• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏರ್‌ಟೆಲ್ ಅನ್‌ಲಿಮಿಟೆಡ್ ಬ್ರಾಡ್‌ಬ್ಯಾಂಡ್ ಪ್ಲಾನ್‌ ಘೋಷಣೆ: ಬೆಲೆ, ವೇಗದ ಮಾಹಿತಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 07: ಜಿಯೊ ಕಂಪನಿಯು ಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದವರಿಗೆ ಕಡಿಮೆ ದರಕ್ಕೆ ಹೈಸ್ಪೀಡ್ ಇಂಟರ್ನೆಟ್ ಯೋಜನೆಗಳನ್ನು ಘೋಷಿಸಿದ ಬೆನಲ್ಲೇ, ಭಾರ್ತಿ ಏರ್‌ಟೆಲ್ ಕೂಡ ತನ್ನ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಅಪ್‌ಗ್ರೇಡ್‌ ಮಾಡಿದ್ದು, ಹೊಸ ಯೋಜನೆಗಳನ್ನು ಪ್ರಕಟಿಸಿದೆ.

499 ರೂಪಾಯಿ ಬ್ರಾಡ್‌ಬ್ಯಾಂಡ್ ಯೋಜನೆಯು ಅನ್‌ಲಿಮಿಟಿಡ್ ಹೈಸ್ಪೀಡ್‌ ಇಂಟರ್ನೆಟ್ ಅವಕಾಶವನ್ನು ಒದಗಿಸಿದೆ.ಇದರ ಜೊತೆಗೆ ಎಕ್ಸ್‌ಸ್ಟ್ರೀಮ್ ಆಂಡ್ರಾಯ್ಡ್ 4 ಕೆ ಟಿವಿ ಬಾಕ್ಸ್ ಅನ್ನು ಅದರ ಎಲ್ಲಾ ಎಕ್ಸ್‌ಸ್ಟ್ರೀಮ್ ಫೈಬರ್ ಯೋಜನೆಗಳೊಂದಿಗೆ ಒದಗಿಸುತ್ತದೆ.

ಏರ್‌ಟೆಲ್ ಉಚಿತ 4ಜಿ ಡೇಟಾ: ಸ್ನ್ಯಾಕ್ಸ್‌ ಜೊತೆಗೆ ಫ್ರೀ ಡೇಟಾ ಪಡೆಯಿರಿಏರ್‌ಟೆಲ್ ಉಚಿತ 4ಜಿ ಡೇಟಾ: ಸ್ನ್ಯಾಕ್ಸ್‌ ಜೊತೆಗೆ ಫ್ರೀ ಡೇಟಾ ಪಡೆಯಿರಿ

ಇತ್ತೀಚಿನ ಪರಿಷ್ಕರಣೆಯ ಪ್ರಕಾರ, ಏರ್‌ಟೆಲ್ ತನ್ನ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಐದು ವಿಭಿನ್ನ ಮಾಸಿಕ ಯೋಜನೆಗಳ ಮೂಲಕ ನೀಡಲು ಪ್ರಾರಂಭಿಸಿದೆ. 499 ರೂ. ಯೋಜನೆ ಸರಣಿಯಲ್ಲಿ ಅತ್ಯಂತ ಕಡಿಮೆಯದಾಗಿದ್ದು, 40Mbps ವೇಗವನ್ನು ಹೊಂದಿದೆ. ರೂ. 799, ರೂ. 999, ರೂ. 1,499, ಮತ್ತು ರೂ. 3,999 ಯೋಜನೆಗಳು ಕ್ರಮವಾಗಿ 100Mbps, 200Mbps, 300Mbps, ಮತ್ತು 1Gbps ವೇಗವನ್ನು ಹೊಂದಿವೆ. ಎಲ್ಲಾ ಹೊಸ ಯೋಜನೆಗಳು ಅನ್‌ಲಿಮಿಟೆಡ್‌ ಇಂಟರ್‌ನೆಟ್ ವೇಗವನ್ನು ಹೊಂದಿದೆ.

ಹೊಸ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಗಳು ತಮ್ಮ ಸಂಪರ್ಕದೊಂದಿಗೆ ಲ್ಯಾಂಡ್‌ಲೈನ್ ಫೋನ್ ಬಳಸುತ್ತಿರುವ ಗ್ರಾಹಕರಿಗೆ ಅನ್‌ಲಿಮಿಟೆಡ್ ಧ್ವನಿ ಕರೆ ಪ್ರಯೋಜನಗಳನ್ನು ಸಹ ನೀಡುತ್ತವೆ. ಈ ಯೋಜನೆಗಳಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರವೇಶವೂ ಸೇರಿದೆ. ಇದಲ್ಲದೆ, ರೂ. 999, ರೂ. 1,499, ಮತ್ತು ರೂ. 3,999 ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಜೀ5 ಸೇವೆಗಳನ್ನು ಹೊಂದಿದೆ.

English summary
Bharti Airtel has upgraded its Xstream Fiber broadband service with new plans starting at as low as Rs. 499 a month and all offers “unlimited” high-speed Internet access
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X