• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏರ್‌ಟೆಲ್, ವೊಡಾಫೋನ್ ಐಡಿಯಾ ಡೇಟಾ ಯೋಜನೆಗಳಿಗೆ ಟ್ರಾಯ್ ತಡೆ

|
Google Oneindia Kannada News

ನವದೆಹಲಿ, ಜುಲೈ 13: ಟೆಲಿಕಾಂ ನಿಯಂತ್ರಕ ಟ್ರಾಯ್ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದ ಕೆಲವು ಆದ್ಯತೆಯ ಬಳಕೆದಾರರಿಗೆ ವೇಗದ ವೇಗವನ್ನು ನೀಡುವ ನಿರ್ದಿಷ್ಟ ಯೋಜನೆಗಳನ್ನು ತಡೆಹಿಡಿಯುವಂತೆ ಕೇಳಿದೆ. ಇದು ನಿಯಮ ಉಲ್ಲಂಘನೆಯಾಗಿದ್ದು ಇತರ ಚಂದಾದಾರರಿಗೆ ಸೇವೆಗಳ ಗುಣಮಟ್ಟ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಪ್ರಶ್ನಿಸಿದೆ.

ಭಾರ್ತಿ ಏರ್‌ಟೆಲ್ ಟೆಲಿಕಾಂ ಕಂಪನಿಯ ಪ್ಲಾಟಿನಂ ಹಾಗೂ ವೊಡಾಫೋನ್ ಐಡಿಯಾದ ರೆಡ್‌ ಎಕ್ಸ್‌ ಪ್ಲಾನ್‌ಗೆ ತಡೆಹಿಡಿಯುವಂತೆ ಆದೇಶ ನೀಡಿದೆ.

ಭಾರ್ತಿ ಏರ್‌ಟೆಲ್‌ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇಂದ್ರ ಸರ್ಕಾರಭಾರ್ತಿ ಏರ್‌ಟೆಲ್‌ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇಂದ್ರ ಸರ್ಕಾರ

ಭಾರ್ತಿ ಏರ್‌ಟೆಲ್ ಜುಲೈ 6ರಂದು ಹೊಸ ಯೋಜನೆಯನ್ನು ಘೋಷಣೆ ಮಾಡಿತ್ತು. 499 ರುಪಾಯಿ ಹಾಗೂ ಅದಕ್ಕೆ ಮೇಲ್ಪಟ್ಟ ಪ್ರೀಮಿಯಂ ಪೋಸ್ಟ್‌ ಪೇಯ್ಡ್‌ ಗ್ರಾಹಕರಿಗೆ 4G ವೇಗದ ಡೇಟಾ ಹಾಗೂ ಇನ್ನಿತರ ಸೌಲಭ್ಯ ಒದಗಿಸುವುದಾಗಿ ಹೇಳಿತ್ತು.

ಆದರೆ, ಈ ರೀತಿ ಮಾಡುವುದರಿಂದ ಈ ಯೋಜನೆಗಳನ್ನು ಹೊಂದದೆ ಇರುವ ಗ್ರಾಹಕರಿಗೆ ಗುಣಮಟ್ಟದ ಕೊರೊತೆ ಎದುರಿಸಬೇಕಾಗುತ್ತದೆ ಎಂದು ಟ್ರಾಯ್ ಹೇಳಿದೆ.

English summary
The telecom regulator has asked Bharti Airtel and Vodafone idea to put on hold specific plans that promised faster speeds to certain priority users.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X