• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಜಿಯೋ ರೈತ ವಿರೋಧಿಯಲ್ಲ'' ಆರೋಪ ನಿರಾಕರಿಸಿದ ಏರ್ ಟೆಲ್, ವಿಐಎಲ್

|
Google Oneindia Kannada News

ಟೆಲಿಕಾಂ ಆಪರೇಟರ್ ಗಳಾದ ಭಾರ್ತಿ ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ನಿಂದ (VIL) ರಿಲಯನ್ಸ್ ಜಿಯೋ ವಿರುದ್ಧ "ಕೆಟ್ಟ ಹಾಗೂ ವಿಭಜಕ ಪ್ರಚಾರ" ನಡೆಯುತ್ತಿದೆ. ಜಿಯೋದಿಂದ ಏರ್ ಟೆಲ್ ಅಥವಾ ವೊಡಾಫೋನ್ ಐಡಿಯಾ ನೆಟ್ ವರ್ಕ್ ಗೆ ಬದಲಾದಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಜಿಯೋ ಆರೋಪ ಮಾಡಿದೆ. ಆದರೆ, ಆರೋಪವನ್ನು ಭಾರ್ತಿ ಏರ್ ಟೆಲ್ ಹಾಗೂ ವಿಐಎಲ್ ನಿರಾಕರಿಸಿವೆ.

ಭಾರತದಲ್ಲಿನ ದೂರಸಂಪರ್ಕ ನಿಯಂತ್ರಕ ಸಂಸ್ಥೆ 'ಟ್ರಾಯ್'ಗೆ ಈ ಬಗ್ಗೆ ಪತ್ರ ಬರೆದಿದ್ದು, ಈ ಎರಡೂ ಕಂಪೆನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ಮಾಡಲಾಗಿದೆ. ಇಂಥ ನಡವಳಿಕೆಯಿಂದ ಜಿಯೋ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯೇ ಆತಂಕಕ್ಕೆ ಸಿಲುಕಿದಂತೆ ಆಗುತ್ತದೆ ಎಂದು ತಿಳಿಸಲಾಗಿದೆ. ಇನ್ನು ಜಿಯೋದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಭಾರ್ತಿ ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ, ದೂರು "ಆಧಾರರಹಿತ" ಎಂದು ಆರೋಪವನ್ನು ನಿರಾಕರಿಸಿವೆ.

ರೈತರ ಪ್ರತಿಭಟನೆಯಲ್ಲಿ ಸಿಮ್ ಬಹಿಷ್ಕಾರ: ಏರ್ಟೆಲ್, ವಿಐ ವಿರುದ್ಧ ಜಿಯೋ ಆರೋಪರೈತರ ಪ್ರತಿಭಟನೆಯಲ್ಲಿ ಸಿಮ್ ಬಹಿಷ್ಕಾರ: ಏರ್ಟೆಲ್, ವಿಐ ವಿರುದ್ಧ ಜಿಯೋ ಆರೋಪ

ಈ ಹಿಂದೆ ಕೂಡ, ರೈತರ ಪ್ರತಿಭಟನೆಯನ್ನು ಅನುಕೂಲಕ್ಕೆ ಬಳಸಿಕೊಳ್ಳುವ ಭಾರ್ತಿ ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾದ "ಅನೈತಿಕ ಮತ್ತು ಸ್ಪರ್ಧಾ ವಿರೋಧಿ ಮೊಬೈಲ್ ಪೋರ್ಟಬಿಲಿಟಿ ಅಭಿಯಾನ"ದ ಬಗ್ಗೆ ಟ್ರಾಯ್ ಗೆ ಲಿಖಿತ ದೂರನ್ನು ನೀಡಿದ್ದಾಗಿ ರಿಲಯನ್ಸ್ ಜಿಯೋ ತಿಳಿಸಿದೆ.

