ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಿಕ್ಕಟ್ಟಿನ ನಡುವೆ ಅತಿ ದೊಡ್ಡ ಲಾಭಗಳಿಸಿದ ಅಮೆಜಾನ್

|
Google Oneindia Kannada News

ವಾಷಿಂಗ್ಟನ್, ಜುಲೈ 31: ಕೋವಿಡ್ 19 ಸಾಂಕ್ರಾಮಿಕ ರೋಗದ ಈ ನಿರ್ಣಾಯಕ ಸಮಯದಲ್ಲಿ ಇ-ಕಾಮರ್ಸ್ ದೈತ್ಯ ಅಮೆಜಾನ್ ವ್ಯವಹಾರದಲ್ಲಿ ಬಹುದೊಡ್ಡ ಲಾವನ್ನು ದಾಖಲಿಸಿದೆ.

ಆನ್‌ಲೈನ್ ಮಾರಾಟ ಮತ್ತು ತೃತೀಯ ವ್ಯಾಪಾರಿಗಳನ್ನು ಬೆಂಬಲಿಸುವ ಲಾಭದಾಯಕ ವ್ಯವಹಾರಗಳು ಒಟ್ಟಿಗೆ ಸೇರಿದಾಗ ಅಮೆಜಾನ್ ತನ್ನ 26 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ಲಾಭವನ್ನು ಕಂಡಿದೆ.

ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ಜನಿಸಿದಾಗ, ಆತನ ತಾಯಿಯ ವಯಸ್ಸು 17ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ಜನಿಸಿದಾಗ, ಆತನ ತಾಯಿಯ ವಯಸ್ಸು 17

ವಿಶ್ವದ ಅತಿದೊಡ್ಡ ಆನ್‌ಲೈನ್ ಚಿಲ್ಲರೆ ವ್ಯಾಪಾರಿ ಅಮೆಜಾನ್‌ನ ಷೇರುಗಳು ಗಂಟೆಗಳ ನಂತರದ ವಹಿವಾಟಿನಲ್ಲಿ ಐದು ಪ್ರತಿಶತದಷ್ಟು ಏರಿಕೆಯಾಗಿದೆ.

Amazon Posted The Biggest Profit Ever In Its 26 Year History

ಸರ್ಕಾರ ವಿಧಿಸಿದ ಲಾಕ್‌ಡೌನ್ ಸಮಯದಲ್ಲಿ ಸ್ಪರ್ಧೆಯೊಡ್ಡಲು ಅಮೆಜಾನ್ 1,75,000 ಜನರನ್ನು ನೇಮಿಸಿಕೊಂಡಿದೆ ಮತ್ತು ಕಂಪನಿಯ ಸೇವೆಗಳ ಬೇಡಿಕೆ ಗಗನಕ್ಕೇರಿತು. ಇದರ ಪರಿಣಾಮವಾಗಿ, ಅಮೆಜಾನ್‌ನ ಆದಾಯವು ಶೇಕಡಾ 40 ರಷ್ಟು ಏರಿಕೆಯಾಗಿ, 88.9 ಶತಕೋಟಿ ಡಾಲರ್‌ಗೆ ತಲುಪಿದೆ.

ಅಮೆಜಾನ್ ಕೇವಲ ಎರಡನೆಯ ತ್ರೈಮಾಸಿಕದಲ್ಲಿ ಹಣವನ್ನು ಕಳೆದುಕೊಳ್ಳಬಹುದು ಎಂದು ಮುನ್ಸೂಚನೆ ನೀಡಿತ್ತು. ಏಕೆಂದರೆ ಕೋವಿಡ್ -19 ಗೆ ಸಂಬಂಧಿಸಿದ ಸಿಬ್ಬಂದಿ ಮತ್ತು ಇತರ ವೆಚ್ಚಗಳಿಗಾಗಿ ರಕ್ಷಣಾತ್ಮಕ ಸಾಧನಗಳಿಗಾಗಿ ಸುಮಾರು 4 ಬಿಲಿಯನ್ ಡಾಲರ್ ಖರ್ಚು ಮಾಡುವ ನಿರೀಕ್ಷೆಯಿದೆ. ಆದರೆ ಹಿಂದಿನ ವರ್ಷಕ್ಕಿಂತ ಅದರ ನಿವ್ವಳ ಆದಾಯವನ್ನು ದ್ವಿಗುಣಗೊಳಿಸಿದೆ.

ಕಂಪನಿಯ ಸಿಇಒ ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಕಂಪನಿಯ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಮತ್ತೊಂದು ಅಸಾಮಾನ್ಯ ತ್ರೈಮಾಸಿಕವಾಗಿದೆ ಎಂದು ಹೇಳಿದರು.

1994ರಲ್ಲಿ ಸ್ಥಾಪನೆಯಾದ ಅಮೆಜಾನ್ ಕಂಪನಿಯ ಷೇರುಗಳು ಈ ವರ್ಷ ಶೇ. 60ಕ್ಕಿಂತ ಹೆಚ್ಚಾಗಿದೆ. ಈ ಮೂಲಕ ಅತಿದೊಡ್ಡ ಷೇರುದಾರ ಬೇಜೋಸ್ ಸಂಪತ್ತನ್ನು ಮತ್ತಷ್ಟು ಹೆಚ್ಚಿಸಿದೆ.

English summary
E-Commerce Gaint Amazon on Thursday posted the biggest profit in its 26-year history as online sales and its lucrative business supporting third-party merchants surged during the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X