲ್ಯ ಕಳೆದುಕೊಂಡ ಉದಾಹರಣೆಗಳಿವೆ. ಅಂತಹುದೇ ಉದಾಹರಣೆ ಇಲ್ಲಿದೆ ನೋಡಿ.

ಆನ್‌ಲೈನ್ ಶಾಪಿಂಗ್ ದಿಗ್ಗಜ ಅಮೆಜಾನ್‌ನಲ್ಲಿ ತೆಂಗಿನಕಾಯಿಗಿಂತಲೂ ತೆಂಗಿನ ಚಿಪ್ಪಿಗೆ ಮೌಲ್ಯ ಹೆಚ್ಚು!. ಹೌದು ತೆಂಗಿನ ಚಿಪ್ಪು ಅಮೆಜಾನ್‌ನಲ್ಲಿ ದುಬಾರಿ ವಸ್ತು.

ಪ್ರಕಾಶ್‌ ರೈ ಹೊಗಳಿ ಟ್ವೀಟ್ ಮಾಡಿದ ದೆಹಲಿ ಸಿಎಂ ಕೇಜ್ರಿವಾಲ್ ಪ್ರಕಾಶ್‌ ರೈ ಹೊಗಳಿ ಟ್ವೀಟ್ ಮಾಡಿದ ದೆಹಲಿ ಸಿಎಂ ಕೇಜ್ರಿವಾಲ್

ಏನೂ ಮೌಲ್ಯ ಇಲ್ಲದೆ ಇರುವುದಕ್ಕೆ ಅಥವಾ ಉಪಯೋಗ ಇಲ್ಲದೇ ಇರುವುದಕ್ಕೆ ಕನ್ನಡದಲ್ಲಿ 'ಚಿಪ್ಪು' ಎನ್ನುವುದು ರೂಢಿ ಆದರೆ ಅಮೆಜಾನ್‌ನಲ್ಲಿ ಈ ಚಿಪ್ಪೆ ಸಾವಿರಗಳಲ್ಲಿ ಮಾರಾಟವಾಗುತ್ತಿದೆ. ತೆಂಗಿನಚಿಪ್ಪಿಗೆ ಅಮೆಜಾನ್‌ನಲ್ಲಿ 1200 ರಿಂದ 2400 ರೂಪಾಯಿಗಳಿವೆ!

Amazon selling coconut shels over 1200

ಅಮೆಜಾನ್‌ ನಲ್ಲಿ ಚಿಪ್ಪಿಗೆ 1000 ಕ್ಕೂ ಹೆಚ್ಚು ಬೆಲೆ ಇದೆ. ಇದು ನೆಟ್ಟಿಗರ ಹುಬ್ಬೇರಿಸಿದೆ. ಅಮೆಜಾನ್‌ ಜಾಲತಾಣವು ತೆಂಗಿನ ಚಿಪ್ಪನ್ನು ಇಷ್ಟೋಂದು ಬೆಲೆಗೆ ಮಾರಾಟ ಮಾಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಚರ್ಚೆ ಹುಟ್ಟುಹಾಕಿದೆ.

ವೈರಲ್‌: ಬಾಲಿವುಡ್‌ ಸ್ಟಾರ್‌ಗಳ ಜೊತೆ ಸೆಲ್ಫಿಗೆ ಫೋಸು ನೀಡಿದ ಮೋದಿ ವೈರಲ್‌: ಬಾಲಿವುಡ್‌ ಸ್ಟಾರ್‌ಗಳ ಜೊತೆ ಸೆಲ್ಫಿಗೆ ಫೋಸು ನೀಡಿದ ಮೋದಿ

ಕರ್ನಾಟಕದಲ್ಲಿ 30-35 ರೂಪಾಯಿ ತೆತ್ತು ತೆಂಗಿನ ಕಾಯಿ ಕುಡಿಯುತ್ತೇವೆ. ಕೇರಳದಲ್ಲಂತೂ ಹಣವೇ ನೀಡದೇ ತೆಂಗಿನಕಾಯಿ ಪಡೆಯುತ್ತಾರೆ ಆದರೆ ಅಮೆಜಾನ್ ತೆಂಗಿನಚಿಪ್ಪಿಗೆ 1000 ಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರುತ್ತಿದೆ ಎಂದು ಹಲವರು ಹುಬ್ಬೇರಿಸಿದ್ದಾರೆ.

ವರ್ಷದ ಕೊನೆಯಲ್ಲಿ ಟ್ವಿಟ್ಟಿಗರು ಸಿದ್ದರಾಮಯ್ಯನವರಿಗೆ ಮಾಡಿದ ನೀತಿಪಾಠವರ್ಷದ ಕೊನೆಯಲ್ಲಿ ಟ್ವಿಟ್ಟಿಗರು ಸಿದ್ದರಾಮಯ್ಯನವರಿಗೆ ಮಾಡಿದ ನೀತಿಪಾಠ

ತೆಂಗಿನ ಚಿಪ್ಪಿಗೆ ಇಷ್ಟೋಂದು ಬೆಲೆ ಇರಬಹುದಾದರೆ ಎಲ್ಲಾ ಕೇರಳಿಯರು ಕೆಲವೇ ದಿನಗಳಲ್ಲಿ ಕೋಟ್ಯಧಿಪತಿಗಳಾಗುತ್ತಾರೆ ಎಂದು ಟ್ವಿಟ್ಟಗರೊಬ್ಬರು ವ್ಯಂಗ್ಯ ಮಾಡಿದ್ದಾರೆ.

English summary
Online shoping site Amazon selling coconut shels over 1200 rs. Indians are stunned. Indians used to pay some 30-40 rs for coconut but amazon selling it for more than 1000rs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X