• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಯೋ ವಿರುದ್ಧ 419 ರುಗಳ ಏರ್ ಟೆಲ್ ಯೋಜನೆ ಪ್ರಕಟ

|
Google Oneindia Kannada News

ಬೆಂಗಳೂರು, ನವೆಂಬರ್ 21: ರಿಲಯನ್ಸ್ ಜಿಯೋ, ವೋಡಾಫೋನ್ ಗೆ ನೇರ ಪೈಪೋಟಿ ನೀಡಲು ಟೆಲಿಕಾಂ ಕ್ಷೇತ್ರದ ಎರಡನೇ ಅತಿದೊಡ್ಡ ಸಂಸ್ಥೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು ಪ್ರಕಟಿಸಿದೆ.

ಇತ್ತೀಚೆಗೆ 6 ಹೊಸ ಎಂಟ್ರಿ ಲೆವಲ್ ಪ್ಲ್ಯಾನ್ ಘೋಷಿಸಿತ್ತು. ನಂತರ 5 ಹೊಸ ಯೋಜನೆಗಳನ್ನು ಪ್ರಕಟಿಸಿದ್ದು, ಹೊಸ ಗ್ರಾಹಕರನ್ನು ಸೆಳೆಯಲು ದೀಪಾವಳಿ ಸಂದರ್ಭದಲ್ಲಿ ಯತ್ನಿಸಿತ್ತು. ಈಗ 419 ರು ಗಳ ಹೊಸ ರೀಚಾರ್ಜ್ ಯೋಜನೆ ಪ್ರಕಟಿಸಿದೆ.

ಇದಲ್ಲದೆ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ 199, 399, 448 ಹಾಗೂ 509 ರೀಚಾರ್ಜ್ ಪ್ಯಾಕ್ ಗಳನ್ನು ಏರ್ ಟೆಲ್ ಹೊಂದಿದೆ. ಬಹುತೇಕ ಎಲ್ಲವೂ 28 ದಿನಗಳ ವ್ಯಾಲಿಡಿಟಿ ಹೊಂದಿವೆ. ರೀಚಾರ್ಚ್ ಯೋಜನೆ 178ರು ಪ್ರೀಪೇಯ್ಡ್ ಯೋಜನೆ ಕೂಡಾ ಜನಪ್ರಿಯಗೊಂಡಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ಕರೆ(ಸ್ಥಳೀಯ, ರಾಷ್ಟ್ರೀಯ), ಅನಿಯಮಿತ ರೋಮಿಂಗ್ ಸೌಲಭ್ಯವೂ ಇದೆ. 100 ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಉಚಿತವಾಗಿ ಸಿಗಲಿದೆ. 1ಜಿಬಿ 3ಜಿ/4ಜಿ ಡೇಟಾ ಪ್ರತಿ ದಿನ ಪಡೆಯಬಹುದು.

ಹೊಸ ಎಂಟ್ರಿ ಲೆವಲ್ ಯೋಜನೆ ಘೋಷಿಸಿದ ಏರ್ ಟೆಲ್ಹೊಸ ಎಂಟ್ರಿ ಲೆವಲ್ ಯೋಜನೆ ಘೋಷಿಸಿದ ಏರ್ ಟೆಲ್

ಜಿಯೋನ 399 ರೂ. ರೀಚಾರ್ಜ್​ ಆಫರ್​ಗೆ ಸ್ಪರ್ಧೆಯೊಡ್ಡಲು ಏರ್​ಟೆಲ್​ ಈ ಆಫರ್​ ನೀಡುತ್ತಿದೆ. ಜಿಯೊನ ಈ ಆಫರ್​ನಲ್ಲಿ ಬಳಕೆದಾರರು ಅನಿಮಿಯತ ಕರೆ, ದಿನಕ್ಕೆ 1.5 ಜಿಬಿ ಹೈ ಸ್ಪೀಡ್​ ಡೇಟಾ ಜತೆ 100 ಎಸ್ಸೆಮ್ಮೆಸ್​ ಮಾಡಬಹುದಾಗಿದೆ. ಈ ಯೋಜನೆಯ ವ್ಯಾಲಿಡಿಟಿ 70 ದಿನಗಳು.

ಜಿಯೋನ 399 ರೂ. ರೀಚಾರ್ಜ್

ಜಿಯೋನ 399 ರೂ. ರೀಚಾರ್ಜ್

ಜಿಯೋನ 399 ರೂ. ರೀಚಾರ್ಜ್ ಯೋಜನೆಯು 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, 84 ಜಿಬಿ ಡೇಟಾ ಸಿಗಲಿದೆ. 1.5 ಜಿಬಿ ಹೈ ಸ್ಪೀಡ್​ ಡೇಟಾ ಜತೆ 100 ಎಸ್ಸೆಮ್ಮೆಸ್, ಉಚಿತ ವಾಯ್ಸ್ ಕಾಲ್ , ಜಿಯೋ ಆಪ್ಸ್ ಸಿಗಲಿದೆ.

