ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ 52ರ ಯೋಜನೆ ವಿರುದ್ಧವಾಗಿ ಏರ್ ಟೆಲ್ 47ರ ಪ್ಯಾಕ್

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 20: ಕಡಿಮೆ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ದರ ಸಮರದಲ್ಲಿ ಜಿಯೋ, ವೋಡಾಫೋನ್ ವಿರುದ್ಧ ಏರ್ ಟೆಲ್ 47 ರುಪಾಯಿಗಳ ಪ್ಯಾಕೇಜ್ ಬಿಡುಗಡೆ ಮಾಡಿದೆ.

ಈ 47 ರೂಪಾಯಿಗಳ ಯೋಜನೆಯು ಜಿಯೋದ 52 ರೂಪಾಯಿ ಹಾಗೂ ವೋಡಾಫೋನ್ 47 ರೂಪಾಯಿ ಯೋಜನೆ ಪೈಪೋಟಿ ನೀಡಲಿದೆ.

ಏರ್ ಟೆಲ್ 399ರುಗಳಿಗೆ ನೀಡಲಿದೆ ಹೆಚ್ಚುವರಿ ಡೇಟಾ!ಏರ್ ಟೆಲ್ 399ರುಗಳಿಗೆ ನೀಡಲಿದೆ ಹೆಚ್ಚುವರಿ ಡೇಟಾ!

ಏರ್ ಟೆಲ್ ನ 47ರುಪಾಯಿ ಯೋಜನೆಯು 28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿದೆ. 150 ನಿಮಿಷಗಳ ಸ್ಥಳೀಯ, ಎಸ್ಟಿಡಿ ಹಾಗೂ ರಾಷ್ಟ್ರೀಯ ರೋಮಿಂಗ್ ಕಾಲ್ಸ್ ಲಭ್ಯವಿದೆ. 50 ಎಸ್ ಎಂ ಎಸ್(ಸ್ಥಳೀಯ ಪ್ಲಸ್ ಎಸ್ಟಿಡಿ) ಹಾಗೂ 500 ಎಂಬಿ 2ಜಿ/3ಜಿ /4ಜಿ ಡೇಟಾ ಸಿಗಲಿದೆ

Airtel Rs. 47 prepaid recharge comes with call, data benefits for 28 days

ವೋಡಾಫೋನ್ ನ 47ರುಪಾಯಿ ಯೋಜನೆಯಲ್ಲಿ 125 ನಿಮಿಷಗಳ ಸ್ಥಳೀಯ ಪ್ಲಸ್ ಎಸ್ಟಿಡಿ ಕಾಲ್ಸ್ ಉಚಿತವಾಗಿ ಸಿಗಲಿದೆ. 500 ಎಂಬಿ 2ಜಿ/3ಜಿ /4ಜಿ ಡೇಟಾ ಲಭ್ಯವಿದೆ. ಇದು ಕೂಡಾ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಹೊಸ ಪ್ರೀಪೇಯ್ಡ್ ಯೋಜನೆ ಹೊರ ತಂದ ಏರ್ಟೆಲ್! ಹೊಸ ಪ್ರೀಪೇಯ್ಡ್ ಯೋಜನೆ ಹೊರ ತಂದ ಏರ್ಟೆಲ್!

ಜಿಯೋ ಯೊಜನೆಯಲ್ಲಿ 1.05ಜಿಬಿ ಡೇಟಾ, 70 ಉಚಿತ ಎಸ್ಎಂಎಸ್, ಅನಿಯಮಿತ ವಾಯ್ಸ್ ಕರೆಗಳಿವೆ. 7 ದಿನಗಳ ವ್ಯಾಲಿಡಿಟಿ ಮಾತ್ರ ಹೊಂದಿರುವುದು ವಿಶೇಷ.

English summary
Airtel has introduced an Rs. 47 prepaid recharge pack for its customers that offers free calls, SMS and data benefits. Airtel Rs. 47 prepaid recharge has a validity of one month or 28 days and directly competes with Vodafone's Rs. 47 prepaid recharge and Reliance Jio's Rs. 52 sachet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X