ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರ ಕೂಗಿಗೆ ಸ್ಪಂದಿಸಿದ ಏರ್ ಟೆಲ್, ವೋಡಾಫೋನ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 09: ದೂರಸಂಪರ್ಕ ಕ್ಷೇತ್ರದ ಪೈಪೋಟಿಯಲ್ಲಿ ಉಳಿದುಕೊಳ್ಳಲು ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಮೊಬೈಲ್ ಫೋನ್ ಸೇವೆಗಳ ಟಾರಿಫ್ ದರವನ್ನು ಹೆಚ್ಚಿಸುವ ಘೋಷಣೆ ಮಾಡಿದ ಬೆನ್ನಲ್ಲೇ ರಿಲಯನ್ಸ್ ಜಿಯೋ ಕೂಡ ಗ್ರಾಹಕರಿಗೆ ಹೊರೆ ಹೆಚ್ಚಿಸಲು ಮುಂದಾಗಿದ್ದು ಗೊತ್ತಿರಬಹುದು. ಈಗ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಿದೆ. ಗ್ರಾಹಕರ ಕೂಗಿಗೆ ಸ್ಪಂದಿಸಿದ ಏರ್ ಟೆಲ್, ವೋಡಾಫೋನ್ ಬೇರೆ ನೆಟ್ವರ್ಕ್ ಕರೆಗಳಿಗೆ ಮಾಡಬಹುದಾಗಿದ್ದ ಉಚಿತ ಕರೆಗಳ ಮಿತಿಯನ್ನು ತೆಗೆದು ಹಾಕಿದೆ.

ಡಿ. 1ರಿಂದ ಅನ್ವಯವಾಗುವಂತೆ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ತಮ್ಮ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ದರಗಳಲ್ಲಿ ಹೆಚ್ಚಳ ಮಾಡುವುದಾಗಿ ತಿಳಿಸಿದ್ದವು. ಆದರೆ, ಈಗ ಉಚಿತ ಕರೆ ಮೇಲೆ ಹೇರಿದ್ದ ಮಿತಿಯನ್ನು ತೆಗೆದು ಹಾಕಿರುವುದಾಗಿ ಟ್ವೀಟ್ ಮಾಡಿವೆ. ಎರಡೂ ಕಂಪನಿಗಳ ಪರಿಷ್ಕೃತ ದರಗಳು ಡಿಸೆಂಬರ್ 3ರಿಂದ ಜಾರಿಗೆ ಬರಲಿವೆ. ಏರ್ಟೆಲ್ ದರದಲ್ಲಿ ಶೇ 42ರಷ್ಟು ಹಾಗೂ ವೋಡಾಫೋನ್ ಐಡಿಯಾ ದರದಲ್ಲಿ ಶೇ 50ರಷ್ಟು ದರ ಏರಿಕೆಯಾಗಿದೆ.

ಏರ್ಟೆಲ್, ವೊಡಾಫೋನ್, ಜಿಯೋ ಬಳಿಕ ಈಗ ಬಿಎಸ್‌ಎನ್‌ಎಲ್ ಶಾಕ್ಏರ್ಟೆಲ್, ವೊಡಾಫೋನ್, ಜಿಯೋ ಬಳಿಕ ಈಗ ಬಿಎಸ್‌ಎನ್‌ಎಲ್ ಶಾಕ್

28 ದಿನಗಳ ವ್ಯಾಲಿಡಿಟಿಗೆ 1000 ನಿಮಿಷ, 84 ದಿನಗಳ ವ್ಯಾಲಿಡಿಟಿಗೆ 3000 ನಿಮಿಷ ಹಾಗೂ 365 ದಿನಗಳ ವ್ಯಾಲಿಡಿಟಿ ಯೋಜನೆಗೆ 12000 ನಿಮಿಷಗಳ ಮಿತಿ ಇತ್ತು. ಈ ಮಿತಿ ಮೀರಿದರೆ ಬೇರೆ ನೆಟ್ವರ್ಕ್ ಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ವಿಧಿಸಲಾಗುತ್ತಿತ್ತು. ಆದರೆ, ಈಗ ಹೊರ ಹೋಗುವ ಕರೆ ಉಚಿತವಾಗಲಿದೆ.

ಈ ಸಂಸ್ಥೆಗಳು ಸುಮಾರು 74 ಸಾವಿರ ಕೋಟಿ ನಷ್ಟದ ಜತೆಗೆ 80 ಸಾವಿರ ಕೋಟಿಗೂ ಅಧಿಕ ಮೊತ್ತದ ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಬಾಕಿ ಉಳಿಸಿಕೊಂಡಿದ್ದು, ಅವುಗಳನ್ನು ಶೀಘ್ರವೇ ಸರ್ಕಾರಕ್ಕೆ ಪಾವತಿಸಬೇಕಾಗಿದೆ.

