ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಹೆಸರಿನಲ್ಲಿ ಬರುವ ನಕಲಿ ಕರೆಗಳಿಗೆ ಉತ್ತರಿಸಿ ಮೋಸ ಹೋಗದಿರಿ: SBI ಎಚ್ಚರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 17: ದೇಶದಲ್ಲಿ ಇತ್ತೀಚೆಗೆ ಕೆವೈಸಿ ಕೇಳುವ ನೆಪದಲ್ಲಿ ಹೆಚ್ಚಿರುವ ಮೋಸದ ಜಾಲದ ಕುರಿತು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಚ್ಚರಿಕೆ ನೀಡಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಈ ಮೋಸ ಜಾಲದ ವ್ಯಾಪ್ತಿ ದೇಶಾದ್ಯಂತ ಬೆಳೆಯುತ್ತಿದೆ. ಬ್ಯಾಂಕ್ ಅಧಿಕಾರಿಗಳಂತೆ ನಟಿಸಿ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ಎಸ್‌ಬಿಐ ಗ್ರಾಹಕರನ್ನು ಎಚ್ಚರಿಸಿದೆ.

ಬ್ಯಾಂಕ್ ಅಧಿಕಾರಿಗಳಂತೆ ಕರೆ ಮಾಡುವ ಇವರು ಜನರಿಗೆ ನಂಬಿಸಿ ಕೆವೈಸಿ ಅಪ್‌ಡೇಟ್ ಮಾಡುವ ಅಗತ್ಯವಿದೆ ಎಂದು ಹೇಳುವ ಮೂಲಕ ಮಾಹಿತಿ ಪಡೆದು ಆನ್‌ಲೈನ್‌ನಲ್ಲಿ ಖಾತೆಯನ್ನು ಹ್ಯಾಕ್ ಮಾಡಲಾಗುತ್ತಿದೆ. ಹೀಗಾಗಿ ಎಸ್‌ಬಿಐ ಕೆವೈಸಿ ಪರಿಶೀಲನೆಗಾಗಿ ವಿನಂತಿಸುವ ಮೋಸದ ಕರೆಗಳ ವಿರುದ್ಧ ಎಚ್ಚರಿಕೆ ನೀಡಿದೆ.

ಡಿ.13 ಮಧ್ಯರಾತ್ರಿಯಿಂದ 24x7x365 RTGS ಸೌಲಭ್ಯ: ಆರ್‌ಬಿಐಡಿ.13 ಮಧ್ಯರಾತ್ರಿಯಿಂದ 24x7x365 RTGS ಸೌಲಭ್ಯ: ಆರ್‌ಬಿಐ

"ಕೆವೈಸಿ ಪರಿಶೀಲನೆಗಾಗಿ ವಿನಂತಿಸುವ ಮೋಸದ ಕರೆಗಳು ಅಥವಾ ಸಂದೇಶಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ." ಎಂದು ಎಸ್‌ಬಿಐ ಟ್ವೀಟ್‌ನಲ್ಲಿ ತಿಳಿಸಿದೆ.

Alert: SBI Cautions Against Fake Calls, Messages Requesting KYC Verification

ಹ್ಯಾಕರ್ಸ್‌ಗಳಿಂದ ಮೋಸ ಹೋಗದಿರಲು ಎಸ್‌ಬಿಐ ಏಳು ಸುರಕ್ಷತಾ ಸಲಹೆಗಳನ್ನು ನೀಡಿದ್ದು, ಅವುಗಳು ಈ ಕೆಳಕಂಡಂತಿದೆ:

1) ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

2) ದೂರದಿಂದಲೇ ಕಾರ್ಯನಿರ್ವಹಿಸಬಹುದಾದ ಅಪ್ಲಿಕೇಶನ್‌ಗಳನ್ನು ಕಟ್ಟುನಿಟ್ಟಾಗಿ ದೂರವಿಡಿ.

3) ಆಧಾರ್ ನಕಲನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ

4) ನಿಮ್ಮ ಬ್ಯಾಂಕ್ ಖಾತೆಯಲ್ಲಿ ನಿಮ್ಮ ಇತ್ತೀಚಿನ ಫೋನ್ ಮತ್ತು ಸಂಪರ್ಕದ ವಿವರಗಳನ್ನು ಅಪ್‌ಡೇಟ್ ಮಾಡಿ

5) ನಿಮ್ಮ ಪಾಸ್‌ವರ್ಡ್ ಅನ್ನು ಆದಷ್ಟು ಬದಲಾಯಿಸುತ್ತಿರಿ.

6) ನಿಮ್ಮ ಮೊಬೈಲ್ ಮತ್ತು ಗೌಪ್ಯ ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

7) ನೀವು ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು ಯೋಚಿಸಿ.

English summary
SBI has cautioned against fraudulent calls requesting KYC verification
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X