ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಬಂದಿಳಿದ ಆಕಾಶ ಏರ್ ಮೊದಲ ಬೋಯಿಂಗ್ ವಿಮಾನ

|
Google Oneindia Kannada News

ಮುಂಬೈ, ಜೂನ್ 21: ಯಶಸ್ವಿ ಷೇರು ಹೂಡಿಕೆದಾರ, ಭಾರತದ ವಾರೆನ್ ಬಫೆಟ್ ಎಂದೇ ಕರೆಸಿಕೊಳ್ಳುವ ರಾಕೇಶ್ ಜುನ್‌ಜುನ್‌ವಾಲಾ ಒಡೆತನದ ಆಕಾಶ ಏರ್ ಸಂಸ್ಥೆಯ ಮೊದಲ ವಿಮಾನ ಬೋಯಿಂಗ್ 737 ಮ್ಯಾಕ್ಸ್ ಮಂಗಳವಾರ ನವದೆಹಲಿಗೆ ಬಂದಿಳಿದಿದ್ದು, ಕಾರ್ಯಾಚರಣೆಯನ್ನು ಪ್ರಾರಂಭಿಸಲು ಕಡ್ಡಾಯವಾದ ಏರ್ ಆಪರೇಟರ್ ಪರವಾನಗಿ ಪಡೆಯುವ ಹಂತದಲ್ಲಿದೆ.

ಜೂನ್ 15 ರಂದು ಯುಎಸ್‌ನ ಸಿಯಾಟಲ್‌ನಲ್ಲಿ ಏರ್‌ಲೈನ್ಸ್ ವಿಮಾನದ ಕೀಗಳನ್ನು ಆಕಾಶ ಏರ್ ಸಂಸ್ಥೆ ಸ್ವೀಕರಿಸಿತ್ತು. ಕಳೆದ ನವೆಂಬರ್‌ನಲ್ಲಿ ಬೋಯಿಂಗ್‌ನೊಂದಿಗೆ ಆಕಾಶ ಏರ್ ಆರ್ಡರ್ ಮಾಡಿದ 72 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಲ್ಲಿ ಮೊದಲ ವಿಮಾನ ಭಾರತಕ್ಕೆ ಬಂದಿಳಿದಿದೆ.

ಬೆಂಗಳೂರು; ಮತ್ತಷ್ಟು ಅಂತಾರಾಷ್ಟ್ರೀಯ ವಿಮಾನ ಶೀಘ್ರ ಆರಂಭಬೆಂಗಳೂರು; ಮತ್ತಷ್ಟು ಅಂತಾರಾಷ್ಟ್ರೀಯ ವಿಮಾನ ಶೀಘ್ರ ಆರಂಭ

"ಆಕಾಶ ಏರ್, ತನ್ನ 72 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಮೊದಲ ಆಗಮನವನ್ನು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ನಾಯಕತ್ವದ ತಂಡದ ಸಮ್ಮುಖದಲ್ಲಿ ಸ್ವಾಗತಿಸಿದೆ" ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.

"ಮೊದಲ ವಿಮಾನದ ಆಗಮನ ಸಂಸ್ಥೆಗೆ ಸಂತೋಷದ ಕ್ಷಣವಾಗಿದೆ ಮತ್ತು ಪ್ರಮುಖ ಮೈಲಿಗಲ್ಲಾಗಿದೆ. ಇದು ಭಾರತದ ಹಸಿರು, ಅತ್ಯಂತ ವಿಶ್ವಾಸಾರ್ಹ ಮತ್ತು ಅತ್ಯಂತ ಕೈಗೆಟುಕುವ ವಿಮಾನಯಾನವನ್ನು ನಿರ್ಮಿಸುವ ನಮ್ಮ ಕಾರ್ಯಕ್ಕೆ ಮತ್ತಷ್ಟು ಸನಿಹವಾಗಿದ್ದೇವೆ" ಎಂದು ಸಂಸ್ಥೆಯ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವಿನಯ್ ದುಬೆ ಹೇಳಿದರು.

ಭಾರತೀಯ ವಾಯುಯಾನದಲ್ಲಿ ಮೈಲಿಗಲ್ಲು

ಭಾರತೀಯ ವಾಯುಯಾನದಲ್ಲಿ ಮೈಲಿಗಲ್ಲು

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ವಾಯುಯಾನವು ಸಾಧಿಸಿರುವ ಪ್ರಗತಿಗೆ ಆಕಾಶ ಏರ್ ಒಂದು ಪ್ರಮುಖ ಉದಾಹರಣೆಯಾಗಿದೆ, "ಇದು ನಮಗೆ ಮತ್ತು ಭಾರತೀಯ ವಾಯುಯಾನಕ್ಕೆ ಮಹತ್ವದ ಮೈಲಿಗಲ್ಲು ಮಾತ್ರವಲ್ಲ, ಆದರೆ ಇದು ನವ ಭಾರತದ ಕಥೆ" ಎಂದು ಹೇಳಿದರು.

"ಬೋಯಿಂಗ್ ಆಕಾಶ ಏರ್‌ನೊಂದಿಗೆ ಪಾಲುದಾರಿಕೆ ಹೊಂದಲು ಹೆಮ್ಮೆಪಡುತ್ತದೆ, ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ವಿಮಾನ ಯಾನ ಸೇವೆ ನೀಡಲು ಪ್ರಾರಂಭಿಸುತ್ತಿದ್ದಾರೆ," ಎಂದು ಬೋಯಿಂಗ್ ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ ಹೇಳಿದ್ದಾರೆ.

