• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡ್ರೆಂಚ್ ಕೋಟ್ಸ್ ಪರಿಚಯಿಸಿದ ರಿಲಯನ್ಸ್ ನ ರೀಟೇಲರ್ ಆಜಿಯೋ

|

ಬೆಂಗಳೂರು, ಜುಲೈ 01: ಇಂದಿನ ಟ್ರೆಂಡ್‌ಗೆ ಸರಿಹೊಂದುವಂಥ ವಿನೂತನ ಸ್ಟೈಲ್‌‌‌ ಹಾಗೂ ಉನ್ನತ ಸೌಂದರ್ಯದ ಫ್ಯಾಶನ್‌ಗಾಗಿ ಹೆಸರಾಗಿರುವ ಭಾರತದ ಮುಂಚೂಣಿ ಫ್ಯಾಶನ್ ಇ-ರೀಟೇಲರ್ ಆಜಿಯೋ(Ajio), 'ಡ್ರೆಂಚ್ ಕೋಟ್ಸ್' ಸಂಗ್ರಹವನ್ನು ಪರಿಚಯಿಸುವುದರೊಂದಿಗೆ ಟ್ರೆಂಡ್ ಅನ್ನು ಇನ್ನೊಮ್ಮೆ ಉನ್ನತೀಕರಿಸಿದೆ. ಪಾರದರ್ಶಕ ಜಾಕೆಟ್ ಹಾಗೂ ಕೋಟ್‌ಗಳ ಈ ಆಕರ್ಷಕ ಸರಣಿಯು ರನ್‌ವೇಯಲ್ಲೂ ಧರಿಸಬಹುದಾದಂತಹ ಪ್ರಿಂಟ್‌ಗಳು ಹಾಗೂ ಬಣ್ಣಗಳಲ್ಲಿ ದೊರಕಲಿದೆ.

ಭ್ರಮೆಹುಟ್ಟಿಸುವ ಕ್ಯಾಮಫ್ಲಾಜ್ ಪ್ರಿಂಟ್‌ಗಳು, ಆಧುನಿಕ ಚೆಕ್ಸ್, ಹೂವುಗಳು ಹಾಗೂ ಪಾಪ್ ಬಣ್ಣಗಳು ಆಜಿಯೋ ಡ್ರೆಂಚ್ ಕೋಟ್‌ನಲ್ಲಿ ಸ್ಫುಟವಾದ ಹಾಗೂ ಹೊಸದಾದ ಚಿತ್ರಣ ಪಡೆದುಕೊಳ್ಳುತ್ತವೆ. ಮಳೆಗಾಲಕ್ಕೆ ಅನಿವಾರ್ಯವೆಂದಷ್ಟೇ ಅಲ್ಲ, ಪೂರ್ತಿ ವರ್ಷದ ಫ್ಯಾಶನ್ ಸ್ಟೇಟ್‌ಮೆಂಟ್‌ ಎಂಬ ಕಾರಣಕ್ಕೂ ಇವು ನಿಮ್ಮ ಕಪಾಟಿನಲ್ಲಿ ಇರಬೇಕು!

ಜಿಯೋ ಗ್ರಾಹಕರಿಗೆ ಬಂಪರ್ : ವಿಶ್ವಕಪ್‌ನ ಪ್ರತಿ ಪಂದ್ಯ ಲೈವ್ ನೋಡಿ

ಮಳೆಗಾಲದ ಪರಿಕರವಷ್ಟೇ ಆಗಿದ್ದ ಪಾರದರ್ಶಕ ಜಾಕೆಟ್, ಇದೀಗ ವಿಶ್ವದೆಲ್ಲೆಡೆಯ ಫ್ಯಾಶನ್ ವೀಕ್‌ಗಳಲ್ಲಿ ಫ್ಯಾಶನ್ನಿನ ಅವಿಭಾಜ್ಯ ಅಂಗವಾಗಿ ಬದಲಾಗಿದೆ. ವಿಶ್ವದಾದ್ಯಂತ ಫ್ಯಾಶನ್ ಅಭಿಮಾನಿಗಳು ಈ ಕೂಲ್ ಆಂಡ್ ಕ್ಲಿಯರ್ ಟ್ರೆಂಡ್ ಅನ್ನು ಹೆಚ್ಚುಹೆಚ್ಚಾಗಿ ಧರಿಸುತ್ತಿದ್ದಾರೆ ಹಾಗೂ ಇಷ್ಟಪಡುತ್ತಿದ್ದಾರೆ.

