ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ರಿಚಾರ್ಜ್ ಸೌಲಭ್ಯಗಳಿಗೆ ಬಿತ್ತು ಕತ್ತರಿ: ಏರ್‌ಟೆಲ್, ವೊಡಾಫೋನ್ ಹೊಸ ಪ್ಯಾಕೇಜ್

|
Google Oneindia Kannada News

ಕೋಲ್ಕತಾ, ನವೆಂಬರ್ 1: ಜಿಯೋ ಸಂಸ್ಥೆಯು ತನ್ನ ಗ್ರಾಹಕರಿಗೆ ನೀಡುತ್ತಿರುವ ಸೌಲಭ್ಯಗಳ ಅಡ್ಡಪರಿಣಾಮ ಇತರೆ ಮೊಬೈಲ್ ಸಂಪರ್ಕ ಸೇವಾ ಕಂಪೆನಿಗಳ ಮೇಲಾಗಿರುವುದು ಸ್ಪಷ್ಟವಾಗಿದೆ.

ಜಿಯೋ ಹೊಡೆತದಿಂದ ತತ್ತರಿಸಿರುವ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಆರ್ಥಿಕ ಸಂಕಷ್ಟದಿಂದ ಹೊರಬರುವ ಸಲುವಾಗಿ ತನ್ನ ಸಣ್ಣಪುಟ್ಟ ಗ್ರಾಹಕರಿಗೆ ನೀಡುತ್ತಿರುವ ವಿಶೇಷ ಸೌಲಭ್ಯಗಳಿಗೆ ಕತ್ತರಿ ಹಾಕಲು ಮುಂದಾಗಿವೆ.

ಕಡಿಮೆ ದರದಲ್ಲಿ ಹೆಚ್ಚು ಡೇಟಾ, ಏರ್ಟೆಲ್ ನಿಂದ ಜಿಯೋಗೆ ಗೂಟಕಡಿಮೆ ದರದಲ್ಲಿ ಹೆಚ್ಚು ಡೇಟಾ, ಏರ್ಟೆಲ್ ನಿಂದ ಜಿಯೋಗೆ ಗೂಟ

ಈ ಮುಂಚೆ ಉಚಿತವಾಗಿ ಕರೆ ಮತ್ತು ಡಾಟಾ ಸೌಲಭ್ಯಗಳನ್ನು ನೀಡಿದ್ದ ಜಿಯೋ, ಬಳಿಕ ನಿರ್ದಿಷ್ಟ ದರಗಳನ್ನು ನಿಗದಿಪಡಿಸಿತ್ತು. ಈಗ ವೊಡಾಫೋನ್ ಮತ್ತು ಏರ್‌ಟೆಲ್‌ಗಳು ಅನಿವಾರ್ಯವಾಗಿ ಪ್ರಿಪೇಯ್ಡ್ ದರ ಏರಿಕೆಗೆ ಮುಂದಾಗಿವೆ.

ತನ್ನ ಪ್ರೀಪೇಯ್ಡ್ ಗ್ರಾಹಕರ ಕನಿಷ್ಠ ರಿಚಾರ್ಜ್ ಪ್ಯಾಕ್‌ಗಳ ಸೌಲಭ್ಯಗಳನ್ನು ಕಡಿತಗೊಳಿಸಿ, ವಿವಿಧ ನಿಬಂಧನೆಗಳೊಂದಿಗೆ ಹೊಸ ರಿಚಾರ್ಜ್ ಪ್ಯಾಕ್‌ಗಳನ್ನು ಪರಿಚಯಿಸಿವೆ.

ಬಿ.ಎಸ್.ಎನ್.ಎಲ್.ಗ್ರಾಹಕರಿಗೆ ಧನಲಕ್ಷ್ಮಿಕೊಡುಗೆ ರಿಯಾಯಿತಿಬಿ.ಎಸ್.ಎನ್.ಎಲ್.ಗ್ರಾಹಕರಿಗೆ ಧನಲಕ್ಷ್ಮಿಕೊಡುಗೆ ರಿಯಾಯಿತಿ

ತನ್ನ ಪ್ರತಿ ಬಳಕೆದಾರ ಸರಾಸರಿ ವರಮಾನ (ಎಆರ್‌ಪಿಯು) ವೃದ್ಧಿ ಮಾಡುವ ಸಲುವಾಗಿ ಕನಿಷ್ಠ ರಿಚಾರ್ಜ್ ಸೌಲಭ್ಯಗಳನ್ನು ತೆಗೆದುಹಾಕಿದೆ.