ಬಳಕೆದಾರರ ಸಂಖ್ಯೆ: ಜಿಯೋ, ಬಿಎಸ್ಎನ್ಎಲ್ ಏರಿಕೆ, ಐಡಿಯಾ, ಏರ್ಟೆಲ್ ಇಳಿಕೆಬಳಕೆದಾರರ ಸಂಖ್ಯೆ: ಜಿಯೋ, ಬಿಎಸ್ಎನ್ಎಲ್ ಏರಿಕೆ, ಐಡಿಯಾ, ಏರ್ಟೆಲ್ ಇಳಿಕೆ

ಇತರೆ ನೆಟ್‌ವರ್ಕ್ ಬಳಕೆದಾರರಿಗೆ ಕರೆ ಮಾಡಿದರೆ ನಿಮಿಷಕ್ಕೆ ಆರು ಪೈಸೆ ದರ ವಿಧಿಸುವ ನಿರ್ಧಾರ ತೆಗೆದುಕೊಂಡಿತ್ತು. ಈ ಪ್ರತಿ ನಿಮಿಷದ ಆರುಪೈಸೆಯನ್ನು ಬಳಸಿದಂತೆ ಅಷ್ಟೇ ಮೊತ್ತದ ಡಾಟಾ ಸೇವೆಯನ್ನು ಉಚಿತವಾಗಿ ನೀಡಲು ಆರಂಭಿಸಿತ್ತು.

ಆರು ಪೈಸೆಗಳ ದರ ವಿಧಿಸುವ ನಿರ್ಧಾರದಿಂದ ಹಿಂದಕ್ಕೆ

ಆರು ಪೈಸೆಗಳ ದರ ವಿಧಿಸುವ ನಿರ್ಧಾರದಿಂದ ಹಿಂದಕ್ಕೆ

ಡಿಸೆಂಬರ್ 1ರಿಂದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳ ಸೇವೆಗಳ ದರ ಏರಿಕೆಯಾಗಿದೆ. ಪೋಸ್ಟ್ ಪೇಯ್ಡ್ ಮತ್ತು ಪ್ರೀಪೇಯ್ಡ್ ಎರಡೂ ಗ್ರಾಹಕರಿಗೆ ಈ ದರ ಹೆಚ್ಚಳದ ಬಿಸಿ ತಟ್ಟಲಿದೆ. ಸೇವೆಗಳ ಮೇಲೆ ಸ್ವಲ್ಪ ಮಟ್ಟಿನ ಹೆಚ್ಚಳ ಮಾಡುವುದಾಗಿ ಸಂಸ್ಥೆಗಳು ತಿಳಿಸಿವೆ. ಜಿಯೋ ಇತರೆ ಸೇವಾದಾರರ ಗ್ರಾಹಕರಿಗೆ ಮಾಡುವ ಕರೆಗಳ ಮೇಲೆ ನಿಮಿಷಕ್ಕೆ ಆರು ಪೈಸೆಗಳ ದರ ವಿಧಿಸುವ ನಿರ್ಧಾರವನ್ನು ಇತ್ತೀಚೆಗೆ ತೆಗೆದುಕೊಂಡಿತ್ತು. ಆದರೆ, ಈಗ ದರವನ್ನು ತೆಗೆದು ಹಾಕಲಾಗಿದೆ.

ಏರ್‌ಟೆಲ್‌ನ ವಕ್ತಾರರ ಹೇಳಿಕೆ

ಏರ್‌ಟೆಲ್‌ನ ವಕ್ತಾರರ ಹೇಳಿಕೆ

'ಏರ್‌ಟೆಲ್ ಡಿಸೆಂಬರ್ ಆರಂಭದಿಂದ ತನ್ನ ವಿವಿಧ ಸೇವಾ ಟಾರಿಫ್‌ಗಳ ಮೇಲಿನ ದರವನ್ನು ಹೆಚ್ಚಿಸಲಿದೆ. ಆದರೂ ಗ್ರಾಹಕರಿಗೆ ಕೈಗೆಟಕುವ ಟಾರಿಫ್‌ಗಳನ್ನು ಒದಗಿಸುವುದನ್ನು ಮುಂದುವರಿಸಲಿದೆ. ಕಂಪೆನಿಯು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಡಿಜಿಟಲ್ ಮೂಲಸೌಕರ್ಯಕ್ಕೆ ಅಗತ್ಯವಾದ ಹೆಚ್ಚುನ ಹೂಡಿಕೆ ನಡೆಸಲು ಹಾಗೂ ನಮ್ಮ ಗ್ರಾಹಕರಿಗೆ ಅವಶ್ಯಕವಾಗಿರುವ ಗುಣಮಟ್ಟದ ಸೇವೆಯನ್ನು ನಿಭಾಯಿಸಲು ದರ ಹೆಚ್ಚಳ ಅನಿವಾರ್ಯ' ಎಂದು ಏರ್‌ಟೆಲ್‌ನ ವಕ್ತಾರರು ತಿಳಿಸಿದ್ದಾರೆ.