ವಿಮಾನಯಾನ ಇತಿಹಾಸದಲ್ಲೇ ದೊಡ್ಡ ಖರೀದಿಗೆ ಮುಂದಾದ ಏರ್ ಇಂಡಿಯಾ!ವಿಮಾನಯಾನ ಇತಿಹಾಸದಲ್ಲೇ ದೊಡ್ಡ ಖರೀದಿಗೆ ಮುಂದಾದ ಏರ್ ಇಂಡಿಯಾ!

ಅಗ್ಗದ ದರದಲ್ಲಿ ವಿಮಾನ ಪ್ರಯಾಣ

ಅಗ್ಗದ ದರದಲ್ಲಿ ವಿಮಾನ ಪ್ರಯಾಣ

"ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು ವಾಯುಯಾನ ಉದ್ಯಮಕ್ಕೆ ಅಗಾಧವಾದ ಬೆಳವಣಿಗೆ ಮತ್ತು ಉತ್ಪಾದಕತೆಯ ಅವಕಾಶಗಳನ್ನು ನೀಡುತ್ತದೆ. ಸುಧಾರಿತ 737ಮ್ಯಾಕ್ಸ್ ತನ್ನ ಗ್ರಾಹಕರಿಗೆ ಉನ್ನತವಾದ ಹಾರಾಟದ ಅನುಭವ ಒದಗಿಸುವಾಗ ವ್ಯಾಪಾರ ಮತ್ತು ಕಾರ್ಯಾಚರಣೆಗಳಲ್ಲಿ ಆಕಾಶ ಏರ್ ಡ್ರೈವ್ ದಕ್ಷತೆಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

ಆಕಾಶ ಏರ್‌ಗೆ ಪರವಾನಗಿ ಪಡೆಯುತ್ತಿರುವ ಭಾರತದ 7ನೇ ವಿಮಾನಯಾನ ಸಂಸ್ಥೆಯಾಗಿದೆ. ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ, ಸ್ಪೈಸ್‌ಜೆಟ್, ಗೋ ಏರ್‌ಲೈನ್ಸ್ ಮತ್ತು ಜೆಟ್ ಏರ್‌ವೇಸ್‌ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶೀಯ ಸಂಸ್ಥೆಗಳಾಗಿವೆ.

ಮಾರ್ಚ್‌ 2023ರ ವೇಳೆಗೆ 18 ವಿಮಾನ

ಮಾರ್ಚ್‌ 2023ರ ವೇಳೆಗೆ 18 ವಿಮಾನ

ಆಕಾಶ ಏರ್ ಕಂಪನಿಯು ಒಟ್ಟು 72 ವಿಮಾನಗಳಿಗೆ ಆರ್ಡರ್ ನೀಡಿದ್ದು, ಮಾರ್ಚ್ 2023ರ ವೇಳೆಗೆ 18 ವಿಮಾನಗಳನ್ನು ಪಡೆಯುವ ಗುರಿಯನ್ನು ಹೊಂದಿರುವುದಾಗಿ ಆಕಾಶ ಏರ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹೆಚ್ಚಿನ ಇಂಧನ ದಕ್ಷತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚದ 737 ಮ್ಯಾಕ್ಸ್‌ ವಿಮಾನ ಪ್ರಯಾಣದಿಂದ, ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ವಿಮಾನಯಾನ ಸೇವೆ ನೀಡಲು ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಲಾಭದಾಯಕ ಸೇವೆ ಸಲ್ಲಿಸಲು ಆಕಾಶ ಏರ್‌ಗೆ ಅವಕಾಶ ಸಿಗುತ್ತದೆ ಎನ್ನಲಾಗಿದೆ.

ಜುಲೈನಲ್ಲಿ ಮೊದಲ ಹಾರಾಟ ಸಾಧ್ಯತೆ

ಜುಲೈನಲ್ಲಿ ಮೊದಲ ಹಾರಾಟ ಸಾಧ್ಯತೆ

ಇಂಡಿಗೋ ಮಾಜಿ ಅಧ್ಯಕ್ಷ ಆದಿತ್ಯ ಘೋಷ್ ಆಕಾಸ ವಿಮಾನಯಾನ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದಾರೆ. ಜೆಟ್ ಏರ್‌ವೇಸ್‌ನ ಮಾಜಿ ಮುಖ್ಯಸ್ಥ ವಿನಯ್ ದುಬೆ ಈ ಆಕಾಶ ವಿಮಾನಯಾನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಈಗಾಗಲೇ 154 ಪೈಲಟ್‌ಗಳು, 115 ಕ್ಯಾಬಿನ್ ಅಟೆಂಡೆಂಟ್‌ಗಳು ಮತ್ತು 14 ಇಂಜಿನಿಯರ್‌ ಆಕಾಸ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜುಲೈನಲ್ಲಿ ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಲು ಯೋಜಿಸಿದೆ.

ಆಕಾಶ ಏರ್‌ ಕಡೆಯಿಂದ ಒಂದಿಷ್ಟು ಪ್ರಕ್ರಿಯೆಗಳು ಬಾಕಿ ಉಳಿದಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಲೈಸನ್ಸ್‌ಗೂ ಮೊದಲಿನ ಕೆಲವು ಪ್ರಕ್ರಿಯೆಗಳಿಗೆ ಶೀಘ್ರದಲ್ಲೇ ಆಕಾಶ ಏರ್‌ ಅನ್ನು ಕರೆಸಿಕೊಳ್ಳಲಿದೆ.

English summary
Akasa Air's first aircraft Boeing 737 MAX arrived in New Delhi, The airline had received the ceremonial keys for the aircraft in Seattle, the US, on June 15. Likely Start Operation from July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X