ಹೊಸ 100 ರು. ನಾಣ್ಯದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 5 ಅಂಶ

Posted By:
Subscribe to Oneindia Kannada
   100 Rupee coin will be introduced to mark Dr MG Ramachandran's birth centenary

   ನವದೆಹಲಿ, ಸೆಪ್ಟೆಂಬರ್ 12: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ. ಎಂ.ಜಿ. ರಾಮಚಂದ್ರನ್ ಅವರ 100ನೇ ಜನ್ಮದಿನಾಚರಣೆಯಂದು ಕೇಂದ್ರ ಸರ್ಕಾರ, 100 ರು. ಹಾಗೂ ಹೊಸ 5 ರು. ನಾಣ್ಯಗಳನ್ನು ಬಿಡುಗಡೆ ಮಾಡಲಿದೆ.

   ಈ ಸಂಬಂಧ, ಪ್ರಕಟಣೆ ಹೊರಡಿಸಿರುವ ಕೇಂದ್ರ ಸರ್ಕಾರ, ಎಐಎಡಿಎಂಕೆಯ ಸಂಸ್ಥಾಪಕರ ಜನ್ಮಶತಮಾನೋತ್ಸವದಂದು ಈ ಹೊಸ ನಾಣ್ಯಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

   ನಾಣ್ಯ ನಿಷೇಧದ ಮೂಲಕ ಹೊಸ ಶಾಕ್ ಕೊಡಲು ಮೋದಿ ಸಿದ್ಧತೆ

   ಈ ಹಿಂದೆ, ತಮಿಳುನಾಡು ಸರ್ಕಾರವೇ ಕೇಂದ್ರ ಸರ್ಕಾರಕ್ಕೆ ಎಂ.ಜಿ.ಆರ್. ಭಾವಚಿತ್ರವಿರುವ ನಾಣ್ಯವನ್ನು ಬಿಡುಗಡೆ ಮಾಡಬೇಕೆಂದು ಕೋರಿತ್ತು. ಇದಕ್ಕೆ ಈಗ ಸುಯೋಗ ಬಂದಿದೆ ಎಂದು ತಿಳಿಸಿರುವ ಕೇಂದ್ರ ಸರ್ಕಾರ, 'ಭಾರತ ರತ್ನ' ಪಡೆದ ಹೆಮ್ಮೆಯ ಎಂ.ಜಿ.ಆರ್. ಅವರಿಗೆ ಈ ನಾಣ್ಯದ ಮೂಲಕ ಕೇಂದ್ರ ಸರ್ಕಾರ ಶ್ರದ್ಧಾಂಜಲಿ ಸಲ್ಲಿಸಲಿದೆ ಎಂದಿದೆ.

   ಬೆಳ್ಳಿ, ತಾಮ್ರ, ಸತು ಮಿಕ್ಸ್

   ಬೆಳ್ಳಿ, ತಾಮ್ರ, ಸತು ಮಿಕ್ಸ್

   ಈ ಹೊಸ ನಾಣ್ಯವು 44 ಮಿಲಿಮೀಟರ್ ವ್ಯಾಸವುಳ್ಳದ್ದಾಗಿದ್ದು, ಇದರಲ್ಲಿ ಬೆಳ್ಳಿ (ಶೇ. 50), ತಾಮ್ರ (ಶೇ. 40), ನಿಕ್ಕಲ್ (ಶೇ. 5) ಹಾಗೂ ಸತು (ಝಿಂಕ್ - ಶೇ. 5) ಇದೆ.

   ದೇವನಾಗರಿ ಲಿಪಿಯಲ್ಲಿನ ಬರಹ

   ದೇವನಾಗರಿ ಲಿಪಿಯಲ್ಲಿನ ಬರಹ

   ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭವಿದೆ. ಅದರ ಕೆಳಗೆ ಸತ್ಯ ಮೇವ ಜಯತೆ ಎಂದು ಬರೆಯಲಾಗಿದೆ. ಇದು ದೇವ ನಾಗರಿ ಲಿಪಿಯಲ್ಲಿದೆ.

   ತೂಕ 35 ಗ್ರಾಂ

   ತೂಕ 35 ಗ್ರಾಂ

   ನಾಣ್ಯದ ಮತ್ತೊಂದು ಬದಿಯಲ್ಲಿ, ಡಾ. ಎಂ.ಜಿ. ರಾಮಚಂದ್ರನ್ ಅವರ ಭಾವಚಿತ್ರವಿದೆ. ಅಂದಹಾಗೆ, ಈ 100 ರು. ನಾಣ್ಯದ ತೂಕ 35 ಗ್ರಾಂ ಇರಲಿದೆ.

   6 ಗ್ರಾಂ ತೂಕ

   6 ಗ್ರಾಂ ತೂಕ

   ಇನ್ನು, 5 ರು. ನಾಣ್ಯದ ಬಗ್ಗೆ ಹೇಳಬೇಕೆಂದರೆ, ಇದು 23 ಮಿ.ಮೀ. ವ್ಯಾಸವುಳ್ಳ ನಾಣ್ಯವಾಗಿದ್ದು, ಸುಮಾರು 6 ಗ್ರಾಂ ತೂಕವಿದೆ. ಇದರಲ್ಲಿ, ತಾಮ್ರ (ಶೇ. 75), ಸತು (ಶೇ. 20), ನಿಕ್ಕಲ್ (ಶೇ. 5) ಅಂಶವಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Rs. 100 coins will be introduced to commemorate the occasion of Dr MG Ramachandran birth centenary. This was stated in a notification, dated September 11, from the Ministry of Finance.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