ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗೈ ತೋರಿಸಿ ಹಣ ಪಾವತಿಸಿ: ಅಮೆಜಾನ್‌ನಿಂದ ಹೊಸ ತಂತ್ರಜ್ಞಾನದ ಬಳಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 01: ಕೇಂದ್ರ ಸರ್ಕಾರ ಡಿಜಿಟಲ್ ಪಾವತಿಗೆ ಹೆಚ್ಚು ಉತ್ತೇಜನ ನೀಡಿರುವುದು ನಿಮಗೆಲ್ಲಾ ತಿಳಿದಿದೆ. ಅದರಲ್ಲೂ ಕೋವಿಡ್-19 ಸಾಂಕ್ರಾಮಿಕದ ಬಳಿಕ ಜನತೆ ಹೆಚ್ಚಾಗಿ ಸಂಪರ್ಕವಿಲ್ಲದ ಡಿಜಿಟಲ್ ಪಾವತಿ ಸೂಕ್ತ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಅನೇಕರು ಅನೇಕ ಯುಪಿಐ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುವ ಮೂಲಕ ಬಿಲ್, ಹಣ ಪಾವತಿ ಮಾಡುತ್ತಿದ್ದಾರೆ.

ಆದರೆ ಇದೀಗ ಅಮೆಜಾನ್ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅಂಗಡಿಯಲ್ಲಿ ಹಣ ಪಾವತಿಸಲು, ಯಾವುದೇ ಶುಲ್ಕಸಹಿತ ಸೇವೆಗಳನ್ನು ಪಡೆಯಲು, ದೈನಂದಿನ ಚಟುವಟಿಕೆಗಳನ್ನು ಮಾಡಲು ಜನರು ತಮ್ಮ ಅಂಗೈಯನ್ನು ಬಳಸದೇ ಸಂಪರ್ಕವಿಲ್ಲದ ಮಾರ್ಗವನ್ನು ಅಮೆಜಾನ್ ಮಂಗಳವಾರ ಪರಿಚಯಿಸಿದೆ.

ಅಮೆಜಾನ್ ಕ್ರಿಕೆಟ್ ಸೀಸನ್ ಆಫರ್: ಶೇ. 45ರವರೆಗೆ ಟಿವಿಗಳ ಮೇಲೆ ರಿಯಾಯಿತಿಅಮೆಜಾನ್ ಕ್ರಿಕೆಟ್ ಸೀಸನ್ ಆಫರ್: ಶೇ. 45ರವರೆಗೆ ಟಿವಿಗಳ ಮೇಲೆ ರಿಯಾಯಿತಿ

'ಅಮೆಜಾನ್ ಒನ್' ಎಂದು ಕರೆಯಲ್ಪಡುವ ಈ ಸೇವೆಯು ವ್ಯಕ್ತಿಯ ಅನನ್ಯ ಅಂಗೈ ಸಹಿಯನ್ನು ರಚಿಸಲು ಕಸ್ಟಮ್-ನಿರ್ಮಿತ ಕ್ರಮಾವಳಿಗಳು ಮತ್ತು ಯಂತ್ರಾಂಶವನ್ನು ಬಳಸುತ್ತದೆ. ಅಂದರೆ ಈ ತಂತ್ರಜ್ಞಾನವು ನಿಮ್ಮ ಅಂಗೈ ಅನ್ನು ಒಮ್ಮೆ ಸ್ಕ್ಯಾನ್ ಮಾಡಿ ಸೇವ್ ಮಾಡಿಕೊಳ್ಳುತ್ತದೆ. ಆ ಬಳಿಕ ನೀವು ಅಂಗೈ ತೋರಿಸಿ ಪಾವತಿ ಅನುಮತಿಸುತ್ತದೆ.

Amazon Palm Payment System Amazon One Announced

"ನಾವು ಆಯ್ದ ಅಮೆಜಾನ್ ಗೋ ಅಂಗಡಿಗಳಲ್ಲಿ ಪ್ರಾರಂಭಿಸುತ್ತೇವೆ, ಅಲ್ಲಿ ಗ್ರಾಹಕರು ಅಂಗಡಿಯಲ್ಲಿ ಶಾಪಿಂಗ್ ಮಾಡಲು ಬಳಸಲು ಅನುಕೂಲಕರ ಆಯ್ಕೆಯಾಗಿ ಅಮೆಜಾನ್ ಒನ್ ಅನ್ನು ಅಂಗಡಿಯ ಪ್ರವೇಶ ದ್ವಾರಕ್ಕೆ ಸೇರಿಸಲಾಗುವುದು" ಎಂದು ಅಮೆಜಾನ್‌ನ ಚಿಲ್ಲರೆ ಮತ್ತು ತಂತ್ರಜ್ಞಾನದ ಉಪಾಧ್ಯಕ್ಷ ದಿಲೀಪ್ ಕುಮಾರ್, ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಹೆಚ್ಚಿನ ಸುರಕ್ಷತೆ ಮತ್ತು ಅಂತರ ಕಾಯ್ದುಕೊಳ್ಳಲು, ಅಮೆಜಾನ್ ಒನ್ ಸಾಂಪ್ರದಾಯಿಕ ಪಾಯಿಂಟ್ ಆಫ್ ಸೇಲ್ ಸಿಸ್ಟಮ್‌ನ ಪಕ್ಕದಲ್ಲಿರುವ ಚೆಕ್‌ಔಟ್ ಕೌಂಟರ್‌ನಲ್ಲಿ ಈ ಹೊಸ ಸಾಧನದೊಂದಿಗೆ ಪರ್ಯಾಯ ಪಾವತಿ ವಿಧಾನ ಪ್ರಾರಂಭಿಸಲಿದೆ ಎಂದು ಅವರು ಹೇಳಿದರು.

ಇದು ಮಂಗಳವಾರದಿಂದ, ಅಮೆರಿಕದ ಸಿಯಾಟಲ್‌ನಲ್ಲಿರುವ ಎರಡು ಅಮೆಜಾನ್ ಗೋ ಅಂಗಡಿಗಳಲ್ಲಿ ಆರಂಭಿಕವಾಗಿ ಪ್ರವೇಶ ಆಯ್ಕೆಯಾಗಿ ಅಮೆಜಾನ್ ಒನ್ ಅನ್ನು ಪ್ರಾರಂಭಿಸಿದೆ. ಹಂತ ಹಂತವಾಗಿ ಬೇರೆ ದೇಶ ಮತ್ತು ನಗರಗಳಿಗೆ ಇದನ್ನು ವಿಸ್ತರಿಸಲಾಗುವುದು. ಮುಂದಿನ ತಿಂಗಳುಗಳಲ್ಲಿ ಹೆಚ್ಚುವರಿ ಅಮೆಜಾನ್ ಮಳಿಗೆಗಳಲ್ಲಿ ಅಮೆಜಾನ್ ಒನ್ ಅನ್ನು ಆಯ್ಕೆಯಾಗಿ ಸೇರಿಸುವ ಸಾಧ್ಯತೆಯಿದೆ.

English summary
Amazon on Tuesday introduced a contactless way for people to use their palm to make everyday activities like paying at a store, presenting a loyalty card, or entering a location like a stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X