ಏನಿದು ಜಿಯೋ ಧನ್ ಧನಾ ಧನ್? ಇಲ್ಲಿದೆ ಫುಲ್ ಡಿಟೇಲ್

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 13:ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ನೀಡಿರುವ ಹೊಸ ಪ್ರೊಮೋಷನ್ ಆಫರ್ ನಲ್ಲಿ ಏನಿಲ್ಲ, ಇದು ಹಳೆ ಬಾಟಲಿಯಲ್ಲಿ ಹೊಸ ವೈನ್ ಎಂದು ಏರ್ ಟೆಲ್ ಟೀಕಿಸಿದೆ. ಜಿಯೋ ನೀಡಿರುವ ಈ ಆಫರ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್ ) ಸಲಹೆಯ ಮೇರೆಗೆ ತನ್ನ ಜಿಯೋ ಸಮ್ಮರ್ ಸರ್ಪ್ರೈಸ್ ಅನ್ನು ಸಂಪೂರ್ಣವಾಗಿ ಹಿಂಪಡೆದು ಈ ಹೊಸ ಆಫರ್ ಧನ್ ಧನಾ ಧನ್ ತನ್ನ ಗ್ರಾಹಕರಿಗೆ ನೀಡಿದೆ. [ಜಿಯೋ ಧನ್ ಧನಾ ಧನ್ ವಿರುದ್ಧ ಏರ್ ಟೆಲ್ ತ್ರಿಬ್ಬಲ್ ಆಫರ್]

* ಜಿಯೋ ಪ್ರೈಮ್ ಸದಸ್ಯರಿಗಾಗಿ ವಿಶಿಷ್ಟವಾಗಿ, ವಿಶೇಷ ಅನುಕೂಲಗಳೊಂದಿಗೆ ಎಲ್ಲಾ ಅನಿಯಮಿತ ಪ್ಲಾನ್ ಗಳನ್ನು ಜಿಯೋ ಘೋಷಿಸಿದೆ.
* ಜಿಯೋ ಚಂದಾದಾರರು ಯಾವುದೇ ನಿರ್ಬಂಧವಿಲ್ಲದೆ ಡಿಜಿಟಲ್ ಲೈಫ್ ಅನ್ನು ಹೊಂದಲಿ ಎಂದು ಜಿಯೋ ಧನ್ ಧನಾ ಧನ್ ಆಫರ್ ನೀಡುತ್ತಿದೆ.

All you need to Know about Reliance Jio Dhan Dhana Dhan Offer

* ಆರಂಭಿಕ ಪ್ಲಾನ್ 309 ರು ನಿಂದ ಎಲ್ಲಾ ಅನಿಯಮಿತ ಪ್ಲಾನ್ ಅನಿಯಮಿತ ಎಸ್‌ಎಂಎಸ್, ಕರೆ ಮತ್ತು ಡಾಟಾ (ಪ್ರತಿದಿನ 4ಜಿ ಸ್ಪೀಡ್‌ನಲ್ಲಿ 1 ಜಿಬಿ ಡಾಟಾ)ವನ್ನು ಮೊದಲ ರಿಚಾರ್ಜ್‌ನ 3 ತಿಂಗಳ ಕಾಲ ನೀಡಲಿದೆ.

* 509 ರು.ನ ಎಲ್ಲಾ ಅನಿಯಮಿತ ಪ್ಲಾನ್ ಘೋಷಿಸಿದ್ದು, ಇದು ಪ್ರತಿದಿನ ಅಧಿಕ ಡಾಟಾ ಬಳಕೆದಾರರಿಗೆ ಅನಿಯಮಿತ ಎಸ್‌ಎಂಎಸ್, ಕರ ಮತ್ತು ಡಾಟಾ (ಪ್ರತಿದಿನ 4ಜಿ ಸ್ಪೀಡ್‌ನಲ್ಲಿ 2ಜಿಬಿ)ವನ್ನು ಮೊದಲ ರಿಚಾರ್ಜ್‌ನ 3 ತಿಂಗಳ ಕಾಲ ನೀಡಲಿದೆ.

* ಜಿಯೋ ಪ್ರೈಮ್ ಸದಸ್ಯರಿಗೆ ಲಭ್ಯವಿರುವ ವಿಶೇಷ ಸೌಲಭ್ಯಗಳನ್ನು ಪರಿಗಣಿಸಿ, ಜಿಯೋ ಪ್ರೈಮ್ ಅನ್ನು ಯಾವುದೋ ಕಾರಣಕ್ಕೆ ಚಂದಾ ಮಾಡಿಕೊಳ್ಳಲು ಸಾಧ್ಯವಾಗದ ಗ್ರಾಹಕರು 408 ರೂ. ಅಥವಾ 608 ರೂ. (ಜಿಯೋ ಪ್ರೈಮ್ + ರಿಚಾರ್ಜ್ ಬೆಲೆ) ಪಾವತಿಸಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

* ಈಗ ಚಾಲ್ತಿಯಲ್ಲಿರುವ ಜಿಯೋ ಗ್ರಾಹಕರು, ಈ ತನಕ ಮೊದಲ ರಿಚಾರ್ಜ್ ಮಾಡಿಸದವರು, ಸೇವೆಯ ಪದಚ್ಯುತಿ ಮತ್ತು ಅಥವಾ ಸಂಪರ್ಕ ಕಡಿತವನ್ನು ತಪ್ಪಿಸಲು 15 ಏಪ್ರಿಲ್ 2017ಕ್ಕಿಂತ ಮೊದಲು ಮಾಡಬೇಕಿದೆ.

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reliance Jio's promotional offer Dhan Dhana Dhan provides unlimited data, free SMSs,Jio apps and free voice calls under one recharge of Rs 309 and Rs 509.
Please Wait while comments are loading...