ಮಳೆನೀರು ಪ್ರತಿರೋಧಕ ಕೋಟ್

ಮಳೆನೀರು ಪ್ರತಿರೋಧಕ ಕೋಟ್

ಮಳೆನೀರು ಪ್ರತಿರೋಧಕ ಹಾಗೂ ಹೀಟ್ ಸೀಲ್ಡ್ ಆದ ಈ ಡ್ರೆಂಚ್ ಕೋಟುಗಳು ವರ್ಷಪೂರ್ತಿ ಬಳಸಲು ನಾವು ಕೊಂಡಿಟ್ಟುಕೊಳ್ಳಬಹುದಾದ ಬಹುಮುಖಿ ವಿನ್ಯಾಸಗಳಾಗಿವೆ. ಅಜಿಯೋ ವೆಬ್ ಹಾಗೂ ರಿಲಯನ್ಸ್ ಟ್ರೆಂಡ್ಸ್ ಮಳಿಗೆಗಳಲ್ಲಿ ಮಾತ್ರವೇ ಸಿಗುವ ಈ ಸಂಗ್ರಹ, ಪುರುಷರು ಹಾಗೂ ಮಹಿಳೆಯರಿಗಾಗಿ ರೂ. 3999ರಿಂದ ಪ್ರಾರಂಭವಾಗುವ ಬೆಲೆಯಲ್ಲಿ ದೊರಕಲಿದೆ.

ಕ್ಲಿಯರ್ ಜಾಕೆಟ್, ಡ್ರೆಂಚ್ ಕೋಟ್ ಸಂಗ್ರಹ

ಕ್ಲಿಯರ್ ಜಾಕೆಟ್, ಡ್ರೆಂಚ್ ಕೋಟ್ ಸಂಗ್ರಹ

"ಯಾವಾಗಲೂ ಟ್ರೆಂಡ್‌ಗೆ ಹೊಂದುವಂತೆಯೇ ಇರುವುದು ಆಜಿಯೋದ ಡಿಎನ್‌ಎ ಆಗಿದೆ. ಇಂದಿನ ಗ್ರಾಹಕರು ನೈಜ ಅರ್ಥದಲ್ಲಿ ವಿಶ್ವವ್ಯಾಪಕರಾಗಿದ್ದು, ಯಾವಾಗಲೂ ಚಲನೆಯಲ್ಲಿರುತ್ತಾರೆ. ನಮ್ಮ ವಿನ್ಯಾಸಗಳನ್ನು ಪ್ರಸ್ತುತ ಹಾಗೂ ವಿಷಯಕ್ಕೆ ಹತ್ತಿರವಾಗಿಡುವ ಮೂಲಕ ಸಂಪೂರ್ಣವಾಗಿ ಗ್ರಾಹಕರಿಗೆ ಪೂರಕವಾಗಿರುವುದು ನಮ್ಮ ಗುರಿ. ಫ್ಯಾಶನ್ ಜಗತ್ತಿನಲ್ಲಿ ಸಂಚಲನೆ ಉಂಟುಮಾಡಿರುವ ಕ್ಲಿಯರ್ ಜಾಕೆಟ್ ಕುರಿತ ನಮ್ಮ ನವೀನ ದೃಷ್ಟಿಕೋನವೇ ಡ್ರೆಂಚ್ ಕೋಟ್ ಸಂಗ್ರಹ; ವಿಶಿಷ್ಟ ಪ್ರಿಂಟ್‌ಗಳು ಹಾಗೂ ವರ್ಣಸಂಯೋಜನೆಗಳೊಂದಿಗೆ ಪ್ರತಿಯೊಂದು ಉಡುಪು ಕೂಡ ಆಜಿಯೋ ವೈಶಿಷ್ಟ್ಯವನ್ನು ತಮ್ಮೊಡನೆ ತರುತ್ತದೆ." ಎಂದು ಆಜಿಯೋ ವಕ್ತಾರರು ತಿಳಿಸಿದ್ದಾರೆ.

