• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಕ್ತಿಚಿತ್ರ: ಟಾಟಾ ಸಮೂಹದ ಚೇರ್ಮನ್ ನಟರಾಜನ್ ಚಂದ್ರಶೇಖರನ್

By Mahesh
|

ಬೆಂಗಳೂರು, ಜನವರಿ 12: ಸಾಫ್ಟ್ ವೇರ್ ಪೋಗ್ರಾಮರ್ ಆಗಿ ಟಿಸಿಎಸ್ ಸೇರಿದ ನಟರಾಜನ್ ಚಂದ್ರಶೇಖರನ್ ಅವರು ಈಗ ಟಾಟಾ ಸಮೂಹ ಸಂಸ್ಥೆಯ ಒಡೆತನ ಹೊಂದಿರುವ ಟಾಟಾ ಸನ್ಸ್ ನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ರತನ್ ಟಾಟಾ ಉತ್ತರಾಧಿಕಾರಿಯಾಗಿದ್ದಾರೆ. ಫೆಬ್ರವರಿ 21ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಚಂದ್ರ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ...

ಚಂದ್ರ ಎಂದು ಕರೆಯಲ್ಪಡುವ ಚಂದ್ರಶೇಖರನ್ ಮೂಲತಃ ತಮಿಳುನಾಡಿನ ಮೋಹನೂರಿಗೆ ಸೇರಿದವರು. ಕೊಯಮತ್ತೂರಿನಲ್ಲಿ ಬಿಎಸ್ ಸ್ಸಿ ಪದವಿ ಪಡೆದ ನಂತರ ತಿರುಚ್ಚಿಯಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಇವರಿಗೆ ಲತಿಕಾ ಎಂಬ ಪತ್ನಿ ಹಾಗೂ ಪ್ರಣವ್ ಎಂಬ ಮಗ ಇದ್ದಾನೆ. [ರತನ್ ಟಾಟಾ ಉತ್ತರಾಧಿಕಾರಿಯಾಗಿ ಎನ್ ಚಂದ್ರಶೇಖರನ್]

1986ರಲ್ಲಿ ಮಾಸ್ಟರ್ಸ್ ಪಡೆದ ಮೇಲೆ 1987ಕ್ಕೆ ಟಿಸಿಎಸ್ ಅಂಗಳಕ್ಕೆ ಕಾಲಿರಿಸಿದ ಚಂದ್ರ, ಪೂರ್ಣ ಚಂದ್ರನಂತೆ ಟಾಟಾ ಸಂಸ್ಥೆ ಬೆಳಗಿದವರು. 2009ರಲ್ಲಿ ಸಿಒಒ ಆದ ಚಂದ್ರ ಸಂಸ್ಥೆ ಚಿತ್ರಣವನ್ನೇ ಬದಲಿಸಿದರು. ಹೊಸ ಹೊಸ ಉತ್ಪನ್ನ, ಸೇವೆಗಳತ್ತ ಗಮನಹರಿಸಿದವರು.[ನಾ ಕಂಡಂತೆ ಜೆಆರ್ ಡಿ ಟಾಟಾ : ಸುಧಾ ಮೂರ್ತಿ]

Global Network Delivery Model (GNDM) ಎಂಬ ಕಲ್ಪನೆ ಹುಟ್ಟು ಹಾಕಿದ ಚಂದ್ರ ಐದು ಖಂಡಗಳಿಗೆ ಇದನ್ನು ಹಬ್ಬಿಸಿದರು. ಯುರೋಪ್, ಚೀನಾ ಹಾಗೂ ಲ್ಯಾಟೀನ್ ಅಮೆರಿಕದಲ್ಲಿ ಟಿಸಿಎಸ್ ಹೆಸರು ಜನಜನಿತವಾಗುವಂತೆ ಮಾಡಿದರು. ಬಿಪಿಒ, ಮೂಲ ಸೌಕರ್ಯ ಸೇವೆಯಲ್ಲದೆ ಮಾಧ್ಯಮ, ಮಾಹಿತಿ ಸಂಪರ್ಕ ಕ್ಷೇತ್ರಕ್ಕೂ ಟಿಸಿಎಸ್ ಕಾಲಿರಿಸಿತು.

ಪ್ರಶಸ್ತಿ, ಗೌರವಾದರಗಳು:

* 2006ರಲ್ಲಿ ವಿಶ್ವದ ಟಾಪ್ 25 ಪ್ರಭಾವಿ ಕನ್ಸಲ್ಟೆಂಟ್ ಗಳಲ್ಲಿ ಒಬ್ಬರೆನಿಸಿದರು.

* 2011ರಲ್ಲಿ AIMA ಬಿಸಿನೆಸ್ ಲೀಡರ್ ಪ್ರಶಸ್ತಿ

* ನ್ಯಾಸ್ ಕಾಂನ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ.

* 2009-2010 ಆರ್ಥಿಕ ವರ್ಷದಲ್ಲಿ ಸುಮಾರು 3 ಕೋಟಿ ರು ಒಟ್ಟಾರೆ ಸಂಬಳ ಪಡೆದು ದಾಖಲೆ ಬರೆದಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All you want to know about Natarajan Chandrasekaran(53) new chairman of Tata Sons. Chandrasekaran joined the group in 1987 as a software programmer, become TCS CEO in 2009.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more