ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಆಕಾಶ್ ಅಂಬಾನಿ ರಿಲಾಯನ್ಸ್‌ ಜಿಯೋಗೆ ಹೊಸ ಛೇರ್ಮನ್

|
Google Oneindia Kannada News

ಮುಂಬೈ, ಜೂನ್ 27; ರಿಲಾಯನ್ಸ್ ಜಿಯೋಗೆ ಹೊಸ ಸಾರಥಿ ನೇಮಕವಾಗಿದೆ. ಮುಖೇಶ್‌ ಅಂಬಾನಿ ಪುತ್ರ ಆಕಾಶ್ ಅಂಬಾನಿ ನೂತನ ಛೇರ್ಮನ್ ಎಂದು ಮಂಗಳವಾರ ಘೋಷಣೆ ಮಾಡಲಾಗಿದೆ.

ಮುಖೇಶ್‌ ಅಂಬಾನಿ ರಿಲಾಯನ್ಸ್‌ ಜಿಯೋ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆಕಾಶ್ ಅಂಬಾನಿ ರಿಲಾಯನ್ಸ್‌ ಜಿಯೋ ನೂತನ ಛೇರ್ಮನ್ ಆಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಲಂಡನ್ ನಿವಾಸಕ್ಕೆ ಮುಖೇಶ್ ಅಂಬಾನಿ ಕುಟುಂಬ ಸ್ಥಳಾಂತರ ಸುದ್ದಿ ಸುಳ್ಳು: ರಿಲಾಯನ್ಸ್ ಸ್ಪಷ್ಟನೆ ಲಂಡನ್ ನಿವಾಸಕ್ಕೆ ಮುಖೇಶ್ ಅಂಬಾನಿ ಕುಟುಂಬ ಸ್ಥಳಾಂತರ ಸುದ್ದಿ ಸುಳ್ಳು: ರಿಲಾಯನ್ಸ್ ಸ್ಪಷ್ಟನೆ

ಆಕಾಶ್ ಅಂಬಾನಿ ರಿಲಾಯನ್ಸ್‌ ಜಿಯೋ ನಾನ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿದ್ದರು. ಈಗ ನೂತನ ಛೇರ್ಮನ್ ಆಗಿ ಆಯ್ಕೆಗೊಂಡಿದ್ದಾರೆ. ಆದರೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಮುಕೇಶ್ ಅಂಬಾನಿ ಮುಂದುವರಿಯಲಿದ್ದಾರೆ.

ಬ್ಲೂಸ್ಮಾರ್ಟ್ ಜೊತೆ ಜಿಯೋ-ಬಿಪಿ ಒಪ್ಪಂದ, ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಬ್ಲೂಸ್ಮಾರ್ಟ್ ಜೊತೆ ಜಿಯೋ-ಬಿಪಿ ಒಪ್ಪಂದ, ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ

Akash Ambani Announces As New Board Chairman Of Reliance Jio

ಮುಖೇಶ್‌ ಅಂಬಾನಿ ಜೂನ್ 27ರಿಂದಲೇ ಜಾರಿಗೆ ಬರುವಂತೆ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಕಜ್ ಮೋಹನ್ ಪವಾರ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಅಧಿಕಾರವಹಿಸಿಕೊಂಡಿದ್ದಾರೆ.

ಐಒಟಿ: ಎಂಜಿ ಮೋಟಾರ್ ಇಂಡಿಯಾ ಮತ್ತು ಜಿಯೋ ಸಹಯೋಗ ಐಒಟಿ: ಎಂಜಿ ಮೋಟಾರ್ ಇಂಡಿಯಾ ಮತ್ತು ಜಿಯೋ ಸಹಯೋಗ

ಮುಂದಿನ 5 ವರ್ಷಗಳ ಕಾಲ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಪಂಕಜ್ ಪವಾರ್ ನೇಮಕ ಮಾಡಲಾಗಿದೆ. ಹೆಚ್ಚುವರಿ ನಿರ್ದೇಶಕರಾದ ರಮೀಂದರ್ ಸಿಂಗ್ ಗುಜ್ರಾಲ್ ಮತ್ತು ಕೆ. ವಿ. ಚೌಧರಿ ಮುಂದೆ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ನೇಮಕಾತಿಯೂ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ.

ಜೂನ್ 27ರಂದು ನಡೆದ ರಿಲಾಯನ್ಸ್‌ ಜಿಯೋ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ರಿಲಾಯನ್ಸ್‌ ಜಿಯೋನಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ.

ಅಕಾಶ್ ಅಂಬಾನಿ ಪರಿಚಯ; ಮುಖೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಬ್ರೌನ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ. ಮುಖೇಶ್ ಅಂಬಾನಿ ಪರವಾಗಿ ಕಂಪನಿಯ ವಹಿವಾಟುಗಳನ್ನು ನಿರ್ವಹಿಸುತ್ತಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಮುಕೇಶ್ ಅಂಬಾನಿ ನೀಡಿದ ರಾಜೀನಾಮೆಯನ್ನೂ ಮಂಡಳಿ ಅಂಗೀಕರಿಸಿದೆ. ಬಳಿಕ ಈ ಹೊಸ ನೇಮಕವು ನಡೆದಿದೆ. ಆದರೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಮುಕೇಶ್ ಅಂಬಾನಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.

ಆಕಾಶ್ ಅಂಬಾನಿ ಜಿಯೋದ 4ಜಿ ವ್ಯವಸ್ಥೆಯನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 2020ರಲ್ಲಿ ಪ್ರಪಂಚದಾದ್ಯಂತದ ದೊಡ್ಡ ತಂತ್ರಜ್ಞಾನ ಕಂಪನಿಗಳು ಜಿಯೋದಲ್ಲಿ ಹೂಡಿಕೆ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.

English summary
Akash Ambani a non-executive director and Mukesh Ambani son announced as new board chairman of Reliance Jio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X