ಮೂರು ವಿವಿಧ ಯೋಜನೆಗಳು

ಮೂರು ವಿವಿಧ ಯೋಜನೆಗಳು

ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ವೊಡಾಫೋನ್ ಮತ್ತು ಎರಡನೆಯ ಸ್ಥಾನದಲ್ಲಿರುವ ಏರ್‌ಟೆಲ್ 28 ದಿನಗಳ ವಾಯಿದೆಯ ಏಕರೂಪದ ರಿಚಾರ್ಜ್ ಪ್ಯಾಕ್‌ಗಳನ್ನು ಪರಿಚಯಿಸಿವೆ.

35 ರೂ, 65 ರೂ ಮತ್ತು 95 ರೂಗಳ ಪ್ರಿಪೇಯ್ಡ್ ಪ್ಯಾಕ್‌ಗಳನ್ನು ಈ ದೂರಸಂಪರ್ಕ ಸಂಸ್ಥೆಗಳು ಪರಿಚಯಿಸಿದ್ದು, ಇವುಗಳು 28 ದಿನಗಳ ವ್ಯಾಲಿಡಿಟಿ ಹೊಂದಿವೆ.

ಇದರರ್ಥ ಬಳಕೆದಾರರು ತಮ್ಮ ಯೋಜನೆಗಳನ್ನು ಮರು ರಿಚಾರ್ಜ್ ಮಾಡದೇ ಇದ್ದರೆ, 30 ದಿನಗಳಲ್ಲಿ ಹೊರಹೋಗುವ ಕರೆಗಳು ಬ್ಲಾಕ್ ಆಗಲಿವೆ ಮತ್ತು 45 ದಿನಗಳಲ್ಲಿ ಒಳಬರುವ ಕರೆಗಳು ಸಹ ಬ್ಲಾಕ್ ಆಗಲಿವೆ.

ಸಣ್ಣ ಗ್ರಾಹಕರಿಂದ ಲಾಭವಿಲ್ಲ

ಸಣ್ಣ ಗ್ರಾಹಕರಿಂದ ಲಾಭವಿಲ್ಲ

ಸಣ್ಣಪುಟ್ಟ ರಿಚಾರ್ಜ್‌ಗಳನ್ನು ಮಾಡಿಸಿಕೊಳ್ಳುವ ಗ್ರಾಹಕರಿಂದ ಸಂಸ್ಥೆಗಳಿಗೆ ಯಾವುದೇ ಆದಾಯ ಸಿಗುತ್ತಿಲ್ಲ. ಈ ಕಾರಣದಿಂದಾಗಿ ಅವರಿಗೆ ಉತ್ತೇಜನ ನೀಡದಿರಲು ಅವು ನಿರ್ಧರಿಸಿವೆ. ಕಡಿಮೆ ದರದ ರಿಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಗುಣಮಟ್ಟದ ಸೌಲಭ್ಯ ಮತ್ತು ನೆಟ್‌ವರ್ಕ್ ಲಭ್ಯವಾಗುವುದಿಲ್ಲ. ಹೀಗಾಗಿ ಅಲ್ಪಮೊತ್ತದ ಯೋಜನೆಗಳಿಗೆ ರಿಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರು ಸೇವಾ ಗುಣಮಟ್ಟಕ್ಕಾಗಿ ಹೆಚ್ಚು ಮೊತ್ತದ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಲಿದೆ. 28 ದಿನಗಳ ವಾಯಿದೆ ಇರುವುದರಿಂದ ನಿರಂತರ ರಿಚಾರ್ಜ್ ಮಾಡಿಸಿಕೊಳ್ಳಲೇಬೇಕಾಗಲಿದೆ.

