• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

50 ಸಾವಿರ ಮಂದಿಗೆ ಉದ್ಯೋಗವಕಾಶವಿದೆ: ಅಮೆಜಾನ್

|

ಬೆಂಗಳೂರು, ಮೇ 24: ಕೊರೊನಾವೈರಸ್ ಲಾಕ್ಡೌನ್ ನಿಂದಾಗಿ ನಿರುದ್ಯೋಗಿಗಳಾದವರಿಗೆ ಪ್ರಮುಖ ಇ ಕಾಮರ್ಸ್ ಸಂಸ್ಥೆ ಅವಕಾಶಭರಿತ ಸುದ್ದಿ ನೀಡಿದೆ. ಸುಮಾರು 50 ಸಾವಿರಕ್ಕೂ ಅಧಿಕ ಮಂದಿಯನ್ನು ತನ್ನ ಸಂಸ್ಥೆಯಲ್ಲಿ ನೇಮಕ ಮಾಡಿಕೊಳ್ಳುವುದಾಗಿ ಅಮೆಜಾನ್ ಇಂಡಿಯಾ ಘೋಷಿಸಿದೆ.

   ಐಟಿ ವಲಯದ ಉದ್ಯೋಗಿಗಳಿಗೆ ಶುರುವಾಯ್ತು ಆತಂಕ | Oneindia Kannada

   ಅಮೆಜಾನ್ ಇಂಡಿಯಾದಲ್ಲಿ ವೈವಿಧ್ಯಮಯ ಹುದ್ದೆಗಳಿದ್ದು, ಪಾರ್ಟ್ ಟೈಮ್, ಗುತ್ತಿಗೆ ಆಧಾರಿತ ಉದ್ಯೋಗ ಅವಕಾಶಗಳು ಲಭ್ಯವಾಗಲಿದೆ. ಅಮೆಜಾನ್ ಫ್ಲೆಕ್ಸ್ ಮೂಲಕ ಗುತ್ತಿಗೆದಾರರು ಉದ್ಯೋಗ ಹೊಂದಬಹುದು.

   ಅಮೆಜಾನ್, ವಾಲ್‌ಮಾರ್ಟ್‌ ನಿಷೇಧಿಸಿ: ಸುಬ್ರಹ್ಮಣ್ಯ ಸ್ವಾಮಿ ಒತ್ತಾಯ

   "ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಗ್ರಾಹಕರ ಜೊತೆಗೆ ನಿರಂತರ ಸಂಪರ್ಕ ಹೊಂದುವುದು, ಉತ್ತಮ ಸೇವೆ ನೀಡುವುದು ನಮ್ಮ ಗುರಿಯಾಗಿದೆ. ಇದನ್ನು ಪೂರ್ಣಗೊಳಿಸಲು ನಮ್ಮ ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ, ಸುಮಾರು 50 ಸಾವಿರ ಉದ್ಯೋಗ ಅವಕಾಶಗಳನ್ನು ನಮ್ಮ ಡೆಲಿವರಿ ಜಾಲದಲ್ಲಿ ಒದಗಿಸಲು ಸಂಸ್ಥೆ ಮುಂದಾಗಿದೆ'" ಎಂದು ಅಮೆಜಾನ್ ಇಂಡಿಯಾದ ಗ್ರಾಹಕ ಕಾರ್ಯಾಚರಣೆ ಉಪಾಧ್ಯಕ್ಷ ಅಖಿಲ್ ಸಕ್ಸೇನಾ ಹೇಳಿದ್ದಾರೆ.

   ಕಳೆದ ವಾರ ಇ ಕಾಮರ್ಸ್ ಸಂಸ್ಥೆಗಳಾದ ಝೋಮ್ಯಾಟೋ, ಸ್ವಿಗ್ಗಿ, ಮೊಬೈಲ್ ಆಧಾರಿತ ಕ್ಯಾಬ್ ಸೇವಾ ಸಂಸ್ಥೆ ಓಲಾ ಅಲ್ಲದೆ ಶೇರ್ ಚಾಟ್ ಕೂಡಾ ಕೊವಿಡ್ 19 ಪರಿಣಾಮ ಉದ್ಯಮದಲ್ಲಿ ಆಗಿರುವ ನಷ್ಟದಿಂದ ಉದ್ಯೋಗ ಕಡಿತ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

   ಕರ್ನಾಟಕ ಪ್ರವೇಶಿಸಿದ ಇ ಕಿರಾಣಿ ಸಂಸ್ಥೆ ಡೀಲ್ ಶೇರ್

   ಇ ಕಾಮರ್ಸ್ ವೆಬ್ ತಾಣಗಳ ಸೇವೆ ರೆಡ್ ಅಲರ್ಟ್ ಇರುವ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಆನ್ ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಮುಂತಾದ ತಾಣಗಳ ಸೇವೆ ಲಭ್ಯವಿರುವುದಿಲ್ಲ ಹಾಗೂ ಎಲೆಕ್ಟ್ರಾನಿಕ್ ಸಾಮಾಗ್ರಿಗಳಾದ ಮೊಬೈಲ್ ಫೋನ್, ಟಿವಿ, ರೆಫ್ರಿಜರೇಟರ್, ಲ್ಯಾಪ್ ಟಾಪ್ ಮುಂತಾದವು ಮೇ 17ರ ನಂತರ ಆನ್ ಲೈನ್ ನಲ್ಲಿ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ.

   English summary
   Amid news of layoffs in the last week by unicorns and startups, Amazon India said on Friday that it is has opened close to 50,000 seasonal roles to meet the surge in demand.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more