ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

84 ಬಿಲಿಯನ್ USD ಗಳಿಸಲು ಮೋದಿ ಸರ್ಕಾರದಿಂದ ಯೋಜನೆ

|
Google Oneindia Kannada News

ನವದೆಹಲಿ, ಜೂನ್ 14: ದೇಶದ ವಿವಿಧೆಡೆ 5ಜಿ ಸೇವೆ ಒದಗಿಸಲು ಅನುಕೂಲವಾಗಬಲ್ಲ ವಾಯುತರಂಗ ಹರಾಜಿಗೆ ಡಿಜಿಟಲ್ ಸಂವಹನ ಆಯೋಗ ಸಮ್ಮತಿ ನೀಡಿದೆ. ಇದರಿಂದ ಸರಿ ಸುಮಾರು 5.83 ಟ್ರಿಲಿಯನ್ ರುಪಾಯಿ(83.8 ಬಿಲಿಯನ್ ಡಾಲರ್) ಗಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

100 ಜಿಬಿಪಿಎಸ್ ವೇಗದ ಇಂಟರ್ನೆಟ್ ಸಾಧ್ಯ : ಇಸ್ರೋ 100 ಜಿಬಿಪಿಎಸ್ ವೇಗದ ಇಂಟರ್ನೆಟ್ ಸಾಧ್ಯ : ಇಸ್ರೋ

ನರೇಂದ್ರ ಮೋದಿ ಸರ್ಕಾರವು ಸುಮಾರು 8600 ಮೆಗಾ ಹರ್ಟ್ಜ್ ಟೆಲಿಕಾಂ ವಾಯುತರಂಗಗಳನ್ನು ಈ ವರ್ಷಾಂತ್ಯದೊಳಗೆ ಹರಾಜು ಮಾಡಲಿದೆ. ಬಹುವಿಧದ ತರಂಗಾಂತರಗಳಲ್ಲಿರುವ ಈ ತರಂಗಗುಚ್ಛ(Spectrum) ಹರಾಜಿನ ಮೂಲಕ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಭಾರಿ ಮೊತ್ತ ಸೇರಲಿದೆ.

Airwave Auction 2019: India government hopes to get 84 billion USD

ಎಲ್ಲ ತರಂಗಗುಚ್ಛಗಳು ನಿಗದಿತ ಮೂಲ ಬೆಲೆಗೆ ಮಾರಾಟವಾದರೂ, ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ 5.8 ಲಕ್ಷ ಕೋಟಿ ರೂಪಾಯಿ ಆದಾಯ ಬರಲಿದೆ. ಒಂದು ಕಡೆ ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವುದು ಇನ್ನೊಂದೆಡೆ ದೂರಸಂಪರ್ಕ ಸೇವೆ ಭಾರತದೆಲ್ಲೆಡೆ ಸಿಗುವಂತೆ ಮಾಡುವುದಾಗಿದೆ. ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ಸಂಸ್ಥೆ ಟೆಲಿಕಾಂ ಕ್ಷೇತ್ರಕ್ಕೆ ಕಾಲಿರಿಸಿದ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ.

ಶೀಘ್ರದಲ್ಲಿ 5ಜಿ ಇಂಟರ್‌ನೆಟ್‌ ಸೇವೆ, ಎಲ್ಲಾ ಗ್ರಾಮಗಳಿಗೂ ಇಂಟರ್ನೆಟ್‌ಶೀಘ್ರದಲ್ಲಿ 5ಜಿ ಇಂಟರ್‌ನೆಟ್‌ ಸೇವೆ, ಎಲ್ಲಾ ಗ್ರಾಮಗಳಿಗೂ ಇಂಟರ್ನೆಟ್‌

ತರಂಗಗುಚ್ಛ ಹರಾಜಿನಲ್ಲಿ ಲಭ್ಯವಿದ್ದ ವಾಯುತರಂಗಗಳ ಪೈಕಿ ಶೇಕಡ 40ರಷ್ಟು ಮಾತ್ರ ಮಾರಾಟವಾಗಿರಲಿಲ್ಲ. ಈ ಬಾರಿ ಕೂಡಾ ಹಲವು ತರಂಗಗಳ ಮಾರಾಟಕ್ಕೆ ನಿಗದಿತ ಬೆಲೆಯ ಬಗ್ಗೆ ಟೆಲಿಕಾಂ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ.

3,300 -3,600 MHz ಬ್ಯಾಂಡ್ 5ಜಿ ಸೇವೆಯ ಪ್ರಾಥಮಿಕ ಹಂತದ ಬ್ಯಾಂಡ್ ಎಂದು ಪರಿಗಣಿಸಲಾಗಿದ್ದು, ಸಿಂಗಲ್ ಬ್ಯಾಂಡ್ ಆಗಿ ಹರಾಜು ಮಾಡುವ ಸಾಧ್ಯತೆಯಿದ್ದು, 20 MHz ಪ್ರತಿ ಬ್ಲಾಕಿನ ಪ್ರತಿ ಮೆಗಾ ಹರ್ಟ್ಜ್ ಗೆ 492 ಕೋಟಿ ರು ಎಂದು ನಿಗದಿ ಮಾಡಲಾಗಿದೆ. ಈ ಬೆಲೆಯಲ್ಲಿ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಭಾರ್ತಿ ಏರ್ ಟೆಲ್ ಲಿಮಿಟೆಡ್ ಹೇಳಿದೆ. 5ಜಿ ಹರಾಜನು 2020ರಲ್ಲಿ ನಡೆಸುವಂತೆ ವೋಡಾಫೋನ್ ಐಡಿಯಾ ಲಿಮಿಟೆಡ್ ಕೋರಿದೆ. ಇದೆ ಬ್ಯಾಂಡಿನ ಹರಾಜಿಗೆ ದಕ್ಷಿಣ ಕೊರಿಯಾದಲ್ಲಿ 131 ಕೋಟಿ ಪ್ರತಿ ಮೆಗಾಹರ್ಟ್ಜ್ ನಂತೆ ಕಳೆದ ಜೂನ್ ನಲ್ಲಿ ಹರಾಜಾಗಿತ್ತು.

English summary
Airwave Auction 2019: It has witnessed that Spectrum auctions a major source of revenue for the national exchequer. Now Indian government expect to get 84 billion USD from latest Airwaves auction which intend to provide 5G services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X