ಟ್ರಾಯ್ ಗೆ ಪತ್ರ ಬರೆದ ಜಿಯೋ

ಟ್ರಾಯ್ ಗೆ ಪತ್ರ ಬರೆದ ಜಿಯೋ

ಏರ್ ಟೆಲ್ ಮತ್ತು ವಿಐಎಲ್ ತನ್ನ ಸಿಬ್ಬಂದಿ, ಏಜೆಂಟರು ಮತ್ತು ರೀಟೇಲರ್ ಗಳ ಮೂಲಕ ದುಷ್ಟತನದ ಹಾಗೂ ವಿಭಜಕ ಅಭಿಯಾನ ನಡೆಸುತ್ತಿವೆ. ಜಿಯೋದಿಂದ ತಮ್ಮ ಮೊಬೈಲ್ ನೆಟ್ ವರ್ಕ್ ಗೆ ಪೋರ್ಟಬಿಲಿಟಿ ಮಾಡಿಸಿಕೊಂಡರೆ ರೈತರ ಪ್ರತಿಭಟನೆಯನ್ನು ಬೆಂಬಲಿಸಿದಂತಾಗುತ್ತದೆ ಎಂಬ ಪ್ರಚಾರ ನಡೆಸುತ್ತಿವೆ ಎಂದು ಜಿಯೋದ ಪತ್ರದಲ್ಲಿ ತಿಳಿಸಲಾಗಿದೆ.

ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾದ ಹೊಸ ಕೃಷಿ ಕಾನೂನಿನ ವಿರುದ್ಧ ದೆಹಲಿ ಗಡಿಯಲ್ಲಿ ಪಂಜಾಬ್, ಹರ್ಯಾಣ, ಉತ್ತರಪ್ರದೇಶದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಭಾರ್ತಿ ಏರ್ ಟೆಲ್ ಬರೆದಿರುವ ಪತ್ರ

ಭಾರ್ತಿ ಏರ್ ಟೆಲ್ ಬರೆದಿರುವ ಪತ್ರ

ಭಾರ್ತಿ ಏರ್ ಟೆಲ್ ಬರೆದಿರುವ ಪತ್ರದಲ್ಲಿ, ಈ ಆಧಾರರಹಿತವಾದ ಆರೋಪವನ್ನು ನಿರ್ದಿಷ್ಟವಾಗಿ ನಿರಾಕರಿಸುವುದಕ್ಕೆ ಬಯಸುತ್ತೇವೆ. ಕೆಲವು ಪ್ರತಿಸ್ಪರ್ಧಿಗಳು ತಮ್ಮ ಆಧಾರ ರಹಿತವಾದ ಆರೋಪಕ್ಕೆ, ಬೆದರಿಕೆ ತಂತ್ರಕ್ಕೆ, ಯಾವುದೇ ಹಂತಕ್ಕೆ ಹೋಗಲು ಸಿದ್ಧ ಎಂಬುದು ನಮಗೆ ಗೊತ್ತಿದೆ. ನಮ್ಮ ಉದ್ಯಮವನ್ನು ಯಾವಾಗಲೂ ಸನ್ನಡತೆ ಹಾಗೂ ಪಾರದರ್ಶಕವಾಗಿಯೇ ನಡೆಸುತ್ತೇವೆ. ನಾವು ಅದಕ್ಕಾಗಿಯೇ ಹೆಸರಾಗಿದ್ದೇವೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ ಎಂದು ತಿಳಿಸಿದೆ.

ವಿಐಎಲ್ ವಕ್ತಾರ ಮಾತನಾಡಿ, "ನಮ್ಮ ಗೌರವಕ್ಕೆ ಚ್ಯುತಿ ತರುವುದಕ್ಕೆ ಇಂಥ ಆಧಾರರಹಿತ ಆರೋಪ ಮಾಡಲಾಗುತ್ತಿದೆ. ನಮ್ಮ ಬಗ್ಗೆ ಆಡುತ್ತಿರುವ ಇಂಥ ಬೇಜವಾಬ್ದಾರಿ ಮಾತುಗಳನ್ನು ಪ್ರಬಲವಾಗಿ ನಿರಾಕರಿಸುತ್ತೇವೆ," ಎಂದಿದ್ದಾರೆ.

ದೇಶದಾದ್ಯಂತ ಸುಳ್ಳು ಆರೋಪ ಹರಡಿದೆ

ದೇಶದಾದ್ಯಂತ ಸುಳ್ಳು ಆರೋಪ ಹರಡಿದೆ

ಇನ್ನು ಜಿಯೋ ವಿರುದ್ಧದ ಅಭಿಯಾನ ಕೇವಲ ಉತ್ತರದ ರಾಜ್ಯಗಳಿಗೆ ಸೀಮಿತವಾಗಿಲ್ಲ. ಎಂಎನ್ ಪಿ ಮೂಲಕ ಗ್ರಾಹಕರನ್ನು ಪಡೆಯಲು ದೇಶದಾದ್ಯಂತ ಇಂಥ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಜಿಯೋ ಆರೋಪಿಸಿದೆ.