ಏರ್‌ಟೆಲ್, ವೊಡಾಫೋನ್ ಬಳಿಕ ಜಿಯೋ ಸರದಿ: ದರ ಹೆಚ್ಚಳ ಮಾಡಲು ಸಿದ್ಧತೆಏರ್‌ಟೆಲ್, ವೊಡಾಫೋನ್ ಬಳಿಕ ಜಿಯೋ ಸರದಿ: ದರ ಹೆಚ್ಚಳ ಮಾಡಲು ಸಿದ್ಧತೆ

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಭಾರಿ ನಷ್ಟ

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಭಾರಿ ನಷ್ಟ

ಕಳೆದ ತ್ರೈಮಾಸಿಕ ಅವಧಿಗಳಲ್ಲಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಭಾರಿ ಪ್ರಮಾಣದ ನಷ್ಟ ಅನುಭವಿಸಿವೆ. ಇದರ ಜತೆಗೆ ಈ ಕಂಪೆನಿಗಳು ಬಾಕಿ ಉಳಿಸಿಕೊಂಡಿರುವ ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಮೊತ್ತವನ್ನು ಕೂಡ ಸರ್ಕಾರಕ್ಕೆ ಪಾವತಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿರುವುದು ಮತ್ತೊಂದು ಹೊಡೆತ ನೀಡಿದೆ. ಈ ಆದೇಶದಂತೆ ಎರಡೂ ಕಂಪೆನಿಗಳು ಸುಮಾರು 80 ಸಾವಿರ ಕೋಟಿ ರೂ. ಬಾಕಿ ಮೊತ್ತವನ್ನು ಪಾವತಿಸಬೇಕಾಗಿದೆ

ಎಜಿಆರ್ ಭಾರಿ ಮೊತ್ತ ಪಾವತಿಸಬೇಕಿದೆ

ಎಜಿಆರ್ ಭಾರಿ ಮೊತ್ತ ಪಾವತಿಸಬೇಕಿದೆ

ಡಿ. 1ರಿಂದ ಅನ್ವಯವಾಗುವಂತೆ ತನ್ನ ಟಾರಿಫ್ ದರದಲ್ಲಿ ಹೆಚ್ಚಳ ಮಾಡಲಾಗುತ್ತದೆ ಎಂದು ವೊಡಾಫೋನ್ ಐಡಿಯಾ ಭಾನುವಾರ ತಿಳಿಸಿತ್ತು. ಫೋನ್ ಕರೆ, ಡೇಟಾ ಹಾಗೂ ಎಸ್‌ಎಂಎಸ್ ಸೇವೆಗಳಲ್ಲಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ವೊಡಾಫೋನ್ ಐಡಿಯಾ ಸುಮಾರು 44,200 ಕೋಟಿ ರೂ ಎಜಿಆರ್ ಪಾವತಿಸಬೇಕಿದೆ. ಹೀಗಾಗಿ ಈ ಹಣವನ್ನು ಹೊಂದಿಸಲು ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕಲು ಕಂಪೆನಿ ತೀರ್ಮಾನಿಸಿದೆ. ಸುಪ್ರೀಂಕೋರ್ಟ್ ಆದೇಶ ಬಂದ ಬಳಿಕ ವೊಡಾಫೋನ್‌ನ ಷೇರು ಸಂಪೂರ್ಣ ತಳಕಚ್ಚಿದ್ದು, ಶೂನ್ಯಕ್ಕೆ ಕುಸಿದಿದೆ. ಭಾರತದಲ್ಲಿ ವ್ಯವಹಾರ ಮುಂದುವರಿಸುವುದು ಕಷ್ಟವಾಗಲಿದೆ ಎಂದು ವೊಡಾಫೋನ್ ಸಿಇಒ ಹೇಳಿದ್ದರು.

English summary
Telecom operators Bharti Airtel and Vodafone Idea have removed cap from free outgoing calls on other networks under new plans for pre-paid customers that came into effect from December 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X