 419 ರುಗಳ ಏರ್ ಟೆಲ್ ಯೋಜನೆ

419 ರುಗಳ ಏರ್ ಟೆಲ್ ಯೋಜನೆ

ಏರ್ ಟೆಲ್ 419ರು ಪ್ರೀಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 1.4 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಸ್ಥಳೀಯ/ಎಸ್ಟಿಡಿ ರಾಷ್ಟ್ರೀಯ ಹಾಗೂ ರೋಮಿಂಗ್ ಕಾಲ್ಸ್ ಸಿಗಲಿದೆ. ಈ ಯೋಜನೆ 75ದಿನಗಳ ವ್ಯಾಲಿಡಿಟಿ ಹೊಂದಿದ್ದು, 105ಜಿಬಿ ಡೇಟಾ ಪಡೆಯಬಹುದು.

ಏರ್ ಟೆಲ್ 229 ರು ಯೋಜನೆ

ಏರ್ ಟೆಲ್ 229 ರು ಯೋಜನೆ

ಮೊದಲ ಬಾರಿಯ ರೀಚಾರ್ಚ್ 178ರು ಪ್ರೀಪೇಯ್ಡ್ ಯೋಜನೆಯಂತೆ 229ರು ಯೋಜನೆಯೂ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ಕರೆ(ಸ್ಥಳೀಯ, ರಾಷ್ಟ್ರೀಯ), ಅನಿಯಮಿತ ರೋಮಿಂಗ್ ಸೌಲಭ್ಯವೂ ಇದೆ. 100 ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಆದರೆ, ಡೇಟಾ ಹೆಚ್ಚುವರಿಯಾಗಿ ಪಡೆಯಬಹುದು. 1.4 ಜಿಬಿ 3ಜಿ/4ಜಿ ಡೇಟಾ ಪ್ರತಿ ದಿನ ಪಡೆಯಬಹುದು.

ಏರ್ ಟೆಲ್ 344 ರು ಯೋಜನೆ

ಏರ್ ಟೆಲ್ 344 ರು ಯೋಜನೆ

ಮೊದಲ ಬಾರಿಯ ರೀಚಾರ್ಚ್ ಯೋಜನೆ 178ರು ಹಾಗೂ 229ರು ಪ್ರೀಪೇಯ್ಡ್ ಯೋಜನೆಯಂತೆ 344ರು ಯೋಜನೆ ಕೂಡಾ, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ಕರೆ(ಸ್ಥಳೀಯ, ರಾಷ್ಟ್ರೀಯ), ಅನಿಯಮಿತ ರೋಮಿಂಗ್ ಸೌಲಭ್ಯವೂ ಇದೆ. 100 ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಆದರೆ, ಹೆಚ್ಚುವರಿ ಡೇಟಾ ಸಿಗಲಿದ್ದು, 2ಜಿಬಿ 3ಜಿ/4ಜಿ ಡೇಟಾ ಪ್ರತಿ ದಿನ ಪಡೆಯಬಹುದು.

ಏರ್ ಟೆಲ್ 559 ರು ಹಾಗೂ 495 ರು ಯೋಜನೆ

ಏರ್ ಟೆಲ್ 559 ರು ಹಾಗೂ 495 ರು ಯೋಜನೆ

ಮೊದಲ ಬಾರಿಯ ರೀಚಾರ್ಚ್ ಯೋಜನೆ 178, 229 ಹಾಗೂ 334ರು ಪ್ರೀಪೇಯ್ಡ್ ಯೋಜನೆಗಿಂತ ಅಧಿಕ ಅವಧಿ ವ್ಯಾಲಿಡಿಟಿ ಹಾಗೂ ಕಡಿಮೆ ಡೇಟಾ ಈ ಎರಡು ಯೋಜನೆಗಳಲ್ಲಿ ಸಿಗಲಿದೆ. 559 ರು ಯೋಜನೆ 90 ದಿನಗಳ ವ್ಯಾಲಿಡಿಟಿ ಹೊಂದಿದ್ದರೆ, 495 ರು ಯೋಜನೆ 84ದಿನಗಳ ವ್ಯಾಲಿಡಿಟಿ ಹೊಂದಿದೆ. ಅನಿಯಮಿತ ಕರೆ(ಸ್ಥಳೀಯ, ರಾಷ್ಟ್ರೀಯ), ಅನಿಯಮಿತ ರೋಮಿಂಗ್ ಸೌಲಭ್ಯವೂ ಇದೆ. 100 ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಉಚಿತವಾಗಿ ಸಿಗಲಿದೆ. 1.4 ಜಿಬಿ 3ಜಿ/4ಜಿ ಡೇಟಾ ಪ್ರತಿ ದಿನ ಪಡೆಯಬಹುದು

English summary
Airtel recently introduced a new Rs 419 recharge plan for its prepaid subscribers. The plan offers 1.4GB of data per day, unlimited local/STD and national roaming calls. The plan has a validity of 75 days thus offering a total of 105GB of data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X