ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟಕಟೆಯಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನಾಪ್‌ಡೀಲ್

|
Google Oneindia Kannada News

ನವದೆಹಲಿ, ನವೆಂಬರ್. 02: ಭಾರತದಲ್ಲಿ ಕೋಟಿಗಟ್ಟಲೇ ವ್ಯವಹಾರ ನಡೆಸುತ್ತಿರುವ ಪ್ರಮುಖ ಅಂತರ್ಜಾಲ ತಾಣಗಳ ಮೇಲೆ ಪ್ರಕರಣ ದಾಖಲಾಗಿದ್ದು ತನಿಖೆಗೂ ಆದೇಶ ನೀಡಲಾಗಿದೆ.

ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಫ್ಲಿಪ್‌ಕಾರ್ಟ್‌, ಅಮೆಜಾನ್‌, ಸ್ನಾಪ್‌ಡೀಲ್‌ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ವಾಣಿಜ್ಯ ಸಚಿವಾಲಯ ಜಾರಿ ನಿರ್ದೇಶನಾಲಯಕ್ಕೆ ಕೇಳಿಕೊಂಡಿದೆ.[ದೀಪಾವಳಿ ಹಬ್ಬಕ್ಕೆ ಅತ್ಯುತ್ತಮ 15 ಆನ್ ಲೈನ್ ಆಫರ್ ಗಳು]

Amazon, Flipkart, Snapdeal Breaks FDI rules?

ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತು ಸ್ನ್ಯಾಪ್‌ಡೀಲ್‌ಗ‌ಳು ಬಿ2ಬಿ (ಕಂಪನಿ-ಕಂಪನಿಗಳ ನಡುವೆ ಮಾತ್ರ ವಹಿವಾಟು) ನಡೆಸಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುವು ಮಾಡಿವೆ ಎಂದು ವ್ಯಾಪಾರಿಗಳ ಒಕ್ಕೂಟ ದೂರಿತ್ತು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ನೀಡಲಾಗಿದೆ.

ನಾವು ಗ್ರಾಹಕರಿಗೆ ಮೌಲ್ಯಯುತ ಸೇವೆಯನ್ನೇ ನೀಡುತ್ತಿದ್ದೇವೆ. ಎಲ್ಲಿಯೂ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಸ್ನಾಪ್ ಡೀಲ್ ನ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಯಾವುದೇ ಪ್ರತಿಕ್ರಿಯೆಯನ್ನು ಇಲ್ಲಿಯವರೆಗೆ ನೀಡಿಲ್ಲ.[ಫ್ಲಿಪ್ ಕಾರ್ಟ್ ಗೆ ಉಂಡೆನಾಮ ತಿಕ್ಕಿದ ಐನಾತಿ ಗ್ರಾಹಕ]

ವಿದೇಶಿ ನೇರ ಬಂಡವಾಳ ಹೂಡಿಕೆ ಸಂಬಂಧದ ಕೆಲ ಕಾನೂನುಗಳನ್ನು ಕಂಪನಿಗಳು ಮುರಿದಿವೆ. ತಮ್ಮ ನಡುವೆಯೇ ವಹಿವಾಟು ನಡೆಸಿಕೊಂಡಿವೆ ಎಂಬ ಆರೋಪದ ಅಡಿ ತನಿಖೆಗೆ ಆದೇಶ ನೀಡಲಾಗಿದೆ.

English summary
New Delhi: Commerce ministry has requested the Enforcement Directorate (ED) and RBI to examine whether e-commerce majors Flipkart, Amazon and Snapdeal violated FDI rules by engaging in business-to-consumers (B2C) activity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X