ಪರಿಸರ ಸ್ನೇಹಿ 'ಇಕೋವೆರಾ' ಶ್ರೇಣಿ ಪರಿಚಯಿಸಿದ ರೇಮಂಡ್

2016ರಲ್ಲಿ ಪರಿಚಯಿಸಲಾದ ಆಜಿಯೋ

2016ರಲ್ಲಿ ಪರಿಚಯಿಸಲಾದ ಆಜಿಯೋ

2016ರಲ್ಲಿ ಪರಿಚಯಿಸಲಾದ ಆಜಿಯೋನ ಖಾಸಗಿ ಲೇಬಲ್, ಕಾಲಕ್ರಮದಲ್ಲಿ ಜಾಗತಿಕ ಫ್ಯಾಶನ್ ಟ್ರೆಂಡ್‌ಗಳಿಗೆ ಸಮಾನಾರ್ಥಕವಾಗಿ ಬೆಳೆದಿದೆ. ಪುರುಷರು ಹಾಗೂ ಮಹಿಳೆಯರಿಗಾಗಿ ವಿಶೇಷವಾಗಿ ಕ್ಯುರೇಟ್ ಮಾಡಲಾದ ವಸ್ತ್ರಗಳು ಹಾಗೂ ಪರಿಕರಗಳನ್ನು ಒದಗಿಸುವ ಮೂಲಕ, ಆಜಿಯೋ ಇದೀಗ ದೇಶದ ಫ್ಯಾಶನ್ ಉತ್ಸಾಹಿಗಳು ಭೇಟಿಕೊಡಲೇಬೇಕಾದ ವೇದಿಕೆಯಾಗಿ ಬೆಳೆದಿದೆ.

ಫ್ಯಾಶನ್ನಿನ ಅವಿಭಾಜ್ಯ ಅಂಗವಾಗಿ ಬದಲಾಗಿದೆ

ಫ್ಯಾಶನ್ನಿನ ಅವಿಭಾಜ್ಯ ಅಂಗವಾಗಿ ಬದಲಾಗಿದೆ

ಮಳೆಗಾಲದ ಪರಿಕರವಷ್ಟೇ ಆಗಿದ್ದ ಪಾರದರ್ಶಕ ಜಾಕೆಟ್, ಇದೀಗ ವಿಶ್ವದೆಲ್ಲೆಡೆಯ ಫ್ಯಾಶನ್ ವೀಕ್‌ಗಳಲ್ಲಿ ಫ್ಯಾಶನ್ನಿನ ಅವಿಭಾಜ್ಯ ಅಂಗವಾಗಿ ಬದಲಾಗಿದೆ. ವಿಶ್ವದಾದ್ಯಂತ ಫ್ಯಾಶನ್ ಅಭಿಮಾನಿಗಳು ಈ ಕೂಲ್ ಆಂಡ್ ಕ್ಲಿಯರ್ ಟ್ರೆಂಡ್ ಅನ್ನು ಹೆಚ್ಚುಹೆಚ್ಚಾಗಿ ಧರಿಸುತ್ತಿದ್ದಾರೆ ಹಾಗೂ ಇಷ್ಟಪಡುತ್ತಿದ್ದಾರೆ.

ಫ್ಲಿಪ್ ಕಾರ್ಟ್ ಫ್ಯಾಷನ್ ರಾಯಭಾರಿಗಳಾದ ರಣಬೀರ್ -ಆಲಿಯಾ

English summary
AJIO, India’s leading online fashion e-retailer has launched a new curated collection of Drench Coats - funky series of transparent jackets and coats in prints and colours that are must have for the season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X