ಹೊಸ ಎಂಟ್ರಿ ಲೆವಲ್ ಯೋಜನೆ ಘೋಷಿಸಿದ ಏರ್ ಟೆಲ್ಹೊಸ ಎಂಟ್ರಿ ಲೆವಲ್ ಯೋಜನೆ ಘೋಷಿಸಿದ ಏರ್ ಟೆಲ್

ಜಿಯೊ ಪರಿಣಾಮ

ಜಿಯೊ ಪರಿಣಾಮ

ರಿಲಯನ್ಸ್ ಜಿಯೊ ಎರಡು ವರ್ಷದ ಹಿಂದೆ ಪರಿಚಯವಾದ ಬಳಿಕ ಉಂಟಾದ ದರ ಸಮರವು ತಮ್ಮ ಆದಾಯ ಮತ್ತು ಲಾಭಕ್ಕೆ ಎರವಾಗಿರುವುದು ಈ ಎರಡೂ ಕಂಪೆನಿಗಳಿಗೆ ಕೊನೆಗೂ ಅರಿವಾಗಿದೆ. ಹೀಗಾಗಿ ಅದನ್ನು ಸರಿಪಡಿಸಿಕೊಳ್ಳಲು ಈ ಕ್ರಮ ತೆಗೆದುಕೊಂಡಿವೆ ಎಂದು ವಿಶ್ಲೇಷಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ತನ್ನ ಕನಿಷ್ಠ ರಿಚಾರ್ಜ್ ಯೋಜನೆಗಳ ಆದಾಯವನ್ನು ಸುಧಾರಣೆ ಮಾಡಿಕೊಳ್ಳಲು ಅವು ಪ್ರಯತ್ನಿಸಿವೆ.

ಜಿಯೊ ಗ್ರಾಮೀಣ ಗ್ರಾಹಕರು

ಜಿಯೊ ಗ್ರಾಮೀಣ ಗ್ರಾಹಕರು

ಇನ್ನೊಂದೆಡೆ ರಿಲಯನ್ಸ್ ಜಿಯೊಗೆ ಗ್ರಾಮೀಣ ಚಂದಾದಾರರ ಪ್ರಮಾಣ ಹೆಚ್ಚಾಗಿದೆ. ಮಾರ್ಚ್ ಅಂತ್ಯದಲ್ಲಿ 46.6 ಮಿಲಿಯನ್‌ನಿಂದ ಆಗಸ್ಟ್ ಅಂತ್ಯದ ವೇಳೆಗೆ 73.11 ಮಿಲಿಯನ್ ಗ್ರಾಹಕರನ್ನು, ಅಂದರೆ ಹೆಚ್ಚೂ ಕಡಿಮೆ ಗ್ರಾಹಕರ ಮೂಲವನ್ನು ಅದು ದುಪ್ಪಟ್ಟು ಮಾಡಿಕೊಂಡಿದೆ.

ಹಬ್ಬಕ್ಕೆ ಆಫರ್ : ಜಿಯೋ ರೀಚಾರ್ಜ್ ಮೇಲೆ ಫುಲ್ ಕ್ಯಾಶ್ ಬ್ಯಾಕ್ಹಬ್ಬಕ್ಕೆ ಆಫರ್ : ಜಿಯೋ ರೀಚಾರ್ಜ್ ಮೇಲೆ ಫುಲ್ ಕ್ಯಾಶ್ ಬ್ಯಾಕ್

ಏರ್‌ಟೆಲ್ ಮುಂಚೂಣಿ

ಏರ್‌ಟೆಲ್ ಮುಂಚೂಣಿ

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮಾಹಿತಿ ಪ್ರಕಾರ, ಏರ್‌ಟೆಲ್ 33.23%, ವೊಡಾಫೋನ್ 23.15%, ಐಡಿಯಾ 23.10% ಮತ್ತು ರಿಲಯನ್ಸ್ ಜಿಯೊ 12.14% ಗ್ರಾಮೀಣ ಚಂದಾದಾರಿಕೆ ನೆಲೆಯನ್ನು ಹೊಂದಿವೆ.

English summary
Bharti Airtel and Vodafone decided to boost average revenue per user (ARPU) to focus their profitable customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X