ಏರ್ ಟೆಲ್ ಮತ್ತು ವಿಐಎಲ್ ಅಭಿಯಾನದ ಬಗ್ಗೆ ಸಂದೇಶಗಳನ್ನು ನೋಡಿ, ಜಿಯೋದಿಂದ ದೊಡ್ದ ಸಂಖ್ಯೆಯಲ್ಲಿ ಹೊರ ಹೋಗುವುದಕ್ಕೆ ಗ್ರಾಹಕರು ಮನವಿ ಸಲ್ಲಿಸುತ್ತಲೇ ಇದ್ದಾರೆ ಎಂದು ಜಿಯೋ ಹೇಳಿದೆ. 1999ರ ಟೆಲಿಕಾಂ ದರ ಆದೇಶದ ಅಗತ್ಯಗಳನ್ನು ಏರ್ ಟೆಲ್ ಮತ್ತು ವಿಐಎಲ್ ಉಲ್ಲಂಘಿಸಿವೆ ಎಂದು ಜಿಯೋ ಹೇಳಿದೆ.

"ತಮ್ಮ ಮಾರಾಟ ತಂಡ ಮತ್ತು ಇತರ ಚಾನೆಲ್ ಸಹಭಾಗಿಗಳ ಮೂಲಕ ರಿಲಯನ್ಸ್ ಜಿಯೋ ವಿರುದ್ಧ ಪ್ರಚೋದಿಸುವಂತೆ ಮಾಡಿದಲ್ಲಿ ಅಂಥ ಕಾನೂನುಬಾಹಿರ ಕ್ರಮಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಏಕೆಂದರೆ ನಮ್ಮ ಸಿಬ್ಬಂದಿ ಹಾಗೂ ಪ್ರಮುಖ ನೆಟ್ ವರ್ಕ್ ಹಾಗೂ ಉದ್ಯಮದ ಆಸ್ತಿಗಳು ಅಪಾಯಕ್ಕೆ ಸಿಲುಕಿಕೊಂಡಂತೆ ಅಗುತ್ತದೆ," ಎಂದು ಜಿಯೋ ಹೇಳಿದೆ.

ಹೊಸ ಗ್ರಾಹಕರ ಸಂಖ್ಯೆ

ಹೊಸ ಗ್ರಾಹಕರ ಸಂಖ್ಯೆ

ನಾಲ್ಕು ವರ್ಷಗಳ ನಂತರ ಭಾರ್ತಿ ಏರ್ ಟೆಲ್ ನ ಹೊಸ ಗ್ರಾಹಕರ ಸಂಖ್ಯೆಯು ಸೆಪ್ಟೆಂಬರ್ ನಲ್ಲಿ ಹೆಚ್ಚಳವಾಗಿದೆ. ಆದರೂ 2016ರ ಸೆಪ್ಟೆಂಬರ್ ನಲ್ಲಿ ಆರಂಭವಾದಾಗಿನಿಂದ ಇಲ್ಲಿಯ ತನಕ ಪ್ರತಿ ತಿಂಗಳ ಗ್ರಾಹಕರ ಸೇರ್ಪಡೆಯಲ್ಲಿ ಜಿಯೋ ಮುಂಚೂಣಿಯಲ್ಲಿದೆ. ವಾಣಿಜ್ಯವಾಗಿ ಕಾರ್ಯ ನಿರ್ವಹಣೆ ಆರಂಭಿಸಿದ ಮೇಲೆ ಜಿಯೋ 15.97 ಮಿಲಿಯನ್ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ.

ಭಾರ್ತಿ ಏರ್ ಟೆಲ್ ಗ್ರಾಹಕರ ಸಂಖ್ಯೆ ಬೆಳವಣಿಗೆ ಸೆಪ್ಟೆಂಬರ್ 2020ರಲ್ಲಿ ನಿವ್ವಳವಾಗಿ 3.77 ಮಿಲಿಯನ್ ಆಗಿದೆ. ಆ ನಂತರ ರಿಲಯನ್ಸ್ ಜಿಯೋ 1.46 ಮಿಲಿಯನ್ ಮತ್ತು BSNLಗೆ 78,454 ಹೊಸ ಗ್ರಾಹಕರು ಸೇರ್ಪಡೆ ಆಗಿದ್ದಾರೆ.

English summary
Telecom operator Reliance Jio has alleged that industry peers Bharti Airtel and Vodafone Idea Ltd (VIL) are running "vicious and divisive campaign" against it. Airtel, VIL refute charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X